ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ವಿಶ್ವಗುರು ಬಸವಣ್ಣ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರು ವರ್ಗ, ವರ್ಣ ರಹಿತ ಸಮಾನತೆಯ ಸಮಾಜದ ಹರಿಕಾರ ಅವರ ವಚನಗಳು ಸರ್ವಕಾಲಿಕ, ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಗುರು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಮೇ 14 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ ಸಭಾಭವನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಪುಷ್ಪ ಅರ್ಪಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು ಕರೋನಾದಂತಹ ಸಂದರ್ಭದಲ್ಲಿ ಬಸವಣ್ಣನವರ ಹಾಗೂ ಅನೇಕ ಶರಣರ ವಚನಗಳು ನಮಗೆ ದಾರಿ ದೀಪವಾಗಿವೆ ಎಂದರು.
ಸಹಕಾರಿಯ ನಿರ್ದೇಶಕ ಶ್ರೀಶೈಲ ತುಪ್ಪದ, ಬೆಟಗೇರಿ ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ, ಪ್ರಶಾಂತ ಪಟ್ಟಣಶೆಟ್ಟಿ, ದೊಡ್ಡಪ್ಪ ಉಜ್ಜಿನಕೊಪ್ಪ, ವಿಠ್ಠಲ ಜಟ್ಟೆನ್ನವರ, ಸಿದ್ದಪ್ಪ ಬೆಳವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.