Breaking News
Home / Recent Posts / ದನಕರುಗಳಿಗೆ ಅಗತ್ಯ ಬೇಕಾಗುವ ಮೇವನ್ನು ಪೂರೈಸಿಕೊಂಡು ಉತ್ಪಾದನೆಯ ಜೊತೆ ಆರ್ಥಿಕವಾಗಿ ಸಬಲರಾಗಬೇಕು- ಮಲ್ಲಪ್ಪ ಪಾಟೀಲ

ದನಕರುಗಳಿಗೆ ಅಗತ್ಯ ಬೇಕಾಗುವ ಮೇವನ್ನು ಪೂರೈಸಿಕೊಂಡು ಉತ್ಪಾದನೆಯ ಜೊತೆ ಆರ್ಥಿಕವಾಗಿ ಸಬಲರಾಗಬೇಕು- ಮಲ್ಲಪ್ಪ ಪಾಟೀಲ

Spread the love

ಗೋಕಾಕ : ದನಕರುಗಳಿಗೆ ಅಗತ್ಯ ಬೇಕಾಗುವ ಮೇವನ್ನು ಪೂರೈಸಿಕೊಂಡು ಉತ್ಪಾದನೆಯ ಜೊತೆ ಆರ್ಥಿಕವಾಗಿ ಸಬಲರಾಗಬೇಕು. ಕೆ.ಎಮ್.ಎಫ್‍ದಿಂದ ಕೊಡಲ್ಪಡುವ ಬೀಜಗಳು ಸುಧಾರಿತವಾದ್ದು, ಕೃಷಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ ಹೇಳಿದರು.


ಅವರು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಎನ್.ಎಸ್.ಎಫ್ ಅತಿಥಿ ಕಛೇರಿಯಲ್ಲಿ ಜರುಗಿದ ಕೆ.ಮ್.ಎಫ್ ದಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ಹಾಲು ಪೂರೈಸುತ್ತಿರುವ ರೈತರಿಗೆ ಉಚಿತ ಮೇವಿನ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೈನೋದ್ಯಮ ಬೆಳೆಯಬೇಕಾದರೆ ಮೇವಿನ ಅವಶ್ಯಕತೆ ಇದೆ. ಸುಧಾರಿತ ಬೀಜಗಳಿಂದ ಕಡಿಮೆ ಅವದಿಯಲ್ಲಿ ಹೆಚ್ಚಿನ ಮೇವನ್ನು ಪಡೆಯಬಹುದು. ಕೆ.ಎಮ್.ಎಫ್ ಅಧ್ಯಕ್ಷರು, ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಕೃಷಿಕ, ಕಾರ್ಮಿಕರ ಪರ ಕಾಳಜಿ ನೀಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಒಕ್ಕೂಟಕ್ಕೆ ಹಾಲು ಪೂರೈಸುತ್ತಿರುವ ಮೃತಪಟ್ಟ ಕುಟುಂಬಸ್ಥರಿಗೆ ತಲಾ ಹತ್ತು ಸಾವಿರ ರೂ. ಗಳ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ವಿಸ್ತರಣಾಧಿಕಾರಿ ಎಸ್.ಬಿ ಕರಬನ್ನವರ, ಆರ್ ಎಮ್ ತಳವಾರ, ಲಕ್ಕಪ್ಪ ಲೋಕುರ ಹಾಗೂ ಒಕ್ಕೂಟದ ಸದಸ್ಯರು ಕೃಷಿಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ