ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಯ ಶ್ಲಾಘನೀಯವಾಗಿದೆ : ಗ್ರಾಪಂ ಅಧ್ಯಕ್ಷ ಕತ್ತಿ
ಮೂಡಲಗಿ : ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ ಹೇಳಿದರು.
ಮಂಗಳವಾರದoದು ಸಮೀರವಾಡಿ ಸಕ್ಕರೆ ಕಾರ್ಖಾನೆ ವತಿಯಿಂದ ತಾಲೂಕಿನ ಹಳ್ಳೂರ ಗ್ರಾಮ ಪಂಚಾಯತ ಕಾರ್ಯಲಯಕ್ಕೆ ಹಸ್ತಾಂತರಿಸಿದ 35 ಲೀಟರ ಸ್ಯಾನಿಟೈಜರ್ ಹಾಗೂ 15 ಲೀಟರ್ ಹೈಡ್ರೋಪ್ಲೋರೈಡ್ ಸ್ವೀಕರಿಸಿದ ಮಾತನಾಡಿದ ಅವರು ಪ್ರತಿಯೊಂದು ಸಂಕಷ್ಟುಗಳು ಎದುರಾದ ಸಂದರ್ಭದಲ್ಲಿ ತಾವು ಕೂಡಾ ನಮಗೆ ಸಹಕಾಯ ಮಾಡುವುದರ ಜೊತೆಗೆ ಗ್ರಾಮದ ಜನರ ಜೀವವನ್ನು ರಕ್ಷಿಸುವಂತ ಕೆಲಸ ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದರು.
ಕಾರ್ಖಾನೆಯ ಮಜದೂರ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ ಮಾತನಾಡಿ, ದೇಶದಲ್ಲಿ ಮಹಾಮಾರಿ ಕೊರೋನಾದ ಎರಡನೇ ಅಲೆಯು ರುದ್ರನರ್ತನ ಮಾಡುತ್ತಿದೆ. ಈ ಅಲೆಯಲ್ಲಿ ಚಿಕ್ಕವರಿಂದ ಹಿಡಿದು ಹಿರಿಯರು ಕೊರೋನಾಗೆ ಬಲಿಯಾಗುತ್ತಿದ್ದಾರೆ. ಕೊರೋನಾ ತಡೆಗಟ್ಟಲು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ನಮ್ಮ ಕಾರ್ಖಾನೆಯಿಂದ ಸ್ಯಾನಿಟೈಜರ್ ಹಾಗೂ ಗ್ರಾಮದ ಜನರ ಜೀವನ ಉಳಿಸಲು ಹೈಡ್ರೋಪ್ಲೋರೈಡ್ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ಹಣಮಂತ ತಾಳಿಕೋಟಿ, ಕಾರ್ಖಾನೆಯ ನ್ಯಾಯವಾದಿ ಸುನೀಲ ಅಕ್ಕತಂಗಿಹಾಳ, ಕಿಶೋರ ಗಣಾಚಾರಿ, ಲಕ್ಷ್ಮಣ ಸಪ್ತಸಾಗರ, ಭೀಮಪ್ಪ ಡಬ್ಬನ್ನವರ, ಹಣಮಂತ ಹಡಪದ ಉಪಸ್ಥಿತರಿದ್ದರು.