ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದ ದೃವತಾರೆ ಡಾ. ಅಂಬೇಡ್ಕರ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದ ದೃವತಾರೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಬುಧವಾರ (ಏ.14) ರಂದು ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ 130 ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸ್ವಾತಂತ್ರ, ಸಮಾನತೆ ಮತ್ತು ಸೋದರತೆ ಪರಿಕಲ್ಪನೆ ಆಧರಿಸಿ ಹಿಂದೂ ಸಮಾಜ ಮರು ನಿರ್ಮಾಣವಾಗಬೇಕೆಂದು ನಂಬಿ ಅದರ ಅನುಷ್ಠಾನಕ್ಕಾಗಿ ಹೋರಾಡಿದ ಧೀಮಂತ ಚೇತನ ಎಂದರು.
ಮಾನವ ಜನಾಂಗ ಶೋಷಣೆಯಿಂದ ವಿಮೋಚನೆಗೊಂಡು ಸುಖಿ ಜೀವನ ನಡೆಸಬೇಕೆಂಬ ಅವರ ಆಶೆಯಾಗಿತ್ತು. ಪ್ರಜಾಪ್ರಭುತ್ವವು ಸಪಲವಾಗಬೇಕಾದರೆ ಸಮಾಜದಲ್ಲಿ ಕಣ್ಣುಕುಕ್ಕುವ ಅಸಮಾನತೆ ಇರಕೂಡದು, ಪ್ರಜಾಪ್ರಭುತ್ವದ ಯಶ್ವಸಿಗೆ ಸಮಾನತೆ ಅನಿವಾರ್ಯ ಎಂದು ಅಂಬೇಡ್ಕರ ಅವರು ಹೇಳಿದ್ದಾರೆ ಎಂದರು.
ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಡಾಡಿ, ಜಿಲ್ಲಾ ಬಿಜೆಪಿ ಮಾಜಿ ಕೋಶಾಧ್ಯಕ್ಷ ಪರಪ್ಪ ಗಿರೆಣ್ಣವರ, ಯುವ ಮೋರ್ಚಾ ಮದನ ದಾನನ್ನವರ, ಎಂ. ಟಿ. ಪಾಟೀಲ, ಮಲ್ಲಪ್ಪ ಖಾನಗೌಡರ, ಹಣಮಂತ ಕಲಕುಂಟ್ರಿ, ಅಪ್ಪಣ್ಣ ಬಾಗೇವಾಡಿ, ಕೆಂಪಣ್ಣ ಕೌಜಲಗಿ, ಸಿದ್ದು ಬೆಳವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.