ಜ.21ರಂದು ಡಿಜಿಟಲ್-ಇ ಸ್ಟಾಂಪ್ ತರಬೇತಿ
ಮೂಡಲಗಿ: ಮೂಡಲಗಿ ಉಪ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ದಸ್ತಾವ್ಭೆಜು ಬರಹಗಾರರು, ವಕೀಲರು, ಗ್ರಾಮ-ಒನ್, ಬಾಪ್ರಜಿ-ಸೇವಾ ಕೇಂದ್ರ, ಕರ್ನಾಟಕ ಒನ್, ಬೆಳಗಾವಿ ಒನ್, ಸ್ಕಿಲ್ ಮೂಲಕ ಇ ಸ್ಟಾಂಪ್ ಮಾರಾಟ ವ್ಯವಸ್ಥೆ ನಿರ್ವಹಿಸುತ್ತಿರುವ ಸಹಕಾರಿ ಸೌಹಾರ್ದಗಳ ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಹಾಗೂ ಡಿಜಿಟಲ್-ಇ ಸ್ಟಾಂಪ್ ಆಸಕ್ತಿ ಹೊಂದಿರುವ ಸಾರ್ವಜನಿಕರಿಗೆ ಮಾಹಿತಿ ಹಾಗೂ ತರಬೇತಿಯನ್ನು ಜ.21ರಂದು ಮದ್ಯಾಹ್ನ 12-30 ರಿಂದ 1-30ರ ವರೆಗೆ ಉಪನೊಂದಣಿ ಕಛೇರಿಯಲ್ಲಿ ನಡೆಯಲಿದೆ. ಈ ತರಬೇತಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪ ನೋಂದಣಾಧಿಕಾರಿ ಓ.ಹರಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News