ಸಾಮಾನ್ಯ ಸೇವಾ ಕೇಂದ್ರ ಮತ್ತು ಸೇವಾ ಸಿಂಧು ಪ್ರತಿನಿಧಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ
ವರದಿ ಸುಭಾಸ ಗೊಡ್ಯಾಗೋಳ
ಮೂಡಲಗಿ: ರಾಜ್ಯ ಸರ್ಕಾರವು ಕೋವಿಡ್ 19 ಪ್ಯಾಕೇಜ್‍ನ್ನು ವಿವಿಧ ವರ್ಗದವರಿಗೆ ಘೋಷಣೆ ಮಾಡಿದೆ ಆದರೆ ಸೇವಾ ಸಿಂಧು ಮತ್ತು ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳನ್ನು ಕಡೆಗಣಿಸಿರುವುದು ವಿಷಾದಕರ ಸಂಗತಿ. ಕರ್ನಾಟಕ ರಾಜ್ಯದಲ್ಲಿ ಸುಮಾರು 10937 ಸೇವಾ ಸಿಂಧು ಕೇಂದ್ರದ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾನ್ಯ ಸೇವಾ ಕೇಂದ್ರ ಮತ್ತು ಸೇವಾ ಸಿಂಧು ಕೇಂದ್ರದ ಪ್ರತಿನಿಧಿಗಳು ಸಮಾಜದ ಕಟ್ಟ ಕಡೆಯ ಜನತೆಗೂ ಸರ್ಕಾರದ ಯೋಜನೆಗಳು ತಲುಪುವಂತೆ ತಮ್ಮ ಸೇವೆಯನ್ನು ನೀಡುತ್ತಿರುವುದರ ಜೊತೆಗೆ ಕೋವಿಡ್ ವಾರಿಯರ್ಸ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾನ್ಯ ಸೇವಾ ಕೇಂದ್ರ ಹಾಗೂ ಸೇವಾಸಿಂಧುವಿನ ಮೂಲಕ ಸರ್ಕಾರ ನಿಗದಿಪಡಿಸಿದ ದರದಲ್ಲಿ ಸರ್ಕಾರಕ್ಕೆ ಆದಾಯ ಬರುವಂತೆ ಸೇವೆಯನ್ನು ನೀಡುತ್ತಿರುವ ಇವರು ಲಕ್ಷಾಂತರ ಸಾರ್ವಜನಿಕರಿಗೆ ಉಚಿತವಾಗಿ ವ್ಯಾಕ್ಸಿನ್ ರಿಜಿಸ್ಟರ್ ಮಾಡಿಕೊಡುತ್ತಿದ್ದು ಲಾಕಡೌನ್ ನಂತಹ ಸಂಕಷ್ಠದ ಸಮಯವಿದಲ್ಲೂ “ಸೇವಾ ಸಿಂಧು” ಪ್ರತಿನಿಧಿಗಳು ಮಾತ್ರ ತಮ್ಮ ಜೀವಕ್ಕಿರುವ ಅಪಾಯ ಲೆಕ್ಕಿಸದೇ ಕಾರ್ಯನಿರ್ವಹಿಸುತಿದ್ದಾರೆ. ಸರ್ಕಾರವು “ಸೇವಾಸಿಂಧು”ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದೆ. ಸಮಗ್ರ ನಾಗರೀಕರ ಸೇವಾ ಕೇಂದ್ರಗಳಾದ ಬೆಂಗಳೂರು ಒನ್, ಸಿಎಸ್‍ಸಿ ಸೇವಾ ಕೇಂದ್ರ, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳಿಗೆ ನೀಡಿದ್ದು “ಸೇವಾ ಸಿಂಧು” ಯೋಜನೆಯು ನಗದು ರಹಿತ, ಕಾಗದ ರಹಿತ ವಿಧಾನವಾಗಿದ್ದು ಇದೇ ಅಂಶವೂ ಯೋಜನೆಯ ಮುಖ್ಯ ಗುರಿಯಾಗಿದೆ. ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ನಾಗರೀಕರಿಗೆ ಒಂದೇ ವೇದಿಕೆಯಲ್ಲಿ ವಾಸ್ತವಿಕ, ಪಾರದರ್ಶಕವಾಗಿ ಒದಗಿಸಲು ಸಹಾಯ ಮಾಡುತ್ತದೆ. ಕೊವೀಡ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸೇವಾ ಸಿಂಧೂ ಪ್ರತಿನಿಧಿಗಳನ್ನು ಸರ್ಕಾರ ಕಡೆಗಣಿಸಿರುವುದು ಸರಿಯಲ್ಲ. ಎಲ್ಲ ಸಾಮಾನ್ಯ ಸೇವಾ ಕೇಂದ್ರ ಮತ್ತು ಸೇವಾ ಸಿಂಧು ಕೇಂದ್ರದ ಪ್ರತಿನಿಧಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಅಂತ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರವು ಕೋವಿಡ್ ಪ್ಯಾಕೇಜ್‍ನ್ನು ವಿವಿಧ ವರ್ಗದವರಿಗೆ ಘೋಷಣೆ ಮಾಡಿ ಸೇವಾ ಸಿಂಧು ಮತ್ತು ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳನ್ನು ಕಡೆಗಣಿಸಿರುವುದು ಬೇಸರ ತಂದಿದೆ. ಸರ್ಕಾರದ ಯೋಜನೆಗಳನ್ನು ವಾಸ್ತವಿಕ, ಪಾರದರ್ಶಕವಾಗಿ ಒದಗಿಸಲು ಸಹಾಯ ಮಾಡುತ್ತಿರುವ ಸಾಮಾನ್ಯ ಸೇವಾ ಕೇಂದ್ರ ಮತ್ತು ಸೇವಾ ಸಿಂಧೂ ಪ್ರತಿನಿಧಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಅಂತ ಪರಿಗಣಿಸಿ ಉಚಿತವಾಗಿ ಕೊವೀಡ್ ಲಸಿಕೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಓದಗಿಸಬೇಕು.
• ಮಹಾಲಿಂಗ ಗೊಡ್ಯಾಗೋಳ
ಸೇವಾ ಸಿಂಧೂ ಕೇಂದ್ರ ಪ್ರತಿನಿಧಿ, ಮೂಡಲಗಿ