ಮೂಡಲಗಿ : ಬುಧುವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಕೊರೋನಾ ಸೋಂಕಿನಿoದ 6 ಜನರ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಅದು ಸತ್ಯಕ್ಕೆ ದೂರವಾದದ್ದು ಎಂದು ಮೂಡಲಗಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಅವರು ಸ್ಪಷ್ಟನೆ ನೀಡಿದ್ದಾರೆ.
ತುಕ್ಕಾನಟ್ಟಿ ಗ್ರಾಮದಲ್ಲಿ ಒಂದೇ ದಿನ ಆರು ಸಾವನ್ನಪ್ಪಿರುವುದು ನಿಜ ಆದರೆ ಕೋವಿಡ್‌ದಿಂದ ನಾಲ್ಕು ಸಾವನ್ನಪ್ಪಿದ್ದಾರೆ, ವಯೋವೃದ್ಧರಾಗಿ ಇಬ್ಬರು ಸಾವನ್ನಪ್ಪಿದರೆ, ಕೋವಿಡ್‌ದಿಂದ ಮನೆಯಲ್ಲಿ ಇಬ್ಬರು ಸಾವಿಗೇಡಾದರೆ ಬೇರೆ ತಾಲೂಕಿನ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಆರು ಜನ ಕೋವಿಡ್‌ದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅದು ಸುಳ್ಳು ಎಂದು ತಹಶೀಲ್ದಾರ ಭಸ್ಮೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ತಂಡ ಭೇಟಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಬುಧವಾರದಂದು ಕೋವಿಡ್ ಆರು ಜನ ಸಾವಿಗೇಡಾಗಿದ್ದಾರೆ ಎಂಬ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿರುವದನ್ನು ಗಮನಿಸಿ ಗುರುವಾರದಂದು ಮೂಡಲಗಿ ತಹಶೀಲ್ದಾರ ಡಾ: ಮೊಹನಕುಮಾರ ಭಸ್ಮೆ, ಬಿಇಒ ಅಜೀತ ಮನ್ನಿಕೇರಿ, ಟಿ.ಎಚ್.ಒ ಡಾ: ಮುತ್ತಣ್ಣ ಕೊಪ್ಪದ, ಡಾ: ಆರ್.ಎಸ್.ಬೆಣಚನಮರಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ, ಸಿಪಿಐ ವೆಂಕಟೇಶ ಮುರನಾಳ, ಶ್ರೀಶೈಲ್ ಬ್ಯಾಕೂಡ ಸೇರಿದಂತೆ ಮತ್ತಿತರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲ್ಲಿಸಿದರು. ಈ ವೇಳೆಯಲ್ಲಿ ಗ್ರಾ.ಪಂ ಪ್ರತಿನಿಧಿಗಳು, ಪಿಡಿಒ, ಆಶಾ ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು