Breaking News
Home / ಬೆಳಗಾವಿ / ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 2.62 ಕೋಟಿ ರೂ ಲಾಭ-ತಡಸನವರ

ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 2.62 ಕೋಟಿ ರೂ ಲಾಭ-ತಡಸನವರ

Spread the love

ಮೂಡಲಗಿ: ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 19 ಶಾಖೆಗಳನ್ನು ಹೊಂದಿ ಸಾಮಾಜಿಕ, ಶೈಕ್ಷಣಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಸಲ್ಲಿಸಿ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 2.62 ಕೋಟಿ ರೂ ಲಾಭಗಳಿಸಿ ಶೇರುದಾರರಿಗೆ ಶೇ.25 ರಷ್ಟು ಲಾಭಾಂಶ ವಿತರಿಸಿ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನವರ ಹೇಳಿದರು.

ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ 31ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಘದ ಸಾಲಗಾರರಿಗೆ ವೀಮೆ ಸೌಲಭ್ಯ ಒದಗಿಸಿದು ಹಾಗೂ ಸದಸ್ಯರ ಮಕ್ಕಳ ಮದುವೆಗೆ ಹಾಗೂ ಸದಸ್ಯರು ಮರಣ ಹೊಂದಿದರೆ ಸಹಾಯ-ಸಹಕಾರ ನೀಡುತ್ತಿದರಿಂದ ಕಷ್ಟ-ಸುಖ:ದಲ್ಲಿ ಭಾಗಿಯಾಗುತ್ತಿದೇವೆ, ನಮ್ಮ ಸಂಘದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪಾರದರ್ಶಕ ಆಡಳಿತ ನಡೆಸಿದರಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತಿದೆ,
300 ಶೇರುದಾರರಿಂದ ಆರಂಭಗೊಂಡ ಸಹಕಾರಿಯ ಸದ್ಯ 12,323 ಶೇರುದಾರನ್ನು ಹೊಂದಿ 97.30 ಲಕ್ಷ ರೂ ಶೇರು ಬಂಡವಾಳ, 13.29 ಕೋಟಿ ನಿಧಿಗಳನ್ನು ಹೊಂದಿ, 32.06 ಕೋಟಿ ರೂ ಹುಡಿಕೆ ಮಾಡಿ 140.91 ಕೋಟಿ ರೂ ಠೇವು ಸಂಗ್ರಹಿಸಿ ವಿವಿಧ ತೇರನಾದ 116.81 ಕೋಟಿ ರೂ ಸಾಲ ವಿತರಿಸಿ ಒಟ್ಟು 158.14 ಕೋಟಿ ರೂ ದುಂಡಿವ ಬಂಡವಾಳ ಹೊಂದಿ 1299 ಕೋಟಿ ರೂ ವ್ಯವಹಾರ ನಡೆಸಿದೆ ಎಂದ ಅವರು ಬೆಟಗೇರಿ ಶಾಖೆಯ ಸ್ವಂತ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ, ಅರಬಾವಿಮಠ ಶಾಖೆಗೆ ನಿವೇಶನ ಖರೀದಿ ಮಾಡಿದ್ದು ಮತ್ತು ತುಕ್ಕಾನಟ್ಟಿ, ಕುಲಗೋಡ, ಹುಲಕುಂದ. ಶಾಖೆಗಳಿಗೆ ಶೀಘ್ರದಲ್ಲಿ ನಿವೇಶನ ಖರೀದಿಸಲಾಗುವದು, ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಪ್ರಧಾನಕಛೇರಿಯ ಕಟ್ಟಡವನ್ನು ನವೀಕರಿಸಲಾಗುವುದು, ಸಹಕಾರಿಗೆ ಚುತಿಬರದಂತೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುತ್ತಿದೆವೆ ಎಂದರು.

ಮಾಜಿ ಸಚಿವ ಹಾಗೂ ಬಡ್ರ್ಸ ಸಂಸ್ಥೆಯ ಅಧ್ಯಕ್ಷ ಆರ್.ಎಮ್.ಪಾಟೀಲ, ಉತ್ತಮ ವಾತವರಣ ನಿರ್ಮಾಣ ಮಾಡುಲು ಸಹಕಾರಿಯ ಪ್ರತಿಯೋಬ್ಬ ಸದಸ್ಯರು ಒಂದೊಂದು ಸಸಿ ನೆಟ್ಟು ಪಾಲನೆ ಫೋಷನೆ ಮಾಡಬೇಕು ಉತ್ತಮ ಆರೋಗ್ಯಕ್ಕಾಗಿ ಸಾವಯವ್ಯ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳಬೇಕೆಂದರು.

ಸುಣಧೋಳಿಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಮತ್ತು ಹಡಗಿನಾಳದ ಮುತ್ತೆಶ್ವರ ಸ್ವಾಮೀಜಿ, ಲೆಕ್ಕ ಪರೀಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸಹಾಕಾರಿ ಸಂಘಗಳು ದೇವಾಲಯ ಇದಂತೆ, ಸಹಾಕಾರಿಯ ಆಡಳಿತ ಮಂಡಳಿ ಶಾಖೆಗಳ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಗುರಿಹೊಂದಿರುವದು ಶ್ಲಾಘನಿಯ, ಗ್ರಾಹಕರು ಯಾವ ಉದ್ದೇಶಕ್ಕಾಗಿ ಪಡೆದ ಸಾಲವನ್ನು ಸರಿಯಾಗಿ ಸದುಉಪಯೋಗ ಮಾಡಿಕೊಂಡು ಸಕಾಲದಲ್ಲಿ ಮರು ಪಾವತಿ ಮಾಡಿ ತಾವು ಆರ್ಥಿಕವಾಗಿ ಸಬಲರಾದರೆ ಸಹಕಾರ ಸಂಘಗಳು ಪ್ರಗತಿ ಹೊಂದುತವೆ ಎಂದರು.

ಸಭೆಯಲ್ಲಿ ರೈತರನ್ನು ಹಾಗೂ ಸಹಕಾರಿ ಆದರ್ಶ ಶಾಖೆ, ಉತ್ತಮ ವ್ಯವಸ್ಥಾಪಕ, ಗುಮಾಸ್ತ, ಸಿಪಾಯಿ, ಪಿಗ್ಮೀ ಸಂಗ್ರಹಕಾರರನ್ನು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಹೆಚ್ಚ ಅಂಕ ಪಡದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಪ್ರೋತ್ಸಾಹಧನ ನೀಡಿ ಗೌರವಿಸಿದರು.
ಸಭೆಯ ವೇದಿಕೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಶಿವಲಿಂಗಪ್ಪಾ ಗೋಟೂರ, ನಿರ್ದೇಶಕರಾದ ವೆಂಕಪ್ಪ ಪೂಜೇರಿ, ಮಲ್ಲಪ್ಪ ಬಂಡಿ, ರುದ್ರಪ್ಪ ಬಾಗೋಜಿ, ಸುಬಾಸ ಸಣ್ಣಕ್ಕಿ, ಶಿವಾನಂದ ದಡ್ಡಿ, ರಾಮಪ್ಪ ಪದ್ದಿ, ಕೆಂಪಣ್ಣಾ ನಿಡಸೋಸಿ, ಶ್ರೇಯಾಂಶ ಮೆಳವಂಕಿ, ದುಂಡಪ್ಪ ಬೆಳಕೂಡ, ವಿಠ್ಠಲ ಬೆಳಕೂಡ, ಬಾಳಪ್ಪ ಬಡಕುಂದ್ರಿ, ರಾಮನಗೌಡ ತಡಸನವರ, ಕೆಂಪಣ್ಣ ಕರಿಹೊಳಿ, ರತ್ನಾ ಪಾಟೀಲ, ಜಯಶ್ರೀ ಕರಿಹೊಳಿ, ಬಿಡಿಸಿಸಿ ಬ್ಯಾಂಕ ನಿವೃತ್ತ ಶಾಖಾ ವ್ಯವಸ್ಥಾಪಕ ಬಾಳಗೌಡ ಪಾಟೀಲ, ವಿವಿಧ ಶಾಖೆಯ ಸಲಹಾ ಸಮೀತಿಯ ಸುಭಾಸ ಮರ್ದಿ, ಈಶ್ವರಪ್ಪ ಸೋಗಲದ, ಮಲ್ಲಪ್ಪ ಕಂಬಿ, ಅಶೋಕ ಬಂಡಿವಡ್ಡರ, ಸಿದ್ದು ಕೋಟಗಿ, ಮಹಾದೇವ ಪತ್ತಾರ, ತಮ್ಮಣ್ಣಾ ಹುಂಡೆಕಾರ, ಶಿವಕುಮಾರ ಜಕಾತಿ, ಗಿರಿಗೌಡ ಪಾಟೀಲ, ವಿಠ್ಠಲ ಕುಕನೂರ, ಈರಪ್ಪ ಸಪ್ತಸಾಗರ, ಬಸವರಾಜ ಬಸೀಡೀಣಿ, ಪ್ರವೀಣ ಕೊಪ್ಪದ, ಭಗವಂತ ಪಾಟೀಲ, ರಾವಸಾಬ ಜಾಧವ, ಬಸವರಾಜ ಜಮಖಂಡಿ, ಅಪ್ಪಣ್ಣ ಇಂಚಲಕರಂಜಿ ಉಪಸ್ಥಿತರಿದ್ದರು.

ಮಯೂರ ಪ್ರಾಥಮಿಕ ಶಾಳೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ರೈತ ಗೀತೆಯನ್ನು ಪ್ರಸ್ತುತಪಡಿಸಿದರು, ರಮೇಶ ಕಂಬಿ ವಾರ್ಷಿಕ ವರದಿ ಮಂಡಿಸಿದರು. ಯರಗಟ್ಟಿ ಶಾಖೆಯ ಸಲಹಾ ಸಮಿತಿಸದಸ್ಯ ರುದ್ರಪ್ಪ ಸಿಂಗಾರಿಗೋಪ್ಪ ನಿರೂಪಿಸಿದರು, ಪ್ರಧಾನ ವ್ಯವಸ್ಥಾಪಕ ಪ್ರಕಾಶ ಅಂಗಡಿ ಸ್ವಾಗತಿಸಿ ವಂದಿಸಿದರು.


Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ