ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‍ದಿಂದ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರಂಭದ ಅಂಗವಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಅನೀಲ ಭಂಡಾರಿ ಮಾತನಾಡಿದರು
————————————————
ಕರ್ನಾಟಕದ ಕಂಪು ವಿಶ್ವವ್ಯಾಪ್ತಿಯಾಗಿ ಹರಡಿದೆ
ಮೂಡಲಗಿ: ‘ಕನ್ನಡದ ಹಲವಾರು ಕಟ್ಟಾಳುಗಳು ಮತ್ತು ಮಹನೀಯರ ಹೋರಾಟದ ಫಲವಾಗಿ ಇಂದು ಕರ್ನಾಟಕದ ಕಂಪು ವಿಶ್ವವ್ಯಾಪ್ತಿಯಾಗಿ ಹರಡಿದೆ’ ಎಂದು ನಾಗನೂರ ಅರಣ್ಯಸಿದ್ದೇಶ್ವರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅನೀಲ ಭಂಡಾರಿ ಹೇಳಿದರು.
ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‍ದಿಂದ ಸ್ಥಳೀಯ ಚೈತನ್ಯ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ರಾಜ್ಯೋತ್ಸವ ನಿಮಿತ್ತವಾಗಿ ಆಯೋಜಿಸಿದ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ವಿಯಷ ಕುರಿತು ಉಪನ್ಯಾಸ ನೀಡಿದ ಅವರು ಕನ್ನಡ ನಾಡು ಈ ವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಹೆಮ್ಮೆಯ ನಾಡು ಎಂದರು.
ಸಾನ್ನಿಧ್ಯವಹಿಸಿದ್ದ ವಡೇರಹಟ್ಟಿಯ ಅಂಬಾದರ್ಶನ ಪೀಠದ ನಾರಾಯಣ ಶರಣರು ಮಾತನಾಡಿ
ಎರಡು ಸಾವಿರ ಪೂರ್ವ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು ಹೆಮ್ಮೆ ಸಂಗತಿಯಾಗಿದೆ. ಕನ್ನಡ ಭಾಷೆಗೆ ಎಂದಿಗೂ ಅಳಿವು ಇಲ್ಲ. ಸೂರ್ಯಚಂದ್ರ ಇರುವಷ್ಟೇ ಅದು ಶಾಶ್ವತ ಎಂದರು.
ಹಳಗನ್ನಡದಿಂದ ಹೊಸಗನ್ನಡದತ್ತ ಸಾಗಿದ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನ ಹಿರಿಮೆ, ಗರಿಮೆಯನ್ನು ಮೆರೆದಿದೆ. ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸಿವುದರ ಮೂಲಕ ಹೆಸರಾದ ಕರ್ನಾಟಕವನ್ನು ಉಸಿರಾಗಿಸಿಕೊಳ್ಳಬೇಕು ಎಂದರು.
ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ನಿವೃತ್ತ ಶಿಕ್ಷಕ ಬಸವರಾಜ ತರಕಾರ ಮಾತನಾಡಿದರು.
ಪೂರ್ಣಿಮಾ ಯಲಿಗಾರ, ಶೈಲಜಾ ಬಡಿಗೇರ, ಅನೀಲ ಮಡಿವಾಳರ, ಚಿದಾನಂದ ಹೂಗಾರ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಅಧ್ಯಕ್ಷತೆವಹಿಸಿದ್ದರು.
ವೇದಿಕೆಯಲ್ಲಿ ಬಾಲಶೇಖರ ಬಂದಿ, ಡಾ. ಮಹಾದೇವ ಜಿಡ್ಡಿಮನಿ, ಸಿದ್ರಾಮ್ ದ್ಯಾಗಾನಟ್ಟಿ ವೇದಿಕೆಯಲ್ಲಿ ಇದ್ದರು.
ಗೀತಾ ಹಿರೇಮಠ ನಿರೂಪಿಸಿದರು, ಸಿ.ಎಸ್. ಮೋಹಿತೆ ವಂದಿಸಿದರು.