ಪಡಿತರ ವಿತರಣೆ
ಮೂಡಲಗಿ: ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಮೇ 2021ನೇ ಸಾಲಿನ ಮೂಡಲಗಿ ತಾಲೂಕಿನ ಫಲಾನುಭವಿಗಳಿಗೆ ಸರಕಾರದ ವತಿಯಿಂದ ಬಿಡುಗಡೆಯಾದ ಪಡಿತರ ಧಾನ್ಯವನ್ನು ಫಲಾನುಭವಿಗಳ ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಕುಟುಂಬಕ್ಕೆ ಉಚಿತ 35 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡನ್ ಪ್ರತಿ ಸದಸ್ಯರಿಗೆ 10ಕೆಜಿ ಉಚಿತ ಅಕ್ಕಿಯೊಂದಿಗೆ ಪ್ರತಿ ಕುಟುಂಬಕ್ಕೆ 2ಕೆಜಿ ಗೋದಿ, ಎಪಿಎಲ್ ಪಡಿತರ ಚೀಟಿಗೆ ಪ್ರತಿ ಕೆಜಿಗೆ ರೂ 15ರಂತೆ ಏಕ ಸದಸ್ಯರಿಗೆ 5ಕೆಜಿ ಅಕ್ಕಿ ಹೆಚ್ಚಿನ ಸದಸ್ಯರಿಗೆ 10ಕೆಜಿ ಅಕ್ಕಿ ನೀಡಲಾಗುವುದು. ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆಯ ಸಮಯದಲ್ಲಿ ಸಾಮಾಜಿ ಅಂತರದೊಂದಿಗೆ ಕಡ್ಡಾಯವಾಗಿ ಮಾಸ್ಕ ಮತ್ತು ಸ್ಯಾನಿಟೈಜರದೊಂದಿಗೆ ಮಾರ್ಕಿಂಗ ವ್ಯವಸ್ಥೆ ಮಾಡಿಸಿರಬೇಕು ಎಂದು ತಹಶೀಲದಾರ ಮೋಹನ ಭಸ್ಮೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News