ಮೂಡಲಗಿ : ಕೊರೋನಾ ವೈರಸ್ ಕುರಿತು ಹಲವು ಜಾಗೃತಿಕ ಗೀತೆಗಳು ಹೊರಬಂದಿವೆ. ಹಲವಾರು ಕಲಾವಿದರು ಜಾಗೃತಿ ಮೂಡಿಸುವ ಸಾಹಿತ್ಯ ರಚಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಅದೇ ರೀತಿ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಅನಿಲ್ ಮಡಿವಾಳ ಅವರು ಸಾಹಿತ್ಯ ರಚಿಸಿ ಹಾಡುವ ಮೂಲಕ ಕೊರೋನಾ ಜಾಗೃತಿ ಗೀತೆಗಳನ್ನು ಸಾರ್ವಜನಿಕರು ಮನಸೋತು ವೈಲರ್ ಮಾಡತೊಡಗಿದ್ದಾರೆ.
ಕಳೆದ ವರ್ಷವೂ ಕೂಡ ಕೊರೋನಾ ಸಂದರ್ಭದಲ್ಲೂ ಸಹ ಅನೇಕ ಗೀತೆಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸುವಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ.
ಸದ್ಯ ಈಗ ಅವರು ರಚಿಸಿರುವ ಹಾಡು ಫುಲ್ ಫೇಮಸ್ ಆಗಿದ್ದು, ಪಕ್ಕ ಉತ್ತರ ಕರ್ನಾಟಕ ಜಾನಪದ ಶೈಲಿಯಲ್ಲಿ ರಚಿಸಿರುವ ಹಾಡು ಕೊರೋನಾ ಸಂಕಷ್ಟದ ಕುರಿತು ಜನರಲ್ಲಿ ಹಾಡಿನ ಮೂಲಕ ಧೈರ್ಯ ತುಂಬಲು ಸಾಹಿತ್ಯ ರಚಿಸಿ ಹಾಡು ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತೊಡಗಿದೆ