ರೂ 1250 ಕೋಟಿ ಮೋತ್ತದ ಪರಿಹಾರ ಘೋಷಣೆ:
ರೈತರ, ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿರುವ ಸಿ.ಎಂ ಕಾರ್ಯ ಶ್ಲಾಘನೀಯ – ಸಂಸದ ಕಡಾಡಿ
ಮೂಡಲಗಿ: ಕರೋನಾ 2ನೇ ಅಲೆ ನಿಯಂತ್ರಣ ಸಂಬಂಧ ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ರೂ 1250 ಕೋಟಿ ಮೊತ್ತದ ಪರಿಹಾರ ಘೋಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಮೇ- 19 ರಂದು ಪತ್ರಿಕಾ ಹೇಳಿಕೆ ನೀಡಿರುವ ಈರಣ್ಣ ಕಡಾಡಿ ಅವರು ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಮಾಡಲಾಗಿದ್ದು ಕರೋನಾ ಮೊದಲ ಅಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ಯಾಕೇಜ ಘೋಷಿಸಿದ್ದರು ಈಗ 2ನೇ ಅಲೆ ಬಂದಾಗಲೂ ನೆರವಿಗೆ ಧಾವಿಸಿದ್ದಾರೆಂದರು.
ಹೂ ಬೆಳೆದ, ಹಣ್ಣುಹಂಪಲ, ತರಕಾರಿ ಬೆಳೆದ ರೈತರಿಗೆ ರೂ 10 ಸಾವಿರ, ಕಟ್ಟಡ ಕಾರ್ಮಿಕರಿಗೆ, ಅಟೋ ಮತ್ತು ಟ್ಯಾಕ್ಷಿ ಚಾಲಕರಿಗೆ ರೂ 3 ಸಾವಿರ, ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೇಲರ, ಹಮಾಲಿಗಳು, ಕುಂಬಾರ ಸೇರಿದಂತೆ ರೂ 2 ಸಾವಿರದಂತೆ ಒಟ್ಟು 3.04 ಲಕ್ಷ ಜನರು ಇದರ ಸದುಪಯೋಗ ಪಡೆದುಕ್ಕೊಳ್ಳಲಿದ್ದಾರೆ. ರಸ್ತೆ ಬದಿ ವ್ಯಾಪಾರಸ್ಥರು, ಕಲಾವಿದರು ಮತ್ತು ತಂಡದವರಿಗೆ ಪರಿಹಾರ ಸಿಗಲಿದೆ ಎಂದರು.