Breaking News
Home / ಬೆಳಗಾವಿ / ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ ‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’

ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ ‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’

Spread the love

ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ

‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’  -ಚನ್ನಬಸು ಬಡ್ಡಿ

ಮೂಡಲಗಿ: ‘ಕ್ರೀಡಾಕೂಟಗಳಿಂದ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಯುತ್ತದೆ’ ಎಂದು ಶ್ರೀ ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಚನ್ನಬಸು ಬಡ್ಡಿ ಹೇಳಿದರು.
ಇಲ್ಲಿಯ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಮಾರ್ನಿಂಗ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಸಹಯೋಗದಲ್ಲಿ ಏರ್ಪಡಿಸಿರುವ ‘ಎಂಪಿಎಲ್-2025’ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಜೀವನೋತ್ಸಾಹಕ್ಕೆ ಕ್ರೀಡೆಗಳು ಟಾನಿಕ್ ಇದ್ದಂತೆ ಎಂದರು.
ಪುರಸಭೆ ಮಾಜಿ ಸದಸ್ಯ ಮಲ್ಲಪ್ಪ ಮದಗುಣಕಿ ಮಾತನಾಡಿ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿ ಮತ್ತು ಕ್ರೀಡಾ ಮನೋಭಾವದಿಂದ ಆಡುವ ಮೂಲಕ ಟೂರ್ನಿಯನ್ನು ಯಶಸ್ಸುಗೊಳಿಸಬೇಕು ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ಕ್ರೀಡೆಗಳು ವ್ಯಕ್ತಿಯಲ್ಲಿ ಕ್ರೀಯಾಶೀಲತೆ ಮತ್ತು ಶಿಸ್ತು ಕಲಿಸಿಕೊಡುತ್ತವೆ. ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಭಾಗವಾಗಬೇಕು ಎಂದರು.
ಎನ್.ಟಿ. ಪಿರೋಜಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿರುವ ಎಂಪಿಎಲ್ ಕ್ರಿಕೆಟ್ ಟೂರ್ನಿಯು ಗ್ರಾಮೀಣ ಭಾಗದ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಕಾರ್ಯಮಾಡುತ್ತಿದೆ. ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಬಹುಮಾನ ಪ್ರಾಯೋಜಕರಾದ ಕಿರಣ ಪ್ರಕಾಶ ಸೋನವಾಲಕರ, ಬಸವೇಶ್ವರ ಅರ್ಬನ ಕೋ.ಆಪ್. ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ, ಗಿರೀಶ ಢವಳೇಶ್ವರ, ಪವರ್‍ಟೆಕ್ ಇಲೆಕ್ಟ್ರೀಟ್ ಬೈಕ್ ಶೋರೂಮ್ ಮಾಲೀಕ ಶ್ರೀಶೈಲ್ ಮದಗನ್ನವರ, ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಶಾಲ ಶೀಲವಂತ, ಸುಪ್ರಿತ್ ಸೋನವಾಲಕರ, ಸಂಜಯ ಮೋಕಾಶಿ ಇವರು ರಿಬ್ಬನ್ ಕತ್ತಿರಿಸುವ ಕ್ರಿಕೆಟ್ ಪಿಚ್‍ವನ್ನು ಅನಾವರಣಗೊಳಿಸಿದರು.
ಸಮಾರಂಭದ ವೇದಿಕೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಂದೀಪ ಸೋನವಾಲಕರ, ಡಾ. ಶಿವು ಹೊಸೂರ, ಪುರಸಭೆ ಸದಸ್ಯ ಹಣಮಂತ ಗುಡ್ಲಮನಿ, ಈರಣ್ಣ ಕೊಣ್ಣೂರ, ಶಿಚು ಚಂಡಕಿ, ಬಸವೇಶ್ವರ ಸೊಸೈಟಿ ನಿರ್ದೇಶಕ ಬಸವರಾಜ ತೇಲಿ, ಪ್ರದಾನ ಕಾರ್ಯದರ್ಶಿ ಬಸವರಾಜ ಬಡಿಗೇರ, ಚೇತನ ನಿಶಾನಿಮಠ, ಶ್ರೀಶೈಲ್ ಲೋಕನ್ನವರ, ಗಿರೀಶ ಆಸಂಗಿ, ಮಲ್ಲು ಕುರಬಗಟ್ಟಿ, ಶಿವಾನಂದ ಗಾಡವಿ, ಸನ್ನಿತ ಸೋನವಾಲಕರ, ಪ್ರವೀಣ ಕುರಬಗಟ್ಟಿ, ಗಿರೀಶ ಮೇತ್ರಿ, ಸೋಮು ಮಠಪತಿ, ಶೇಖರಂಯ್ಯ ಹಿರೇಮಠ, ಲಕ್ಕಪ್ಪ ತಳವಾರ, ಮಹೇಶ ಖಡಕಬಾವಿ, ರವಿ ಪತ್ತಾರ, ಶಿವಬಸು ಭುಜನ್ನವರ ಮತ್ತಿತರರು ಇದ್ದರು.


Spread the love

About inmudalgi

Check Also

ವಿದ್ಯಾರ್ಥಿ ಈರಯ್ಯ ಮತ್ತು ಅಮರ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

Spread the loveಬೆಟಗೇರಿ:ಚಿಕ್ಕೋಡಿ ಶೈಕ್ಷಣೀಕ ಜಿಲ್ಲಾ ಶಿಕ್ಷಣ ಇಲಾಖಾ ಸಹಯೋಗದಲ್ಲಿ ಗೋಕಾಕ ಮಹರ್ಷಿ ವಾಲ್ಮಿಕಿ ಕ್ರೀಡಾಂಗಣದಲ್ಲಿ ಇತೀಚೆಗೆ ನಡೆದ 17 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ