ರವಿವಾರ ದಿ. 11 ರಂದು ಮಸಗುಪ್ಪಿಗೆ ನಳೀನಕುಮಾರ ಕಟೀಲ
ಮೂಡಲಗಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ರವಿವಾರ ದಿ. 11 ರಂದು ಸಾಂಯಕಾಲ 4 ಗಂಟೆಗೆ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮಿದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಭೆ ಜರುಗಲಿದೆ.. ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿಯವರ ಪ್ರಚಾರಾರ್ಥವಾಗಿ ಆಗಮಿಸಲಿರುವ ನಳೀನಕುಮಾರ ಕಟೀಲ ಅವರು ಪ್ರಚಾರ ಭಾಷಣ ಮಾಡುವರು. ಈ ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ ಕತ್ತಿ, ಸಂಸದ ಈರಣ್ಣ ಕಡಾಡಿ, ಬಿಜೆಪಿ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಆಗಮಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹದೇವ ಶೆಕ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News