ಮೂಡಲಗಿಯ ಸಹಕಾರಿಯ ಸಿರಿ
‘ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್’
ಮೂಡಲಗಿ: ದಿ. ಮೂಡಲಗಿ ಕೋ. ಆಪ್‍ರೇಟಿವ ಬ್ಯಾಂಕ್ ಲಿ. ಇದರ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಪೂಜೆಯು ಆ. 10 ಬುಧವಾರ ಬೆಳಿಗ್ಗೆ 10ಕ್ಕೆ ಜರುಗಲಿದೆ. ಪೂಜಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಅರಭಾವಿಯ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮೀಜಿ, ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಂಕಲಗಿಯ ಶ್ರೀ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಗಳು ವಹಿಸುವರು.
ಪ್ರಗತಿಯ ಹಿನ್ನೋಟ: 1944ರಲ್ಲಿ ಕೇವಲ 50 ಸದಸ್ಯರೊಂದಿಗೆ ಎರಡು ಸಾವಿರ ರೂಪಾಯಿಗಳ ಶೇರು ಬಂಡವಾಳದೊಂದಿಗೆ ಚಿಕ್ಕ ಕೊಠಡಿಯಲ್ಲಿ ಪ್ರಾರಂಭಗೊಂಡ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು 75 ವರ್ಷಗಳ ಅಮೃತ ಮಹೋತ್ಸವ ಆಚರಣೆಯ ಅಂಚಿನಲ್ಲಿದೆ. ಕೃಷಿ ಪ್ರಧಾನವಾಗಿರುವ ಮೂಡಲಗಿ ಜನರು 1940ರ ದಶಕದಲ್ಲಿ ಹಣಕಾಸಿನ ವ್ಯವಹಾರಕ್ಕಾಗಿ ನೆರೆಹೊರೆಯ ಊರುಗಳಿಗೆ ಹೋಗಬೇಕಾಗುತಿತ್ತು. ಇಂಥ ಸಮಸ್ಯೆಯಿಂದ ಮುಕ್ತರಾಗಲು ತಾವೇ ಹಣಕಾಸಿನ ಸಂಸ್ಥೆಯೊಂದನ್ನು ಹುಟ್ಟುಹಾಕುವ ಯೋಚನೆ ಮಾಡಿದರು. ಊರಿನ ಪ್ರಮುಖರಾದ ದಿ. ಶಿವಬಸಪ್ಪ ಸಿ. ಅಂಗಡಿ, ದಿ. ಸಿದ್ದಪ್ಪ ಎಸ್. ಕೊಟಗಿ ಅವರ ನೇತೃತ್ವದಲ್ಲಿ ಕಾರ್ಯಪ್ರವತ್ತರಾಗಿ 1944ರಲ್ಲಿ ಮೂಡಲಗಿ ಗ್ರಾಮದಲ್ಲಿ ಸಹಕಾರ ತತ್ವದ ಅಡಿಯಲ್ಲಿ ಮೊಟ್ಟಮೊದಲು ಹಣಕಾಸು ವ್ಯವಹರಿಸುವ ‘ಮೂಡಲಗಿ ಅರ್ಬನ್ ಪತ್ತು ಬೆಳೆಸುವ ಸಹಕಾರ ಸಂಘ’ವನ್ನು ಪ್ರಾರಂಭ ಮಾಡಿದರು. ಈ ಸಂಘವು 1949ರಲ್ಲಿ ‘ಅರ್ಬನ್ ಕೋ.ಆಪರೇಟಿವ ಬ್ಯಾಂಕ್’ ಎಂದು ಪರಿವರ್ತನೆಗೊಂಡು ಮೂಡಲಗಿಯು ವ್ಯಾಪಾರ ಮತ್ತು ಆರ್ಥಿಕ ರಂಗದ ಚೇತರಿಕೆಗೆ ಹೊಸ ಬೆಳಕನ್ನು ಮೂಡಿಸಿತು. ಬ್ಯಾಂಕ್‍ನ ಸಂಸ್ಥಾಪಕ ಅಧ್ಯಕ್ಷರಾಗಿ ದಿ. ಶಿವಬಸಪ್ಪ ಸಿ. ಅಂಗಡಿ ಸೇರಿದಂತೆ ದಿ. ಸಿದ್ದಪ್ಪ ಎಸ್. ಕೊಟಗಿ, ದಿ. ವಿ.ಬಿ. ಸೋನವಾಲಕರ, ದಿ. ಎಸ್.ಡಿ. ಕುಡಚಿ, ದಿ. ಎಂ.ಬಿ. ಢವಳೇಶ್ವರ, ದಿ. ಸಿ.ವಿ. ಬೆಳಕೂಡ, ದಿ. ಡಿ.ಬಿ. ಬಡಿಗೇರ, ದಿ. ಕೆ.ಎಂ. ಬೀಸನಕೊಪ್ಪ, ದಿ. ಸಿ.ಬಿ. ಢವಳೇಶ್ವರ, ದಿ. ಎಂ.ಎ. ನೆರ್ಲೆಕರ, ದಿ. ವಿ.ವಿ. ಶೀಳನವರ, ದಿ. ಪಿ.ವೈ. ಬಡಗಣ್ಣವರ, ದಿ. ಎಸ್.ಬಿ. ಅಂಗಡಿ, ದಿ. ಎಂ.ಎಚ್. ಬಾಗವಾನ, ದಿ. ಎಚ್.ಬಿ. ಗಿರಡ್ಡಿ ಹಾಗೂ ಕಾರ್ಯದರ್ಶಿಯಾಗಿ ಟಿ.ಆರ್. ಲಂಕೆಪ್ಪನ್ನವರ ಇವರೆಲ್ಲ ಬ್ಯಾಂಕ ಸಂಸ್ಥಾಪಕರಾಗಿ ಭದ್ರ ಬುನಾದಿ ಹಾಕಿದರು. 1972ರಲ್ಲಿ ಬ್ಯಾಂಕ್‍ವು ಸ್ವಂತ ಕಟ್ಟಡವನ್ನು ಹೊಂದಿತು. ಬ್ಯಾಂಕು ಸಾಧಿಸಿದ ಪ್ರಗತಿ ಹಾಗೂ ದಕ್ಷತೆಯನ್ನು ಪರಿಗಣಿಸಿ 1981ರಲ್ಲಿ ರಿಝರ್ವ ಬ್ಯಾಂಕ್ ಆಪ್ ಇಂಡಿಯಾ (ಆರ್‍ಬಿಐ) ಲೈಸೆನ್ಸ್ ನೀಡಿತು. ಅವತ್ತಿನ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಆರ್‍ಬಿಐದಿಂದ ಗುರುತಿಸಿಕೊಂಡ ಬೆರಳಣಿಕೆಯ ಬ್ಯಾಂಕ್‍ಗಳಲ್ಲಿ ಮೂಡಲಗಿ ಅರ್ಬನ್ ಬ್ಯಾಂಕ್ ಸಹ ಒಂದು ಆಗಿದ್ದು ಗಮನಾರ್ಹವಾದ ಸಂಗತಿಯಾಗಿದೆ.
ಪ್ರಸ್ತುತ ಪ್ರಗತಿಯ ನೋಟ: ದಿ. ಮೂಡಲಗಿ ಕೋ.ಆಪರೇಟಿವ್ ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗಿ ಬಂದಿದ್ದು ಬ್ಯಾಂಕಿನ ಹೆಗ್ಗಳಿಕೆಯಾಗಿದೆ. ಪ್ರಸಕ್ತ 2022 ಮಾರ್ಚ ಅಂತ್ಯಕ್ಕೆ ಬ್ಯಾಂಕು 6899 ಸದಸ್ಯರನ್ನು ಹೊಂದಿದೆ. ರೂ. 2.04 ಕೋಟಿ ಶೇರು ಬಂಡವಾಳ, ರೂ. 5.23 ಕೋಟಿ ನಿಧಿಗಳು, ರೂ. 108.92 ಕೋಟಿ ಠೇವುಗಳು, ರೂ. 71.92 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ನೀಡಿದೆ. ರೂ. 120.04 ಕೋಟಿ ದುಡಿಯುವ ಬಂಡವಾಳ, ರೂ. 38.27 ಕೋಟಿ ಹೂಡಿಕೆಗಳು ಇರುವುದು. ರೂ. 61.20 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು, ಎನ್‍ಪಿಎ ಪ್ರಮಾಣ ನಿವ್ವಳ ಶೇ. 1.38 ಹಾಗೂ ಸಿಆರ್‍ಎಆರ್ ಪ್ರಮಾಣವು ಶೇ. 9.34 ಇದ್ದು, ಅಡಿಟ್‍ದಲ್ಲಿ ‘ಅ’ ಶ್ರೇಣಿಯನ್ನು ಹೊಂದಿದೆ. ಸದಸ್ಯರಿಗೆ ಪ್ರತಿ ವರ್ಷವೂ ತಪ್ಪದೆ ಆಕರ್ಷಕ ಲಾಭಾಂಶವನ್ನು ನೀಡುತ್ತಿರುವುದು ಬ್ಯಾಂಕ್‍ದ ಹೆಗ್ಗಳಿಕೆಯಾಗಿದೆ.
ವಿವಿಧ ಸೌಲಭ್ಯಗಳು: ಕೋರ್ ಬ್ಯಾಂಕಿಂಗ್ ಅಳವಡಿಕೆ, ಠೇವಣಿಗಳಿಗೆ ಆಕರ್ಷಕ ಬಡ್ಡಿ, ಕಡಿಮೆ ಬಡ್ಡಿಯಲ್ಲಿ ವಿವಿಧ ಸಾಲ ಸೌಲಭ್ಯ, ಎಸ್‍ಎಂಎಸ್ ಸೇವೆ, ಸೇಫ್ ಡಿಪಾಜಿಟ ಲಾಕರ್, ಬ್ಯಾಂಕಿನ ಐಎಫ್‍ಎಸ್‍ಸಿ, ನೆಪ್ಟ್, ಆರ್‍ಟಿಜಿಎಸ್ ಸೌಲಭ್ಯ, ಸಿಟಿಎಸ್ ಚೆಕ್ ಕ್ಲಿಯರೀಂಗ್ ಸೌಲಭ್ಯ, ಎಟಿಎಂ ಕಾರ್ಡ, ಪೋನ್ ಫೇ ಸೌಲಭ್ಯ ಸೇರಿದಂತೆ ಆಧುನಿಕ ಮತ್ತು ತ್ವರಿತ ವ್ಯವಹಾರದ ಎಲ್ಲ ಸೌಲಭ್ಯಗಳನ್ನು ಬ್ಯಾಂಕ್‍ವು ಗ್ರಾಹಕರಿಗೆ ಕಲ್ಪಿಸಿದೆ. ಹಳ್ಳೂರ, ರಾಮದುರ್ಗ ಮತ್ತು ಮುಗಳಖೋಡದಲ್ಲಿ ಶಾಖೆಗಳನ್ನು ಹೊಂದಿದ್ದು ಮೂರು ಶಾಖೆಗಳು ಉತ್ತಮ ಪ್ರಗತಿಯಲ್ಲಿವೆ. ಪ್ರಧಾನ ಕಚೇರಿ ಸೇರಿದಂತೆ ಮೂರು ಶಾಖೆಗಳಲ್ಲಿ ಒಟ್ಟು 27 ನುರಿತ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯ ಬ್ಯಾಂಕ್‍ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಸುಭಾಸ ಜಿ. ಢವಳೇಶ್ವರ, ಉಪಾಧ್ಯಕ್ಷ ನವೀನ ಎಂ. ಬಡಗಣ್ಣವರ, ನಿರ್ದೇಶಕರಾದ ಡಾ. ಕೃಷ್ಣಾಜಿ ವ್ಹಿ. ದಂತಿ, ಶಿವಲಿಂಗಪ್ಪ ಎಂ. ಗಾಣಿಗೇರ, ರಾಚಯ್ಯಾ ಬಿ. ನಿರ್ವಾಣಿ, ರುದ್ರಪ್ಪಾ ಎಲ್. ವಾಲಿ, ವೀರಪ್ಪ ಸಿ. ಬೆಳಕೂಡ, ಹರೀಶ ಸಿ. ಅಂಗಡಿ, ಮಹ್ಮದರಫೀಕ ಕೆ. ತಾಂಬೋಳಿ, ಸುಶೀಲಾ ಆರ್. ಸತರಡ್ಡಿ, ಪ್ರಭಾವತಿ ಪಿ. ಮುಧೋಳ, ಉಜಾಲಾ ಎಸ್. ಪೋಳ, ಸೈದಪ್ಪಾ ಬಿ. ಗದಾಡಿ ಹಾಗೂ ಪ್ರಧಾನ ವ್ಯವಸ್ಥಾಪಕ ಗೌಡಪ್ಪ ವ್ಹಿ. ಬುದ್ನಿ ಮತ್ತು ಎಲ್ಲ ಅನುಭವಿ ಸಿಬ್ಬಂದಿಯವರು ಬ್ಯಾಂಕ್‍ವನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದಾರೆ. ಈಗಿರುವ ಆಡಳಿತ ಮಂಡಳಿ ಹಾಗೂ 1944ರಿಂದ ವಿವಿಧ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಆಡಳಿತ ಮಂಡಳಿಯವರ ಅಪಾರ ವಿಶ್ವಾಸ, ಜನ ಮನ್ನಣೆಯನ್ನು ಉಳಿಸಿಕೊಂಡು ಬಂದಿದೆ. ಅವರೆಲ್ಲರÀ ದಕ್ಷತೆ ಮತ್ತು ಕಾರ್ಯನಿಷ್ಠೆಯಿಂದಾಗಿ ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್‍ವು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ………………………………………………………………………
‘ಬ್ಯಾಂಕ್‍ನ ಗ್ರಾಹಕರ ಸಂಖ್ಯೆ ವೃದ್ಧಿಸಿದ್ದು ಅದರೊಂದಿಗೆ ಹಣಕಾಸಿನ ವ್ಯವಹಾರವು ವಿಸ್ತಾಗೊಂಡಿದ್ದರಿಂದ ಎಲ್ಲವನ್ನು ಸುಲಭವಾಗಿ ನಿರ್ವಹಿಸಲು ಬ್ಯಾಂಕ್ ಕಟ್ಟಡವನ್ನು ವಿಸ್ತರಿಸಿ ಗ್ರಾಹಕರಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿಯವರ ಸಹಕಾರದಿಂದ ಬ್ಯಾಂಕ್ ಪ್ರಗತಿಗೆ ಕಾರಣವಾಗಿದೆ’
ಸುಭಾಸ ಜಿ. ಢವಳೇಶ್ವರ, ಅಧ್ಯಕ್ಷರು, ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್, ಮೂಡಲಗಿ