ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕ್ ರೂ. 1.44 ಕೋಟಿ ಲಾಭ
ಮೂಡಲಗಿ: ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್ ಲಿ. 2023ನೇ ಮಾರ್ಚ ಅಂತ್ಯದಲ್ಲಿ ಒಟ್ಟು ರೂ.1.44 ಕೋಟಿ ಲಾಭವನ್ನು ಗಳಿಸಿದ್ದು ಅದರಲ್ಲಿ ಶಾಸನಬದ್ದ ಪ್ರಾವಧಾನಗಳನ್ನು ಕಡಿತ ಮಾಡಿದ ನಂತರ ಒಟ್ಟು ರೂ. 68 ಲಕ್ಷ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸುಭಾಸ ಗಿ. ಢವಳೇಶ್ವರ ಅವರು ತಿಳಿಸಿದರು.
ಬ್ಯಾಂಕ್‍ನ ಪ್ರಗತಿ ಕುರಿತು ಮಾತನಾಡಿದ ಅವರು ಬ್ಯಾಂಕ್‍ವು ರೂ. 111.87 ಕೋಟಿ ಠೇವು, ರೂ. 72.09 ಕೋಟಿ ಸಾಲಗಳು, ರೂ.6.08 ಕೋಟಿ ನಿಧಿಗಳು, ರೂ. 124.80 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಶೇ. 1.72 ಎನ್‍ಪಿಎ ಮತ್ತು ಶೇ.2.74 ಕಟಬಾಕಿ ಹೊಂದಿದೆ ಎಂದು ತಿಳಿಸಿದರು.
ಬ್ಯಾಂಕ್‍ನ ಉಪಾಧ್ಯಕ್ಷ ನವೀನ ಬಡಗಣ್ಣವರ, ನಿರ್ದೇಶಕರಾದ ಡಾ. ಕೆ.ವಿ. ದಂತಿ, ಎಸ್.ಎಂ. ಗಾಣಿಗೇರ, ಆರ್.ಎಲ್. ವಾಲಿ, ಆರ್.ಬಿ. ನಿರ್ವಾಣಿ, ವಿ.ಸಿ. ಬೆಳಕೂಡ, ಎಂ.ಕೆ. ತಾಂಬೋಳಿ, ಹರೀಶ ಅಂಗಡಿ, ಸುಶೀಲಾ ಸತರಡ್ಡಿ, ಪ್ರಭಾವತಿ ಮುಧೋಳ, ಉಜಾಲಾ ಪೋಳ, ಸೈದಪ್ಪ ಗದಾಡಿ ಹಾಗೂ, ಪ್ರಧಾನ ವ್ಯವಸ್ಥಾಪಕ ಗೌಡಪ್ಪ ವಿ. ಬುದ್ನಿ ಇದ್ದರು.