ಕರಾವಳಿ ನಾಡು ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ: ಪ್ರೊ. ಭಾಸ್ಕರ್ ರೈ
ಗೋಕಾಕ: ಕನ್ನಡ ಸಾಹಿತ್ಯಕ್ಕೆ ಎಲ್ಲ ಕಾಲಘಟ್ಟಕ್ಕೂ ಕರಾವಳಿಯ ಕೊಡುಗೆ ದೊಡ್ಡದು. ಪ್ರಾಕೃತಿಕ ಶ್ರೀಮಂತಿಕೆಯಂತೆ ಸಾಹಿತ್ಯ ಸಂಸ್ಕ್ರತಿಗೂ ಹೆಸರಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರ ನ ಬಹುಶ್ರುತ ವಿದ್ವಾಂಸರಾದ ಪ್ರೊ.ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಕೋರೋನಾ ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೆಬಿನಾರ್ ನ ಹದಿನೇಳನೇ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.
ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ : ಇನ್ ಮುಡಲಗಿ ನ್ಯೂಸ್ ಕಳಕಳಿ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಜನ ವಿದ್ವಾಂಸರು, ವಿಮರ್ಶಕರು, ಕವಿ, ಸಾಹಿತಿ-ಕಲಾವಿದರು ಉಪನ್ಯಾಸದ ನಂತರದ ಸಂವಾದದಲ್ಲಿ ಭಾಗವಹಿಸಿದ್ದರು.
ಪುತ್ತೂರಿನ ಹೆಸರಾಂತ ವೈದ್ಯರು ಹಾಗೂ ಹಿರಿಯ ಬರಹಗಾರರಾದ ಡಾ. ಸುರೇಶ ನೆಗಳಗುಳಿ ವಿಶ್ವವ್ಯಾಪಿಯಾದ ಸಾಹಿತ್ಯ ಮನದ ಹಿತ ಬಯಸುತ್ತದೆ. ಕನ್ನಡ ನಾಡಿನ ಪ್ರಾಂತ್ಯವಾರು ಸಾಹಿತ್ಯ ಸಂಸ್ಕ್ರತಿಯು ಸಂಪತ್ತ ಭರಿತವಾಗಿದೆ ಎಂದು ಆಶಯ ನುಡಿಯಾಡಿದರು.
ಕಳೆದ ದಿನದ ಉಪನ್ಯಾಸ ವಿದ್ವಾಂಸರುಗಳಿಗೆ ಬಳಗದ ಗೌರವಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ಶ್ರೀ ಲಕ್ಷ್ಮಣ ಚೌರಿ ಯವರು ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. ಚಿತ್ರದುರ್ಗದ ಸಾಹಿತಿ ಶ್ರೀ ಸಣ್ಣಗೌಡ ಬೂದಗಟ್ಟಿ ಸ್ವಾಗತಿಸಿ, ಪರಿಚಯಿಸಿದರು.
ಗೆಳೆಯರ ಬಳಗದ ಸಂಸ್ಥಾಪಕ ಹಾಗೂ ವೆಬಿನಾರ್ ಸಂಚಾಲಕ ಪ್ರಾ.ಜಯಾನಂದ ಮಾದರ ನಿರೂಪಿಸಿ,ವಂದಿಸಿದರು.