Breaking News
Home / Recent Posts / ಚುನಾಯಿತ ಪ್ರತಿನಿಧಿಗಳು ಎಲ್ಲರೂ ಜಾಗೃತರಾಗಿ ಸರ್ಕಾರದ ಕೋವಿಡ್ ನಿಯಮಗಳನ್ನು ತರುವ ಮೂಲಕ ಹಳ್ಳಿಗಳಿಂದ ಕರೋನಾ ಹಿಮ್ಮೆಟ್ಟಿಸಬೇಕಾಗಿದೆ -ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಚುನಾಯಿತ ಪ್ರತಿನಿಧಿಗಳು ಎಲ್ಲರೂ ಜಾಗೃತರಾಗಿ ಸರ್ಕಾರದ ಕೋವಿಡ್ ನಿಯಮಗಳನ್ನು ತರುವ ಮೂಲಕ ಹಳ್ಳಿಗಳಿಂದ ಕರೋನಾ ಹಿಮ್ಮೆಟ್ಟಿಸಬೇಕಾಗಿದೆ -ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

Spread the love

ಘಟಪ್ರಭಾ: ನಗರ ಪ್ರದೇಶಕ್ಕಿಂತ ಈಗ ಗ್ರಾಮಾಂತರ ಪ್ರದೇಶಗಳಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿದ್ದು ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಚುನಾಯಿತ ಪ್ರತಿನಿಧಿಗಳು ಎಲ್ಲರೂ ಜಾಗೃತರಾಗಿ ಸರ್ಕಾರದ ಕೋವಿಡ್ ನಿಯಮಗಳನ್ನು ತರುವ ಮೂಲಕ ಹಳ್ಳಿಗಳಿಂದ ಕರೋನಾ ಹಿಮ್ಮೆಟ್ಟಿಸಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರೆ ನೀಡಿದರು.
ಸೋಮವಾರ ಮೇ 17 ರಂದು ಅರಭಾವಿ ಸಮೀಪದ ಘಟಪ್ರಭಾ ಸಕ್ಕರೆ ಕಾರ್ಖಾನೆಯ ಪ್ರೀಯದರ್ಶನಿ ಸಭಾ ಭವನದಲ್ಲಿ ಗೋಕಾಕ ಹಾಗೂ ಮೂಡಲಗಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳ, ಆಶಾ ಮತ್ತು ಅಂಗನವಾಡಿ ಮೇಲ್ವಿಚಾಕಿಯರು ಹಾಗೂ ತಾಲೂಕಾ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕರೋನಾ ಪೀಡಿತರ ಸಹಾಯಕ್ಕಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಪ್ರತಿ ಗ್ರಾಮದಲ್ಲೂ ಯಾವುದೇ ರೀತಿಯ ಶೀತ ಜ್ವರ್ ಮಾದರಿಯ ಆರೋಗ್ಯ ಸಮಸ್ಯೆ. ಉಸಿರಾಟದ ತೊಂದರೆಯ ಉಂಟಾದ ಪ್ರಕರಣಗಳ ಬಗ್ಗೆ ಆಶಾ ಕಾರ್ಯಕರ್ತೆಯರು ನಿಗಾ ವಹಿಸಬೇಕು. ಅದಕ್ಕಾಗಿ ಆರೋಗ್ಯ ಸಮಿತಿ ಮತ್ತು ಪೌಷ್ಠಿಕ ಸಮಿತಿ ನೆರವು ಪಡೆಯಬಹುದು. ರೋಗ ಲಕ್ಷಣ ರಹಿತವಾಗಿರುವ ಆದರೆ ಕರೊನಾಕ್ಕೆ ಹೆಚ್ಚು ಸುಲಭವಾಗಿ ಬಾಧಿತರಾಗುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಬೇಕು. ಅವರಿಗೆ ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಸೋಂಕು ಪತ್ತೆ ಪರೀಕ್ಷೆ ನಡೆಸಬೇಕೆಂದರು.

15 ರಿಂದ 20 ದಿನ ಸಕ್ರಿಯವಾಗಿ ಕಾರ್ಯನಿರ್ವಹಿಸದರೆ ಸೋಂಕಿನ ನಿಯಂತ್ರಣ ಮಾಡಬಹುದು. ನಿಮ್ಮೊಂದಿಗೆ ನಾವು ಇದ್ದೇವೆ. ಎಲ್ಲರೂ ಕೂಡಿ ಕೆಲಸ ಮಾಡೋಣ ಎಂದರಲ್ಲದೇ ಆಪತ್ ಕಾಲದಲ್ಲಿ ಮಾಡುವ ಸೇವೇಯೇ ನಿಜವಾದ ಸೇವೆ ಎಂದರಲ್ಲದೇ ಬೆಳಗಾವಿ ಜಿಲ್ಲೆಗೆ ಆಕ್ಸಿಜನ ಕೊರತೆಯಾಗದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸತತ ಪ್ರಯತ್ನದಿಂದ ವಿದೇಶದ 25 ಮೆ.ಟನ್ ಆಕ್ಸಿಜನ ದೊರೆತ್ತಿರುವುದು ಅವರನ್ನು ನಾವೆಲ್ಲರೂ ಅಭಿನಂದಿಸಬೇಕಾಗುತ್ತದೆ ಎಂದರು.

ತುರ್ತು ಸ್ಥಿತಿಯನ್ನು ಎದುರಿಸಲಿಕ್ಕೆ ಯಾದವಾಡ, ಕುಲಗೋಡ, ಬೆನಚನಮರಡಿಯಲ್ಲಿ ಕೋವಿಡ ಆರೈಕೆ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಪ್ರಕಾಶ್ ಹೋಳೆಪ್ಪಗೋಳ ಮಾತನಾಡಿ ಮದುವೆಗೆ 40 ಜನ, ಅಂತ್ಯಕ್ರಿಯೆಗೆ 5 ಜನ ಇದು ಸರ್ಕಾರದ ಕರೋನಾ ನಿಯಂತ್ರಣ ನಿಯಮವಾಗಿದ್ದು ಸಾರ್ವಜನಿಕರು ಪಾಲಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಇದರಿಂದ ಗ್ರಾಮಗಳಲ್ಲಿ ಕರೋನಾ ಸಕ್ರಿಯ ಪ್ರಕರಣಗಳು ಆಗುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.
ಗೋಕಾಕ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ ಲಾಳಿ, ಮೂಡಲಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಬಬಲಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಅಭಿಷೇಕ ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಪ್ಪಗೋಳ, ಬಸವರಾಜ ಹುಳ್ಳೇರ ಸೇರಿದಂತೆ ತಾಲೂಕಾ ಅಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ