ಮೂಡಲಗಿ: ನೌಕರರ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಕಡತಗಳ ಶೀಘ್ರ ವಿಲೆವಾರಿ ಹಾಗೂ ಕಾಲಮಿತಿಯೊಳಗೆ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಕಛೇರಿಯು ಸುಲಲಿತವಾಗಿ ಸಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಬುಧವಾರ ಬಿಇಒ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರ ಸ್ವಾಗತ ಸಮಾರಂಭದದಲ್ಲಿ ಭಾಗವಹಿಸಿ ಮಾನಾಡಿ, ಶಿಕ್ಷಣ ಇಲಾಖೆಯು ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವದಾಗಿದೆ. ತ್ವರಿತ ಗತಿಯಲ್ಲಿ ಕಾರ್ಯನಿರ್ವಹನೆಯಾದಗ ಯಾವುದೆ ಕುಂದು ಕೊರತೆಗಳು ಬರುವದಿಲ್ಲ. ಇಂದಿಗ ತಂತ್ರಾಂಶ ಯುಗದಲ್ಲಿ ಪರಿಣಿತಿ ಅತ್ಯವಶ್ಯಕವಾಗಿದೆ. ಸಕಾಲದಲ್ಲಿಯೇ ಕಾಲಮಿತಿಯಲ್ಲಿ ಕರ್ತವ್ಯ ನಿರ್ವಹಿಸಿದಾಗ ಕೆಲಸದ ಒತ್ತಡ ಹಾಗೂ ಅನೇಕರಿಗೆ ಸಹಾಯ ಸಹಕಾರವಾಗುವದು. ಶಿಕ್ಷಕರಿಗೆ ಅವಶ್ಯಕವಿರುವ ಸೇವಾ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಪೂರೈಸಿದಾಗ ಮಕ್ಕಳ ಕಲಿಕೆಗೆ ಪ್ರೋತ್ಸಾಅಅಅಅಅಅಅಹ ನೀಡಿದಂತಾಗುವದು ಎಂದು ಅಭಿಪ್ರಯಾಯ ವ್ಯಕ್ತ ಪಡಿಸಿದರು.
ನೂತನ ಪತ್ರಾಂಕಿತ ವ್ಯವಸ್ಥಾಪಕ ಅನೀಲ ಮುತ್ನಾಳ ಸ್ವಾಗತ ಸ್ವೀಕರಿಸಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡಿದೆ. ನನಗೆ ಇಂತಹ ವಲಯದಲ್ಲಿ ಸೇವಾ ಭಾಗ್ಯ ದೊರತಿರುವದು ಪುಣ್ಯಫಲವಾಗಿದೆ. ಸದಾ ಕಾಲ ಎಲ್ಲಾ ಸೇವೆಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ಸಿಬ್ಬಂದಿಯರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿಯ ವಿಷಯ ಪರಿವೀಕ್ಷಕ ವಿಜಯ ಕಾಂಬಳೆ, ಇಸಿಒಗಳಾದ ಟಿ. ಕರಿಬಸವರಾಜು, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ, ಪ್ರೌಢ ಶಾಲಾ ಸಹ ಶಿಕ್ಷರ ಸಂಘದ ಅಧ್ಯಕ್ಷ ರವೀಂದ್ರ ಹೊಸಟ್ಟಿ, ಪ್ರಾಥಮಿಕ ಶಕ್ಷಕರ ಸಂಘದ ಅಧ್ಯಕ್ಷ ಎಲ್.ಎಮ್ ಬಡಕಲ, ಕಾರ್ಯದರ್ಶಿಗಳಾದ ಎಡ್ವಿನ್ ಪರಸನ್ನವರ, ಪಿ.ಬಿ ಕುಲಕರ್ಣಿ, ಶಿಕ್ಷಕ ಸಂಘಟನೆಯ ಬಿ.ಎ ಡಾಂಗೆ, ಶಿವಾನಂದ ಕುರಣಗಿ, ಕೆ.ಎಲ್.ಮೀಶಿ, ಅಧಿಕ್ಷಕರಾದ ವೆಂಕಟೇಶ ಜೋಶಿ, ಎಸ್.ಕೆ ಶೇಖ, ತಳವಾರ, ಬಿ.ಎಮ್ ಪಾಟೀಲ, ಮಹಾಂತೇಶ ಹುಬ್ಬಳ್ಳಿ, ಚೇತನ ಕುರಿಹುಲಿ ಹಾಗೂ ಕಛೇರಿ ಸಿಬ್ಬಂದಿ ಹಾಜರಿದ್ದರು.