ಮೂಡಲಗಿ : ನಾವು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ಮುಟ್ಟಿದ ತಕ್ಷಣ ಯಶಸ್ಸು ಅನ್ನಲಿಕ್ಕೆ ಆಗಲ್ಲಾ. ಯಶಸ್ಸಿಗೆ ಕೊನೆಯೆ ಇಲ್ಲಾ. ಜೀವನದ ಕೊನೆಯ ಘಟ್ಟದವರೆಗೂ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದೇ ನಿಮ್ಮದಾರಿಯಲ್ಲಿ ನೀವು ಸಾಗಿದರೆ ಅದುವೆ ಯಶಸ್ಸು ಎಂದು ಜಮಖಂಡಿ ತಾಲೂಕಿನ ಮೈಗೂರ ಸರ್ಕಾರಿ ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎಸ್. ಎಮ್ ಕುಂಬಾರ ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ಸನ್ 2025 – 26ನೇ ಸಾಲಿನ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಡಲಗಿ ಶಾಖಾ ವ್ಯವಸ್ಥಾಪಕ ಸಂದೀಪ್ ಹಮಿಲಪುರಕರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಾಳ್ಮೆ ,ಸಕಾರಾತ್ಮಕ ಮತ್ತು ಬೆಳವಣಿಗೆ ಗುಣಗಳನ್ನು ಬೆಳೆಸಿಕೊಂಡು ಸ್ವ ನಿರ್ಧಾರತೆಗೆದುಕೊಳ್ಳುವ ಸಾಮಥ್ರ್ಯ ಮೈಗೂಡಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನ್ ವೆಂಕಟೇಶ್ ಸೋನವಾಲ್ಕರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಾದ ನಾವು ವಿದ್ಯಾರ್ಥಿ ಜೀವನದ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡದೆ ಬಿಡುವಿನ ಸಮಯದಲ್ಲಿ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಕ್ರೀಡಾಸಕ್ತರು ವಿಶಾಲವಾದ ಮೈದಾನವನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಂಡು ಹೆತ್ತ ತಂದೆ ತಾಯಿ ಹಾಗೂ ಕಲಿತ ಕಾಲೇಜಿಗೆ ಹೆಸರು ತರಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹತ್ತನೇ ಏಷ್ಯನ್ ಪ್ಯಾರಾ ಟೇಕ್ಟೊಂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತ 5 ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕು. ಲಕ್ಷ್ಮಿ ಎಮ್ ರಡೇರಟ್ಟಿ, ನಿವೃತ್ತ ಪ್ರಾಚಾರ್ಯ ಪೆÇ್ರ. ಜಿ.ವ್ಹಿ. ನಾಗರಾಜ್, ನಿವೃತ್ತ ಪೆÇ್ರ. ಎಸ್ ಸಿ ಮಂಟೂರ್, ಗ್ರಂಥಾಲಯದ ನಿವೃತ್ತ ಸಿಬ್ಬಂದಿ ಮನೋಹರ್ ಲಮಾಣಿ ಅವರನ್ನು ಶಾಲು ಹೊಂದಿಸಿ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್ ಪಿ ಸೋನವಾಲ್ಕರ ನಿರ್ದೇಶಕರಾದ ಬಿ ಎಚ್ ಸೋನವಾಲ್ಕರ ಎ ವ್ಹಿ ಹೊಸಕೋಟಿ ಎ.ಆಯ್ ಸತರಡ್ಡಿ ಉಪಸ್ಥಿತರಿದ್ದರು.
ಕು. ಅಶ್ವಿನಿ ನಾಯಕವಾಡಿ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರಾಚಾರ್ಯ ಡಾ . ಸುರೇಶ ಚಿತ್ರಗಾರ ಸ್ವಾಗತಿಸಿದರು. ಲೋಕೇಶ ಹಿಡಕಲ್, ಕೆ.ಪಿ ದೋಣಿ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್ ಮಿಸಿನಾಯಿಕ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ವ್ಹಿ ಆರ್ ದೇವರಡ್ಡಿ, ವಿನೋದ್ ಬೈರನಟ್ಟಿ, ಎಮ್ ಎಸ್ ಕುಂದರಗಿ, ಡಾ. ಪವನಕುಮಾರ, ಡಾ. ಬಸವಂತ ಬರಗಾಲಿ, ಭಾರತಿ ತಳವಾರ, ಬಿಎಸ್ ಕಂಬಾರ, ಎಸ್.ಕೆ ಕೊತ್ತಲ, ಪಿ.ಬಿ ಬೆಳಗಲಿ, ಪಿ.ಬಿ ಚೌಡಕಿ, ವ್ಹಿ.ಆರ್ ದೇಶಪಾಂಡೆ, ಎಸ್.ಕೆ ಅಂಗಡಿ, ಎಲ್.ಎಸ್ ಹೊಸಟ್ಟಿ, ಎಸ್ ಪಿ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.