ಮಾಸ್ಕ್ ವಿತರಿಸಿ ಮದುವೆ ವಾರ್ಷಿಕೋತ್ಸವ ಆಚರಣೆ
ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಅವರು ತಮ್ಮ 23ನೇ ಮದುವೆ ವಾರ್ಷಿಕೋತ್ಸವವನ್ನು ಕೊರೊನಾ ಸೇನಾನಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸುವ ಮೂಲಕ ಆಚರಿಸಿಕೊಂಡರು.
ಪುರಸಭೆಯ ಮುಖ್ಯ ಎಂಜಿನಿಯರ್ ತಿರುಪತಿ ಎಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಪುಲಕೇಶ ಸೋನವಾಲಕರ ಅವರ ಸಾಮಾಜಿಕ ಕಾಳಜಿಯು ಇತರರಿಗೆ ಮಾದರಿಯಾಗಿದೆ’ ಎಂದರು.
ಪುರಸಭೆಯಲ್ಲಿ ಪೌರಕಾರ್ಮಿಕರು, ಸಿಬ್ಬಂದಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಪೊಲೀಸ್ ಠಾಣೆಯಲ್ಲಿ ಎಲ್ಲ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಒಟ್ಟು 300ಕ್ಕೂ ಅಧಿಕ ಸಂಖ್ಯೆಯ ಕೊರೊನಾ ಸೇನಾನಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಿದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಸಿ,ಬಿ. ಪಾಟೀಲ, ಪುರಸಭೆ ವ್ಯವಸ್ಥಾಪಕ ಎಂ.ಎಸ್. ಪಾಟೀಲ, ಪಾಂಡು ಬಂಗೆನ್ನವರ, ಸಹಾಯಕ ಆರೋಗ್ಯ ನಿರೀಕ್ಷಕ ಬೋವಿ, ರಮೇಶ ಆಲಗೂರ, ಲಯನ್ಸ್ ಕ್ಲಬ್‍ದ ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಮಲ್ಲಿನಾಥ ಶೆಟ್ಟಿ, ಮಹಾಂತೇಶ ಹೊಸೂರ, ಡಾ. ಎಸ್.ಎಸ್. ಪಾಟೀಲ, ಶ್ರೀಶೈಲ್ ಲೋಕನ್ನವರ, ಸುಪ್ರೀತ ಸೋನವಾಲಕರ ಇದ್ದರು.