Breaking News
Home / ಬೆಳಗಾವಿ / ಏಯ್ಡ್ಸ್ ಮತ್ತು ಕ್ಷಯ ರೋಗದ ಬಗ್ಗೆ ಎಚ್ಚರವಿರಲಿ : ಜಗದೀಶ ಗೊಂದಿ

ಏಯ್ಡ್ಸ್ ಮತ್ತು ಕ್ಷಯ ರೋಗದ ಬಗ್ಗೆ ಎಚ್ಚರವಿರಲಿ : ಜಗದೀಶ ಗೊಂದಿ

Spread the love

ಮೂಡಲಗಿ : ಯುವ ಜನತೆಗೆ ಏಯ್ಡ್ಸ್ ಮತ್ತು ಕ್ಷಯ ರೋಗದ ಬಗ್ಗೆ ಇಂದಿನ ಜನರ ಸಾಮಾಜಿಕ ಜೀವನದಲ್ಲಿ ಎಚ್ಚರವಹಿಸುವುದು ಅವಶ್ಯಕವಾಗಿದೆ ಎಚ್.ಐ.ವಿ. ರೋಗವು ಅಸುರಕ್ಷಿತ ಲೈಂಗಿಕತೆ ಮತ್ತು ರಕ್ತ ನೀಡುವಲ್ಲಿ-ಪಡೆದು ಕೊಳ್ಳುವಲ್ಲಿ ಮುಂಜಾಗ್ರತೆ ವಹಿಸದೆ ಇರುವುದು ಹಾಗೂ ನಮ್ಮ ಇನ್ನಿತರ ನಿಷ್ಕಾಳಜಿಯಿಂದ ರೋಗ ಉಲ್ಬಣಗೊಳ್ಳುತ್ತದೆ ಮತ್ತು ಕ್ಷಯ ರೋಗವು ಚಳಿಗಾಲದಲ್ಲಿ ಉಲ್ಬಣಗೊಳ್ಳುತ್ತಿದ್ದು ಇಂದಿನ ಆಹಾರ ಪದ್ದತಿ ಜೀವನ ಕ್ರಮಗಳು ಟಿಬಿ ರೋಗದ ಮೇಲೆ ಮಾರಣಾಂತಿಕ ಪರಿಣಾಮ ಬೀರುತ್ತಿದ್ದು ಸಾಂಕ್ರಾಮಿಕ ರೋಗಗಳಿಂದಲ್ಲೂ ಯುವವಿದ್ಯಾರ್ಥಿಗಳು ಎಚ್ಚರ ವಹಿಸುವುದು ಅಗತ್ಯವಿದೆ ಎಂದು ಮೂಡಲಗಿ ಸರಕಾರಿ ಆಸ್ಪತ್ರೆಯ ಕ್ಷಯ ರೋಗದ ಹಿರಿಯ ಮೇಲ್ವಿಚಾರಕರಾದ ಜಗದೀಶ ಗೊಂದಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಘಟಕದಡಿಯಲ್ಲಿ ರೆಡ್ ರಿಬ್ಬನ್ ಕ್ಲಬ್‍ನ ಮೂಲಕ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ದೇಶದಲ್ಲಿ ಕ್ಷಯ ರೋಗ ಶೇಕಡ 70ರಷ್ಟು ಜನರಲ್ಲಿ ಪ್ರಾಥಮಿಕ ಹಂತದಲ್ಲಿ ಕಂಡುಬರುತ್ತಿದ್ದು ರೋಗದ ಲಕ್ಷಣಗಳಾದ ಕಪ್ ಬರುವುದು ಒಂದು ತಿಂಗಳವರೆಗೆ ಎದೆ ನೋವು ಮತ್ತು ಸಾಯಂಕಾಲ ಜ್ವರ ಬರುವುದು ಕಂಡು ಬಂದರೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣಿ ಮತ್ತು 2 ಲಕ್ಷ ಮೊತ್ತದವರೆಗೆ ಉಚಿತ ವೈದ್ಯಕೀಯ ಚಿಕತ್ಸೆಯ ನೆರವು ಇರುವುದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸುರಕ್ಷತೆಯ ಸಲುವಾಗಿ ಸರಕಾರಿ ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.

ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಆಯ್.ಸಿ.ಟಿ.ಸಿ ಸಲಹೆಗಾರರಾದ ಲತಾ ನಾಯಿಕ್ ಮಾತನಾಡಿ ಎಚ್.ಆಯ್.ವಿ ಎಯ್ಡ್ಸ್ ರೋಗವು ಯುವಕರಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದ ಭಾಗದÀಲ್ಲಿ ಕಂಡುಬರುತ್ತಿದ್ದು ರೋಗದ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯವಾಗಿದೆ ಅಲ್ಲದೇ ಕೇಂದ್ರ ರಾಜ್ಯ ಸರಕಾರಗಳು ಏಯ್ಡ್ಸ್ ರೋಗದ ನಿಯಂತ್ರಣಕ್ಕೆ ಅನೇಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ವೈದ್ಯಕೀಯ ನೆರವು ನೀಡುತ್ತಿದ್ದು ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಎಚ್ಚರವಿರಲಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಏಯ್ಡ್ಸ್ ಮತ್ತು ಕ್ಷಯ ರೋಗ ಬಾರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಘಟಕಾಧಿಕಾರಿ ಶಾಹೀನ ಕುರಬೇಟ ಉಪನ್ಯಾಸಕರಾದ ಸಂಜೀವ ಮಂಟೂರ, ಬಿ.ಎಂ. ಕಬ್ಬೂರೆ, ಕವಿತಾ ಮಳಲಿ, ಸವಿತಾ ಪಡದಲ್ಲಿ ಅಕ್ಷತಾ ಹೊಸಮನಿ ಇತರರು ಹಾಜರಿದ್ದರು.
ಉಪನ್ಯಾಸಕ ಡಾ. ಪ್ರಶಾಂತ ಮಾವರಕರ, ಸ್ವಾಗತಿಸಿದರು, ವಿದ್ಯಾರ್ಥಿನಿ ಶಿಲ್ಪಾ ಕುಂದರಗಿ ನಿರೂಪಿಸಿದರು ವಿದ್ಯಾರ್ಥಿನಿ ಶ್ರೀದೇವಿ ಮಾದರ ವಂದಿಸಿದರು.


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ