ಮೂಡಲಗಿ: ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕವು ಸಹಕಾರ ಇಲಾಖೆ ಹಾಗೂ ಭಾರತೀಯ ರಿಸರ್ವ ಬ್ಯಾಂಕಿನ ನಿಯಮಗಳನ್ನು ಪಾಲಿಸಿ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 70.22 ಲಕ್ಷ ರೂ ಲಾಭ ಹೊಂದಿ ಪ್ರಗತಿ ಪಥದತ್ತ ಸಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಗಿ.ಢವಳೇಶ್ವರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರದಂದು ಜರುಗಿದ ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕಿನ 2023-24ನೇ ಸಾಲಿನ 74ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕಿನ ಗ್ರಾಹಕರಿಂದ ಹಣಕಾಸಿನ ವರ್ಗಾವಣೆ ಅನುಕೂಲಕ್ಕಾಗಿ ಮುಂಬರುವ ದಿನಗಳಲ್ಲಿ ಯುಪಿಐ ಹಾಗೂ ಐಎಂಪಿಎಸ್ ಸೌಲಭ್ಯ ಆರಂಭಿಸಲ್ಲಾಗುವುದು, 2023-24ರ ಸಾಲಿನ ಅಂತ್ಯಕ್ಕೆ 7291 ಸದಸ್ಯರನ್ನು ಹೊಂದಿ 2.21 ಕೋಟಿ ಶೇರು ಬಂಡವಾಳ, 8.8ಕೋಟಿ ರೂ ನಿಧಿಗಳು, 10.30 ಕೋಟಿ ಸ್ವಂತ ಬಂಡವಾಳ, 124.20 ಕೋಟಿ ರೂ ಠೇವು ಹೊಂದಿದ್ದು, ಬ್ಯಾಂಕಿನಿಂದ ದುರ್ಬಲ ಹರಿಜನ-ಗಿರಿಜನ ವರ್ಗದವರಿಗೆ ಶೇ.17.63 ಹಾಗೂ ಸಣ್ಣ ಹಾಗೂ ಮದ್ಯಮ ವರ್ಗದವರಿಗೆ 14.11 ಕೋಟಿ ರೂ ಸೇರಿ ಒಟ್ಟು 73.64 ಕೋಟಿ ರೂ ಸಾಲ ವಿತರಿಸಲಾಗಿದೆ, ಬ್ಯಾಂಕಿನ ಠೇವಣಿದಾರ ಭದ್ರತೆಗಾಗಿ ವೀಮೆ ಸೌಲಭ್ಯವನ್ನು ಕಲ್ಪಿಸಲಾಗಿದು, ಶೇರುದಾರರಿಗೆ ಶೇ.10 ರಷ್ಟು ಲಾಭಾಂಶ ನಿರ್ಧರಿಸಲಾಗಿದು, ಅಡಿಟ್‍ದಲ್ಲಿ ‘ಅ’ ಶ್ರೇಣಿಯನ್ನು ಪಡೆದುಕೊಂಡು ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡು ಬಂದಿದೆ ಎಂದರು.
ಬ್ಯಾಂಕಿನ ವೃತಿಪರ ನಿರ್ದೇಶ ಹಾಗೂ ಲೆಕ್ಕಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲಿ 120 ವರ್ಷಗಳ ಇತಿಹಾಸವಿದ್ದು, ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕವು 74 ವರ್ಷಗಳ ಇತಿಹಾಸ ಹೊಂದಿದ್ದು, ಸಿಬ್ಬಂದಿ ಹಾಗೂ ಆಡಳಿ ಮಂಡಳಿ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಯಿಂದ ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ, ಗ್ರಾಹಕರು ನಿರಂತರ ಸಂಪರ್ಕದಲ್ಲಿ ಇದ್ದು ಬ್ಯಾಂಕಿನ ಸೌಲಭ್ಯ ಸದುಪಯೋಗ ಪಡಿಸಿಕೊಂಡ ಆರ್ಥಿಕವಾಗಿ ಸಬಲರಾಬೇಕು ಎಂದ ಅವರು ಇಂದು ಸಹಕಾರಿ ಕ್ಷೇತ್ರದಿಂದ ದೇಶದ ಆರ್ಥಿಕ ಪರಿಸ್ಥಿತಿ ಬಹಳ ಸುಧಾರಿಸಿದೆ ಎಂದರು.
ಸಭೆಯ ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ನವೀನ ಬಡಗಣ್ಣವರ, ರಾಮುದರ್ಗ ಶಾಖಾ ಅಧ್ಯಕ್ಷ ಶ್ರೀಧರ ಪತ್ತೇಪೂರ, ಮುಗಳಖೋಡ ಶಾಖೆಯ ಉಪಾಧ್ಯಕ್ಷ ಬಸವರಾಜ ತೇರದಾಳ, ಹಿರಿಯರಾದ ಚನ್ನಮಲಯ್ಯಾ ನಿರ್ವಾಣಿ, ನಿರ್ದೇಶಕರಾದ ಡಾ.ಕೃಷ್ಣಾಜಿ ದಂತಿ, ಶಿವಲಿಂಗಪ್ಪ ಗಾಣಿಗೇರ, ರಾಚಯ್ಯಾ ನಿರ್ವಾಣಿ, ರುದ್ರಪ್ಪ ವಾಲಿ, ವೀರಪ್ಪ ಬೆಳಕೂಡ, ಹರೀಶ ಅಂಗಡಿ, ಮಹ್ಮದರಫೀಕ ತಾಂಬೋಳಿ, ಸುಶೀಲಾ ಸತರಡ್ಡಿ, ಪ್ರಭಾವತಿ ಮೂಧೋಳ, ಉಜಾಲಾ ಪೋಳ, ಈರಪ್ಪ ಪಾಟೀಲ ಮತ್ತು ಹಳ್ಳೂರ, ರಾಮದುರ್ಗ, ಮುಗಳಖೋಡ ಶಾಖೆಗಳ ಸಲಹಾ ಸಮೀತಿ ಸದಸ್ಯರು ಮತ್ತಿತರರು ಇದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಗೌಡಪ್ಪ ವೆಂ.ಬುದ್ನಿ ವಾರ್ಷಿಕ ವರದಿ ಮಂಡಿಸಿದರು, ಹಳ್ಳೂರ ಶಾಖಾ ವ್ಯವಸ್ಥಾಪಕ ಚಿದಾನಂದ ಢವಳೇಶ್ವರ ಸ್ವಾಗತಿಸಿದರು, ಪ್ರಧಾನ ಕಛೇರಿಯ ಸಹಾಯಕ ವ್ಯವಸ್ಥಾಪಕರಾದ ಮಹೇಶ ಮಡಿವಾಳರ ನಿರೂಪಿಸಿದರು, ಶಿವಾನಂದ ಹಿರೇಮಠ ವಂದಿಸಿದರು.