Breaking News
Home / Uncategorized / ಮೂಡಲಗಿಯಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ

ಮೂಡಲಗಿಯಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ

Spread the love

ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ವೃತ್ತಿನಿರತ ಛಾಯಾಗ್ರಾಹಕ ಸಂಘದ ಕಚೇರಿಯಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಅರ್ಜುನ ದೊಂಗಡಿಯವರನ್ನು ಸತ್ಕರಿಸಿ ಗೌರವಿಸಲಾಯಿತು.

ಮೂಡಲಗಿ: ಇಂದಿನ ಯುವಜನತೆ ಹೆಚ್ಚಾಗಿ ಪೋನ್‍ಗಳಲ್ಲಿ ಪೋಟೋಗಳನ್ನು ಕ್ಲಿಕಿಸುತ್ತಿರುವುದರಿಂದ ಛಾಯಾಗ್ರಾಹಕರ ಬದುಕಿಗೆ ಬರೆ ಎಳೆದಂತಾಗಿದೆ ಎಂದು ಹಿರಿಯ ಛಾಯಾಗ್ರಾಹಕ ಅರ್ಜುನ ದೊಂಗಡಿ ಬೆಸರ ವ್ಯಕ್ತಡಿಸಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ವೃತ್ತಿನಿರತ ಛಾಯಾಗ್ರಾಹಕ ಸಂಘದ ಕಚೇರಿಯಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲೇ ಬಡಕುಟುಂಬದಿಂದ ತಮ್ಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಛಾಯಾಗ್ರಾಹಕರಾಗಿ ಉದ್ಯೋಗ ಮಾಡುವಂತ ಜನರಿಗೆ ಕಳೆದ ಮೂರು ವರ್ಷಗಳ ದಿಂದೆ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟ ಅನುಭಿಸಿದ್ದಾರೆ. ಹಾಗಾಗಿ ಜನರೊಂದಿಗೆ ಉತ್ತಮವಾದ ಬಾಂಧವ್ಯದೊಂದಿಗೆ ಈ ವೃತ್ತಿಯನ್ನು ಗೌರವಿಸುವಂತಾಗಬೇಕೆಂದು.
ಇದೇ ವೇಳೆಯಲ್ಲಿ ತಾಲೂಕಿನ ಹಿರಿಯ ಛಾಯಾಗ್ರಾಹಕ ಅರ್ಜುನ ದೊಂಗಡಿಯವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಸಂಘದ ರಾಜ್ಯ ನಿರ್ದೇಶಕ ಮಲ್ಲಿಕಾರ್ಜುನ ಕಂಬಳಿ, ತಾಲೂಕಾಧ್ಯಕ್ಷ ಶಂಕರ ಹಾದಿಮನಿ, ಸುರೇಶ ರಜಪೂತ, ರವಿ ಜಾಧವ, ಪ್ರಕಾಶ ದೊಂಗಡಿ, ಮಹೇಶ ಭಸ್ಮೆ, ಮಧು ಗೌಡ, ರವಿ ಮಹಾಲಿಂಗಪೂರ ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಲಯನ್ಸ್ ಕ್ಲಬ್‍ನ 100ನೇ ಅನ್ನದಾಸೋಹ

Spread the loveಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ