ಗೋಕಾಕ ಮತ್ತು ಮೂಡಲಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೋವಿಡ್ ಕೇರ್ ಸೆಂಟರ್, ತಾಲೂಕಾ ಕೋವಿಡ್ ವಾರ್ ರೂಮ್ ಮತ್ತು ಸಹಾಯವಾಣಿ ಕೇಂದ್ರ, ಲಸಿಕಾ ಕೇಂದ್ರ, ಕೋವಿಡ್ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಅಗತ್ಯ ಸಲಹೆ ಸೂಚನೆ ನೀಡಿದರು. ಗೋಕಾಕ ತಾಲೂಕಾ ಆಸ್ಪತ್ರೆಗೆ ಮಂಜೂರಾದ ಆಕ್ಸಿಜನ ಘಟಕದ ಕಾಮಗಾರಿಯನ್ನು ವೀಕ್ಷಿಸಿ ತುರ್ತುಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
• ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಅಧಿಕಾರಿಗಳ, ಪಿ.ಡಿ.ಒ, ಆಶಾ, ಅಂಗನವಾಡಿ ಕಾರ್ಯಕರ್ತರ ಮೇಲ್ವಿಚಾರಕರ ಸಭೆ ತೆಗೆದುಕೊಂಡರು
• ಕರೋನಾ ಪೀಡಿತರಿಗೆ ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಬೆಡ್, ರೆಮಿಡಿಸಿವರ್ ಇಂಜೆಕ್ಷನ್ ವ್ಯವಸ್ಥೆ ಮಾಡುವಲ್ಲಿ ಹಗಲು ರಾತ್ರಿ ಸತತ ಪರಿಶ್ರಮ.
• ಬೆಳಗಾವಿ ಜಿಲ್ಲೆಗೆ ಆಕ್ಸಿಜನ ಕೊರತೆಯಾಗದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯ ಸಚಿವರೊಂದಿಗೆ ಸತತ ಸಂಪರ್ಕದಲ್ಲಿ ಇದ್ದು ಜಿಲ್ಲೆ ಆಕ್ಸಿಜನ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲು ಕಾಳಜಿ ವಹಿಸಿದ್ದಾರೆ, ಅವರನ್ನು ನಾವೆಲ್ಲರೂ ಅಭಿನಂದಿಸಬೇಕಾಗುತ್ತದೆ ಎಂದರು.
• ತುಕ್ಕಾನಟ್ಟಿ ಗ್ರಾಮದಲ್ಲಿ ಕರೋನಾ ಸಕ್ರೀಯ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಸ್ವತಃ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾಗವಹಿಸಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇದೇ ಸಂದರ್ಭದಲ್ಲಿ ವೈದ್ಯರು, ಎ.ಎನ್.ಎಮ್, ಆಶಾ, ಅಂಗನವಾಡಿ ಕಾರ್ಯಯರ್ತರಿಗೆ ನಾವು ನಿಮ್ಮ ಜೊತೆಗಿದ್ದೇವೆ ಯಾರು ಆತಂಕಕೊಳ್ಳಗಾದೆ ಧೈರ್ಯದಿಂದ ಕೆಲಸ ಮಾಡುವಂತೆ ಹೇಳಿದರು. ಇವರ ಕಾರ್ಯಕ್ಕೆ ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.