Breaking News
Home / ಬೆಳಗಾವಿ / ಕಠಿಣ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಕ್ರೀಡಾ ಯಶಸ್ಸು ತಂದು ಕೊಡುತ್ತದೆ – ಸಂಗಮೇಶ ಹಳ್ಳೂರ

ಕಠಿಣ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಕ್ರೀಡಾ ಯಶಸ್ಸು ತಂದು ಕೊಡುತ್ತದೆ – ಸಂಗಮೇಶ ಹಳ್ಳೂರ

Spread the love

ಕಠಿಣ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಕ್ರೀಡಾ ಯಶಸ್ಸು ತಂದು ಕೊಡುತ್ತದೆ – ಸಂಗಮೇಶ ಹಳ್ಳೂರ

ಮೂಡಲಗಿ : ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ಕ್ರೀಡಾ ಯಶಸ್ಸು ತಂದು ಕೊಡುತ್ತದೆ ದೃಢ ಸಂಕಲ್ಪ ಮತ್ತು ಕ್ರೀಡಾ ಅರ್ಪಣಾ ಮನೋಭಾ ವಗಳು ನಿಮ್ಮಲ್ಲಿದ್ದರೆ ನಿಮ್ಮ ಸಾಧನೆಗಳಿಗೆ ಮೇರೆಗಳು ಇರುವುದಿಲ್ಲ ಯಶಸ್ಸು ಸಿಗದ ಖುಷಿಗೆ ನನಸಾಗುವಂತೆ ಆಸೆ ಪಡುವುದು ಮೂರ್ಖತನ ಪ್ರತಿಭೆ ಇದ್ದ ಕಡೆ ಕನಸ್ಸು ಕಟ್ಟಿ ಬದುಕುವುದೇ ಜೀವನವಾಗಬೇಕೆಂದು ಶ್ರೀವಿದ್ಯಾನಿಕೇತನ ಕನ್ನಡ ಮಾಧ್ಯಮದ ಪ್ರಾಥಮಿಕ & ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಸಂಗಮೇಶ ಹಳ್ಳೂರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಸಿ.ಬಿ.ಎಸ್.ಇ. ಶಾಲೆಯಲ್ಲಿ ಜರುಗಿದ ಅಥ್ಲೇಟಿಕ್ಸ್

ಕ್ರೀಡಾ ಕೂಟದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾಮನೋಭಾವನೆಯನ್ನು ಬೆಳಸುವದರ ಜೊತೆಗೆ ನಮ್ಮ ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಿ ದೀರ್ಘಕಾಲದ ಜೀವನಕ್ಕೆ ಆಧಾರ ಸ್ತಂಭಗಳಾಗಿ ನೀಲ್ಲುತ್ತದೆ ಎಂದರು.
ಶಾಲೆಯ ಪ್ರಾಚಾರ್ಯ ಜೋಶಫ್ ಬೈಲಾ ಮಾತನಾಡಿ ಜಗತ್ತಿನಲ್ಲಿ ಕ್ರೀಡಾ ಸಾಧಕರ ಜೀವನ ಅವಲೋಕಿಸಿದಾಗ ಸೋಲದೆ ಗೆದ್ದವರು ಯಾರು ಇಲ್ಲ ಸೋತು ಗೆದ್ದವರೇ ಸಾದಕರಾಗಿದ್ದಾರೆ ಅಂತಹ ಸಾಧಕರ ಜೀವನ ನಮ್ಮನ್ನು ಕ್ರೀಡಾ ಚಟುವಟಿಕೆಯಲ್ಲಿ ನಾವು ಪಾಲ್ಗೋಳ್ಳುವಂತೆ ಪ್ರೇರಣೆ ನೀಡುತ್ತದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಸಂತೋಷ ಪಾರ್ಶಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಕ್ರೀಡಾ ಮನೋಭಾವಗಳನ್ನು ಬೆಳಸಿಕೊಳ್ಳಲು ನಮ್ಮ ಜೀವನವೇ ಒಂದು ಛಲವಾಗಿರಬೇಕು. ಕ್ರೀಡೆ ಸೋಲು ಗೆಲುವಿನ ಆಟ ಗೆದ್ದವನಿಗೆ ಸೋಲಬಾರದು ಎಂಬ ಭಯ ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ ಪ್ರಯತ್ನವನ್ನು ಎಂದಿಗೊ ನಿಲ್ಲಿಸಬೇಡಿ ಭರವಸೆಯನ್ನು ಯಾವತ್ತಿಗೊ ಕಳೆದುಕೊಳ್ಳಬೇಡಿ ನಿಮ್ಮ ದಿನ ಬಂದೇ ಬರುತ್ತದೆ ಎಂದು ಕ್ರೀಡಾ ಸ್ಪೂರ್ತಿಯನ್ನು ಮಕ್ಕಳಲ್ಲಿ ತುಂಬಿದರು.


ಶಾಲೆಯ ದೈಹಿಕ ಶಿಕ್ಷಕರಾದ ಮೋಶಿನ್ ಜಮಖಂಡಿ ಸುಹಾಸಿನಿ ಮಗದುಮ್ಮ ವಿದ್ಯಾರ್ಥಿಗಳಿಗೆ ವಿವಿದ ಕ್ರೀಡೆಗಳನ್ನು ಸಂಘಟಿಸಿ ಮಕ್ಕಳಲ್ಲಿ ಕ್ರೀಡಾಭಿಮಾನವನ್ನು ಬೆಳಸಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕರು ಪಾಲಕರು ಹಾಜರಿದ್ದರು ಶಿಕ್ಷಕಿ ಸುನೀತಾ ಸುಣದೋಳಿ ನಿರೂಪಿಸಿದರು ಕುಮಾರಿ ನಸೀಮಾ ಕೆಸರಟ್ಟಿ ಸ್ವಾಗತಿಸಿದರು ಶಿಕ್ಷಕ ಅಪ್ಪಣ್ಣಾ ಮಂಗಸೂಳಿ ವಂದಿಸಿದರು.


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ