ಮೂಡಲಗಿ : ಪಟ್ಟಣದ ಅಪ್ರಾಪ್ತ ಬಾಲಕಿಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕ ಪೊಲೀಸ್ ಅತಿಥಿಯಾಗಿದ್ದಾನೆ.
ಬಾಲಕಿಯ ಜೊತೆಯಲ್ಲಿ ಎರಡು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಪಟ್ಟಣದ ಶ್ರೀಕಾಂತ ಶಂಕರ ನಾಯಕ ಎಂಬಾತ ಮತ್ತೆ ದೈಹಿಕ ಸಂಪರ್ಕ ಹೊಂದಲು ಬಾಲಕಿಯನ್ನು ಕರೆದೊಯ್ಯಲು ಅವಳು ತಿರಸ್ಕರಿಸಿದ್ದರಿಂದ ಅವಳಿಗೆ ಬಡೆದು ಜೀವಬೆದರಿಕೆ ಹಾಕಿದ್ದಾನೆ.
ಈ ವಿಷಯ ತಿಳಿದ ಬಾಲಕಿಯ ಮನೆಯವರು ಹಾಗೂ ಬಾಲಕಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇನ್ನೂ ಆ ಯುವಕ ವಿಡಿಯೋ ಹರಿಬಿಟ್ಟ ಕಾರಣ ಕೆಲವು ಯುವಕರ ಫೋನ್ಗಳನ್ನು ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
IN MUDALGI Latest Kannada News