Breaking News
Home / Recent Posts / ಮೂಡಲಗಿ ತಾಲೂಕಿನ ರೈತ ಸಂಘ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳು ವಾಪಸ ಪಡೆಯಬೇಕೆಂದು ಆಗ್ರಹ

ಮೂಡಲಗಿ ತಾಲೂಕಿನ ರೈತ ಸಂಘ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳು ವಾಪಸ ಪಡೆಯಬೇಕೆಂದು ಆಗ್ರಹ

Spread the love


ಮೂಡಲಗಿ: ದಿಲ್ಲಿಯಲ್ಲಿ ಕೃಷಿ ಮಸೂದ್ದೆ ವಾಪಸ ಪಡೆಯಬೇಕೆಂದು ಆಗ್ರಹಿಸಿ ಹೋರಾಟ ಪ್ರಾರಂಭವಾಗಿ ಆರು ತಿಂಗಳ ಪುರೈಸಿದ ಹಿನ್ನಲೇಯಲ್ಲಿ ಪಟ್ಟಣ ಉಪ ಕೃಷಿ ಉತ್ಪನ ಮಾರುಕಟ್ಟೆ ಮುಂದೆ ಮೂಡಲಗಿ ತಾಲೂಕಿನ ರೈತ ಸಂಘದವರು ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳು ವಾಪಸ ಪಡೆಯಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ್ ಅಂಗಡಿ ಮಾತನಾಡಿ ಕಳೆದ ಆರು ತಿಂಗಳನಿನಿಂದ ದಿಲ್ಲಿಯಲ್ಲಿ ನಿರಂತರವಾಗಿ ರೈತ ವಿರೋಧಿ ಮಸೂದೆ ಕಾಯ್ದೆಗಳ ವಾಪಸ ಪಡೆಯಬೇಕೆಂದು ಹೋರಾಟ ನಡೆಸಿದರು ಕೇಂದ್ರ ಸರಕಾರ ಕಣ್ಣು ತೇರೆದು ನೋಡತ್ತಾಯಿಲ್ಲ, ಪ್ರಧಾನಿ ಮೋದಿ ಮೇಲೆ ಆಸೆಭಾವನೆಇಟ್ಟುಕೊಂಡಿದಿವು ಆದರೆ ರೈತ ವಿರೋಧಿ ಕಾಯ್ದೆತಂದು ರೈತರಿಗೆ ದಕ್ಕೆ, ಆತಂಕ ತರುವ ಕೆಲಸ ಮಾಡಿದ್ದಾರೆ, ರೈತರ ಹೋರಾಟದಲ್ಲಿ ನಾಲ್ಕಹೈದು ನೂರು ಮಂದಿ ಜೀವ ಕಳೆದು ಕೊಂಡರು ಸರಕಾರ ಕಣ್ಣು ತೇರೆದು ನೋಡಿಲ್ಲ, ಸರಕಾರಕ್ಕೆ ಕರುಣೆ, ಮಾನ, ಮಾರ್ದೆ ಇದ್ದರೆ ರೈತರ ಪರವಾಗಿ ನಿಲ್ಲಬೇಕಾಗಿತು, ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಆ ಕೆಲಸವನ್ನು ಮಾಡಿಲ್ಲ ಆದರಿಂದ ರೈತ ವಿರೋಧಿ ಬಿಜೆಪಿ ಸರಕಾರಕ್ಕೆ ಇಂದು ರೈತರು ಕಪ್ಪು ಬಟ್ಟೆ ಪ್ರದರ್ಶಿಸಿದು ಮುಂದೆ ಒಂದು ದಿನ ರೈತರು ಬುದ್ದಿ ಕಲಿಸುತ್ತಾರೆ ಕಾರಣ ರೈತ ವಿರೋಧಿ ಮಸೂದ್ದೆಗಳನ್ನು ವಾಪಸ ಪಡೆಯಬೇಕೆಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಪಾಂಡು ಬೀರನಗಡ್ಡಿ ಮಾತನಾಡಿ, ರೈತರಿಗೆ ಬೇಡವಾದ ರೈತ ಮಸುದ್ದೆಗಳನ್ನು ಜಾರಿಗೆ ತಂದು ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ, ರೈತರು ಹೋರಾಟದಿಂದ ಹಿಂದೆ ಸರಿಯುದಿಲ್ಲ ದೇಶಾದ್ಯಂತ ಹೋರಾಟಕ್ಕೆ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ, ಇನ್ನಾದರು ಸರಕಾರ ಗಮನಹರಿಸಿ ಸಮಸ್ಯೆಗಳನ್ನು ವಿಚಾರ ಮಾಡಿ ಮಸುದ್ದೆಗಳನ್ನು ಹಿಂದೆ ಪಡೆಯಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ಮೂಡಲಗಿ ತಾಲೂಕಾ ಅಧ್ಯಕ್ಷ ಈರಣ್ಣಾ ಸಸಾಲಟ್ಟಿ, ತಾಲುಕಾ ಮುಖಂಡ . ಪದ್ಮಾಕರ ಉಂದ್ರಿ, ಕಾರ್ಯದರ್ಶಿ ಪ್ರಕಾಶ ತೆರದಾಳ, ರವಿ ನುಚ್ಚುಂಡಿ ಇದ್ದರು


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ