ಮಾ.11 ರಂದು ವಿವಿಧಡೆ ವಿದ್ಯುತ್ ವ್ಯತ್ಯೆ
ಮೂಡಲಗಿ: ಮೂಡಲಗಿ, ನಾಗನೂರ, ತಿಗಡಿ, ಹಳ್ಳೂರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮಂಗಳವಾರ ಮಾರ್ಚ 11 ರಂದು 4ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಕೊಳ್ಳಲು ಉದ್ದೇಶಿಸಿರುವುದರಿಂದ ಅಂದು ವಿದ್ಯುತ್ ವ್ಯತ್ಯಯ ಉಂಟಾಗಲ್ಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.11 ರಂದು 110 ಕೆವ್ಹಿ ಮೂಡಲಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಮೂಡಲಗಿ ಪಟ್ಟಣ ಮತ್ತು ಗುರ್ಲಾಪೂರ, ಈರಣ್ಣ ನಗರ, ನಾಗನೂರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ನಾಗನೂರ ಪಟ್ಟಣ, ತಿಗಡಿ ವಿದ್ಯುತ್ ವಿತರಣಾ ಕೇಂದ್ರದ ಹೊನಕುಪ್ಪಿ ಮತ್ತು ಖಂಟ್ರಟ್ಟಿ ಎನ್.ಜೆ.ವಾಯ್ ಬರುವ ಎಲ್ಲ ಗ್ರಾಮಗಳಲ್ಲಿ, ಹಳ್ಳೂರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಹಳ್ಳೂರ, ಶಿವಾಪೂರ, ಕಮಲದಿನ್ನಿ, ಖಾನಟ್ಟಿ, ಮುನ್ನಾಳ, ರಂಗಾಪೂರ ಮೇಲೆ ಬರುವ ಎಲ್ಲ ಗ್ರಾಮಗಳಲ್ಲಿ ಮತ್ತು ಎಲ್ಲಾ 11ಕೆವ್ಹಿ ನೀರಾವರಿ ಪಂಪಸೆಟ್ಟ ಮಾರ್ಗಗಳಲ್ಲಿ ಮುಂಜಾನೆ 10:00 ರಿಂದ ಸಂಜೆ 05:00 ಘಂಟೆಯವರೆಗೆ ವಿದ್ಯುತ್ ನಿಲುಗಡೆ ಆಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಮೂಡಲಗಿ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್.ಎಸ್.ನಾಗನ್ನವರ ಪ್ರಕಟೆನೆಯಲ್ಲಿ ತಿಳಿಸಿದ್ದಾರೆ.