ರಡ್ಡಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಸೋನವಾಲ್ಕರ ಆಯ್ಕೆ
ಮೂಡಲಗಿ: ಪಟ್ಟಣದ ಹಿರಿಯರು ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಖಜಾಂಚಿಯಾದ ಸುಭಾಸ ರಾವಜೇಪ್ಪಾ ಸೋನವಾಲ್ಕರ ಅವರು ಧಾರವಾಡ ದಿ.ರಡ್ಡಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಬ್ಯಾಂಕಿನ ನಿರ್ದೇಶಕ ಓರ್ವರು ನಿಧನರಾದ ಪ್ರಯುಕ್ತ ತೇರವಾದ ಸ್ಥಾನಕ್ಕೆ ಎ.24ರಂದು ಜರುಗಲಿರುವ ಚುನಾವಣೆಯಲ್ಲಿ ಎ.18 ರಂದು ನಾಮ ಪತ್ರ ಹಿಂದೆ ಪಡೆಯುವ ಕೊನೆಯ ದಿನವಾದ ಎಸ್.ಆರ್. ಸೋನವಾಲ್ಕರ ಅವರನ್ನು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ.ಪಾಟೀಲ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಬ್ಯಾಂಕಿನ ಅಧ್ಯಕ್ಷ ಕೆ.ಎಲ್.ಪಾಟೀಲ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅವಿರೋಧವಾಗಿ ದಿ.ರಡ್ಡಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಆರ್.ಸೋನವಾಲ್ಕರ ಅವರನ್ನು ಬ್ಯಾಂಕಿನ ಅಧ್ಯಕ್ಷ ಕೆ.ಎಲ್.ಪಾಟೀಲ ಮತ್ತು ನಿರ್ದೇಶಕರು ಹಾಗೂ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಸತ್ಕರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.