Breaking News
Home / Recent Posts / ಮೂಡಲಗಿ ಪಟ್ಟಣದಲ್ಲಿ ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್..! ಕೊರೋನಾ 2ನೇ ಅಲೆ ತಡೆಗಟ್ಟಲು ವಿಫಲವಾದ ತಾಲೂಕಾಡಳಿತ | ಎಚ್ಚೆತ್ತುಕೊಳ್ಳದ ಮೂಡಲಗಿ ತಾಲೂಕಿನ ಜನತೆ

ಮೂಡಲಗಿ ಪಟ್ಟಣದಲ್ಲಿ ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್..! ಕೊರೋನಾ 2ನೇ ಅಲೆ ತಡೆಗಟ್ಟಲು ವಿಫಲವಾದ ತಾಲೂಕಾಡಳಿತ | ಎಚ್ಚೆತ್ತುಕೊಳ್ಳದ ಮೂಡಲಗಿ ತಾಲೂಕಿನ ಜನತೆ

Spread the love

ಮೂಡಲಗಿ ಪಟ್ಟಣದಲ್ಲಿ ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್..!

ಕೊರೋನಾ 2ನೇ ಅಲೆ ತಡೆಗಟ್ಟಲು ವಿಫಲವಾದ ತಾಲೂಕಾಡಳಿತ | ಎಚ್ಚೆತ್ತುಕೊಳ್ಳದ ಮೂಡಲಗಿ ತಾಲೂಕಿನ ಜನತೆ

ಮೂಡಲಗಿ: ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೋರಿ ಮೂಡಲಗಿ ಪಟ್ಟಣದ ಜನತೆ ಬೇಕಾಬಿಟ್ಟಿಯಾಗಿ ತಿರುಗುತ್ತಿದ್ದಾರೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಧಾರಣೆ ಸರಿಯಾಗಿಲ್ಲದೆ ಭಂಡತನದಿoದ ಮನೆಯಿಂದ ಆಚೆ ಬರುತ್ತಿದ್ದು ಇದರಿಂದ ಮೂಡಲಗಿ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಗಗನಕ್ಕೆರುತ್ತಿದೆ.

ಗುರುವಾರ ಮುಂಜಾನೆ ಪಟ್ಟಣದಲ್ಲಿ ಪ್ರತಕರ್ತರ ಕ್ಯಾಮೆರಾ ಕಣ್ಣಿಗೆ ಸೇರೆಯಾದ ಕೊರೋನಾ ಎರಡನೇ ಅಲೆ ತನ್ನ ಕದಂಬ ಬಾಹುಗಳನ್ನು ಚಾಚಿ ನಿರ್ಲಕ್ಷದಿಂದ ತಿರುಗುತ್ತಿರುವ ಜನರನ್ನು ಅಪ್ಪಿಕೊಳ್ಳುವಂತ್ತಿತು. ದಿನಸಿ ವಸ್ತುಗಳ ಖರೀದಿಗೆ ಧಾವಿಸಿದ ಪಟ್ಟಣದ ಜನತೆ ಕೊರೋನಾ ವೈರಸ್‌ಗೆ ಆಹ್ವಾನ ನೀಡುವಂತೆ ನಿಯಮಗಳನ್ನು ಮರೆತ್ತು ಖರೀದಿ ಮಾಡುತ್ತಿದ್ದರು ಕೂಡಾ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಪುರಸಭೆ ಅಧಿಕಾರಿಗಳು ಮಾತ್ರ ಜನರಿಗೆ ಜಾಗೃತಿ ಮೂಡಿಸುವಂತ ಕಾರ್ಯ ಮಾಡುತ್ತಿದ್ದಾರೆ ವಿನಃ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೋನಾ ತಡೆಗಟ್ಟಲು ತಂತ್ರಗಳನ್ನು ಹೆಣೆಯುತ್ತಿಲ್ಲ. ಕಳೆದ ವರ್ಷ ಕೊರೋನಾ ಅಬ್ಬರ ಕಡಿಮೆ ಇದ್ದ ಸಂದರ್ಭದಲ್ಲಿ ಅನೇಕ ಕ್ರಮಗಳನ್ನು ಕೈಗೊಂಡ ತಾಲೂಕಾಡಳಿತ ಈಗ ಮೂಡಲಗಿ ತಾಲೂಕಿನಲ್ಲಿ ಪ್ರತಿನಿತ್ಯ ಕೊರೋನಾ ಎರಡನೇ ಅಲೆ ತನ್ನ ಆರ್ಭಟದಿಂದ ಮರಣ ಮೃದಂಗ ಭಾರಿಸುತ್ತಿದ್ದರು ತಾಲೂಕಾಡಳಿತ ಮಾತ್ರ ನಿದ್ದೆಗೆ ಜಾರಿದೆ.

ಮೊದಲೇ ಪಟ್ಟಣದಲ್ಲಿ ಮೀತಿ ಮೀರಿ ಸೋಂಕಿತರು ಹಾಗೂ ಕೊರೋನಾ ಆರ್ಭಟಕ್ಕೆ ಬಲಿಯಾಗುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ತಾಲೂಕಾಡಳಿತ ಹೆಚ್ಚಿನ ಕ್ರಮಗಳನ್ನು ಕೈಗೊಂಡು ಜನರನ್ನು ರಕ್ಷಿಸುವಂತ ಕೆಲಸ ಮಾಡಬೇಕಾದ ಅಧಿಕಾರಿಗಳು ಜನರ ಈ ವರ್ತನೆಗಳಿಗೆ ಬೈಕ್ ಹಾಕದೇ ಇದ್ದರೆ ಮುಂದಿನ ದಿನಗಳಲ್ಲಿ ಕೊರೋನಾ ಅಟ್ಟಹಾಸ ನಿಯಂತ್ರಣಕ್ಕೆ ಸಿಗದೇ ನೋವು ನಲಿವು ಅನುಭವಿಸುವಂತಾಗುತ್ತದೆ ಎಚ್ಚರವಿರಲಿ.

ಕೊರೋನಾ ಎರಡನೇ ಅಲೆಯು ತಾಲೂಕಿನಲ್ಲಿ ದಿನನಿತ್ಯ ಮರಣ ಮೃದಂಗ ಭಾರಿಸುತ್ತಿದ್ದರು ಕೂಡಾ ತಾಲೂಕಾಡಳಿತ ನಿಯಂತ್ರಿಸಲು ವಿಫಲವಾಗಿದೆ, ಜಾಗೃತಿ ಮೂಡಿಸುವುದರ ಜೊತೆಗೆ ಕಟ್ಟುನಿಟ್ಟಿ ಕ್ರಮಕೈಗೊಂಡು ಜನರ ಜೀವ ಉಳಿಸುವಂತ ಕೆಲಸ ಮಾಡಬೇಕಾದ ಅಧಿಕಾರಿಗಳು ಸುಮ್ನೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಬೇರೆ ಬೇರೆ ತಾಲೂಕಿನಲ್ಲಿ ಸ್ವಯಂ ಪ್ರೇರಿತವಾಗಿ ಸಂಪೂರ್ಣ ಲಾಕ್ ಡೌನ್ ಮಾಡಿದ್ದಾರೆ. ಅದೇ ತರನಾದ ಲಾಕ್‌ಡೌನ್ ನಮ್ಮ ಮೂಡಲಗಿ ತಾಲೂಕಿನಲ್ಲಿ ಅವಶ್ಯವಾಗಿದೆ.
ಗುರುನಾಥ ಗಂಗನ್ನವರ ( ಕಾಂಗ್ರೇಸ್ ಮುಖಂಡ)

 ಪುರಸಭೆ ಅಧಿಕಾರಿಗಳು ಯಾವುದೇ ಸದಸ್ಯರನ್ನು ಹಾಗೂ ಪಟ್ಟಣದ ಮುಖಂಡರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಯಾವುದೇ ಕ್ರಮಗಳನ್ನು ಕೈಗೊಳ್ಳುವ ಮುನ್ನ ಸದಸ್ಯರ ಗಮನಕ್ಕೆ ತರದೇ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಹೆಸರು ಹೇಳಲಿಚ್ಚಿಸದ ಮೂಡಲಗಿ ಪುರಸಭೆ ಸದಸ್ಯ


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ