ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ಆ. 28ರಂದು ಸಂಜೆ 5ಕ್ಕೆ ಡಾ. ಮಹಾದೇವ ಪೋತರಾಜ
ರಚಿಸಿರುವ ‘ಸುವರ್ಣದೀಪ’ ವಚನ ಸಂಕಲನ ಬಿಡುಗಡೆ ಮತ್ತು ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆಯನ್ನು ಮೂಡಲಗಿ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿರುವರು.
ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ವಹಿಸುವರು. ಉದ್ಘಾಟನೆಯನ್ನು
ಡಾ. ರವಿ ಕೊಟನೂರ, ಗ್ರಂಥ ಪಬಿಡುಗಡೆಯನ್ನು ಡಾ. ಚೇತನ ಡಾಗಾ, ಗ್ರಂಥ ಪರಿಚಯವನ್ನು ಪ್ರೊ. ಸಂಗಮೇಶ ಗುಜಗೊಂಡ
ನೆವೇರಿಸುವರು.
ಮುಖ್ಯ ಅತಿಥಿಯಾಗಿ ಬಾಲಶೇಖರ ಬಂದಿ, ಸಿದ್ರಾಮ್ ದ್ಯಾಗಾನಟ್ಟಿ, ಡಾ. ಮಹಾದೇವ ಜಿಡ್ಡಿಮನಿ, ಈಶ್ವರ ಮುರಗೋಡ, ಜಿ.ಕೆ.
ಮುರಗೋಡ, ಡಾ. ಸುರೇಶ ಹನಗಂಡಿ ಜಯಾನಂದ ಮಾದರ, ಧರ್ಮಣ್ಣ ಕಾಂಬಳೆ, ಚಿದಾನಂದ ಹೂಗಾರ, ಶಂಕರ ಪತ್ತಾರ ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.
IN MUDALGI Latest Kannada News