ಬೆಟಗೇರಿ: ಸಮೀಪದ ಮಮದಾಪೂರ ಶ್ರೀ ಮೌನಮಲ್ಲಿಕಾರ್ಜುನ ಶಿವಯೋಗಿಗಳ ಪೂರ್ವಾಶ್ರಮದ ತಾಯಿಯವರಾದ ಶತಾಯುಷಿ, ಮಾತೋಶ್ರೀ ದಿ.ತಾಯಮ್ಮ ಭೀಮರಾಯಪ್ಪ ಕಮತ ಅವರ ಶೃದ್ಧಾಂಜಲಿ ಸಭೆ ಮಮದಾಪೂರದ ಶ್ರೀಮಠದಲ್ಲಿ ರವಿವಾರ ಏ.18ರಂದು ಮುಂಜಾನೆ 11 ಗಂಟೆಗೆ ನಡೆಯಲಿದೆ.
ಶಿರಹಟ್ಟಿಯ ಶ್ರೀ.ನಿ.ಜ.ಫಕೀರಸಿದ್ಧರಾಮ ಮಹಾಸ್ವಾಮಿಜಿ ಸಾನಿಧ್ಯ ಹಾಗೂ ನಾಡಿನ ಹರ, ಗುರು, ಚರಮೂರ್ತಿಗಳು ಸಮ್ಮುಖ ವಹಿಸಲಿದ್ದಾರೆ ಎಂದು ಸ್ಥಳೀಯ ಶ್ರೀ ಮೌನಮಲ್ಲಿಕಾರ್ಜುನ ಮಠದ ಸದ್ಬಕ್ತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
