ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.
ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಬದುಕು, ಬರಹದ ಕುರಿತು ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಡಾ.ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚಣೆ ನೆರವೇರಿಸಿದ ಬಳಿಕ ಸಿಹಿ ವಿತರಿಸಿದರು.
ಬಸವರಾಜ ಪಣದಿ, ಸುರೇಶ ಬಾಣಸಿ, ಶಿವಾನಂದ ಐದುಡ್ಡಿ, ವಿಠಲ ಚಂದರಗಿ, ಬಸವರಾಜ ದೇಯಣ್ಣವರ, ಹನುಮಂತ ಆನೆಗುಂದಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.
