ಕೊರೋನಾ ನಿಯಂತ್ರಣಕ್ಕೆ ವಾರಿಯರ್ಸ್ ಪಾತ್ರ ಬಹುಮುಖ್ಯ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಮೊದಲು ನಗರ ಪ್ರದೇಶಗಳಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಕರೋನಾಕ್ಕೆ ಹೆದರಿ ನಗರ ಪ್ರದೇಶವನ್ನು ತ್ಯಜಿಸಿ ಆ ಜನ ಹಳ್ಳಿಗೆ ಬಂದ ಕಾರಣ ಈಗ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕರೋನಾ ವ್ಯಾಪಕವಾಗಿ ಹರಡುತ್ತಿದ್ದು ನಾವೆಲ್ಲರೂ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸರ್ಕಾರದ ಕೋವಿಡ ನಿಯಮಗಳನ್ನು ಪಾಲಿಸಿದರೇ ಹಳ್ಳಿಗಳನ್ನು ಕರೋನಾ ಮುಕ್ತ ಗ್ರಾಮಗಳನ್ನಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ ಸಿಬ್ಬಂದಿಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣ ಪಂಚಾಯತ ಆವರಣದಲ್ಲಿ ಟಾಕ್ಸ್‍ಪೋರ್ಸ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ಲಕ್ಷಣಗಳು ಕಂಡು ಬಂದ ತಕ್ಷಣ ಅಂತವರನ್ನು ಹೋಮ್ ಐಸೋಲಿಯೇಶನ್ ಒಳಪಡಿಸುವ ಮುಖಾಂತರ ರೋಗ ಹರಡುವಿಕೆಯನ್ನು ತಡೆಯಬಹುದು. ನಿರ್ಲಕ್ಷ ವಹಿಸಿದರೇ ಕರೋನಾ ವ್ಯಾಪ್ತಿ ಹೆಚ್ಚುವ ಲಕ್ಷಣಗಳಿದ್ದು ಎಲ್ಲರೂ ಸೇರಿ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮುಖಾಂತರ ಕರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಆದಕಾರಣ ನಾವೆಲ್ಲರೂ ಸಾಮೂಹಿಕ ಹೊಣೆಗಾರಿಕೆ ನಿಭಾಯಿಸಲು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯತ ವತಿಯಿಂದ ಬೀದಿಗಳಲ್ಲಿ ರೋಗ ನಿರೋಧಕ ಔಷದ ಸಿಂಪರಣೆ, ಸ್ವಚ್ಛತೆ ಕಾರ್ಯ ನಡೆಯಬೇಕು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅರುಣಕುಮಾರ, ಪಟ್ಟಣ ಪಂಚಾಯತ ಸದಸ್ಯ ಶಂಕರ ಮಕ್ಕಳಗೇರಿ, ಪ್ರಮುಖರಾದ ರಾಮಸಿದ್ದ ನಾಂವಿ, ಅಶೋಕ ಪಾಟೀಲ, ಬಸವರಾಜ ಸಂಪಗಾಂವಿ, ಪರಪ್ಪ ಗಿರೆಣ್ಣವರ, ಕೆಂಪಣ್ಣ ಮಕ್ಕಳಗೇರಿ, ಸುಭಾಸ ಕಾಂಬಳೆ, ಭೀಮಶಿ ಸೋರಗಾಂವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಂದರು.