Breaking News
Home / ಬೆಳಗಾವಿ / ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್‍ಎಸ್‍ಎಸ್ ಶಿಬಿರಗಳು ಪ್ರೇರಣೆ ನೀಡುತ್ತೇವೆ – ಕೃಷ್ಣಪ್ಪ ಲ. ಚಿನ್ನಾಕಟ್ಟಿ

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್‍ಎಸ್‍ಎಸ್ ಶಿಬಿರಗಳು ಪ್ರೇರಣೆ ನೀಡುತ್ತೇವೆ – ಕೃಷ್ಣಪ್ಪ ಲ. ಚಿನ್ನಾಕಟ್ಟಿ

Spread the love

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್‍ಎಸ್‍ಎಸ್ ಶಿಬಿರಗಳು ಪ್ರೇರಣೆ ನೀಡುತ್ತೇವೆ – ಕೃಷ್ಣಪ್ಪ ಲ. ಚಿನ್ನಾಕಟ್ಟಿ

 

ಮೂಡಲಗಿ : ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್.ಎಸ್.ಎಸ್. ಪಾತ್ರ ಬಹುಮುಖ್ಯವಾದದ್ದು ಇಂದಿನ ಯುವಕರು ಪಟ್ಟಣದ ಜೀವನಕ್ಕೆ ಅಣಿಯಾಗುತ್ತಿದ್ದು ಗ್ರಾಮೀಣ ಸಮಾಜದ ಮೌಲ್ಯಗಳ ಅರಿವು ಇಲ್ಲದಂತಾಗಿದೆ. ಅಲ್ಲದೇ ಗ್ರಾಮೀಣ ಸಮಾಜದ ಸಂಸ್ಕøತಿ ಸಂಪ್ರದಾಯ ಹಾಗೂ ಜನಜೀವನ ನಿಜವಾದ ಅರಿವು ಪಡೆದಾಗ ಮಾತ್ರ ಸರಿಯಾದ ವ್ಯಕ್ತಿತ್ವ ಬೆಳಸಿಕೊಳ್ಳಲು ಸಾಧ್ಯ ಎಂದು ಪಟಗುಂದಿಯ ಪಿ.ಕೆ.ಪಿ.ಎಸ್. ಬ್ಯಾಂಕಿನ ಉಪಾಧ್ಯಕ್ಷರಾದ ಕೃಷ್ಣಪ್ಪಾ ಚಿನ್ನಾಕಟ್ಟಿ ಹೇಳಿದರು.


ಮೂಡಲಗಿ ಪಟ್ಟಣದ ಸಮೀಪದ ಪಟಗುಂದಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಆಧುನಿಕ ಜೀವನದ ಆಡಂಬರದಲ್ಲಿ ನಮ್ಮ ಗ್ರಾಮೀಣ ಸಮಾಜದ ಮೌಲ್ಯಗಳು ಸಂಪ್ರದಾಯಗಳು, ಪರಂಪರೆ, ಸಂಸ್ಕøತಿ, ಕಲೆ, ಸಾಹಿತ್ಯ ನಶಸಿ ಹೋಗುತ್ತಿದ್ದು ನಗರ ಜೀವನ ಸುಖಮಯವಾಗಿದ್ದು ನಿಜವಾದ ನಮ್ಮದಿ ಇರುವುದಿಲ್ಲ ನಿಜವಾದ ನಮ್ಮದಿ ಪ್ರೀತಿ ಸ್ನೇಹತ್ವದ ಗುಣಗಳು ಮತ್ತು ಜೀವನವನ್ನು ಅರಿತು ನಡೆಯುವ ಚಿಂತನೆಗಳು ಗ್ರಾಮೀಣ ಸಮಾಜದಿಂದ ಮಾತ್ರ ದೊರೆಯಲು ಸಾಧ್ಯವಿದೆ ಎಂದರು.
ಕಾಲೇಜಿನ ಉಪನ್ಯಾಸಕ ಸಂಗಮೇಶ ಕುಂಬಾರ ಮಾತನಾಡಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಪರಿಭಾವನೆಯನ್ನು ಮೂಡಿಸುವ ಉದೇಶವನ್ನು ಹೊಂದಿ ಎನ್.ಎಸ್.ಎಸ್. ಸದಸ್ಯತ್ವ ಪಡೆದು ಕೊಂಡು ವಿದ್ಯಾರ್ಥಿ ಜೀವನದ ಜೊತೆಗೆ ಸ್ವಯಂ ಸೇವಕರಾಗಿ ನಿಸ್ವಾರ್ಥ ಸಮಾಜ ಸೇವಾ ಕಾರ್ಯವನ್ನು ನಿರ್ವಹಿಸಿ ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ಎನ್.ಎಸ್.ಎಸ್. ಶಿಬಿರಗಳು ನೀಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಡಿ. ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿಕೊಂಡು ಮಾತನಾಡುತ್ತಾ ಎನ್.ಎಸ್.ಎಸ್. ಶಿಬಿರಗಳು ಸಮಾಜ ಸೇವಾ ಮನೋಭಾವನೆ ಜೊತೆಗೆ ನಿಸ್ವಾರ್ಥತೆಯಿಂದ ಕೊಡಿದ್ದು ಅದರಲ್ಲಿ ತೊಡಗುವರು ಶ್ರದ್ದೆ, ಭಕ್ತಿಯಿಂದ ಸಾಮಾಜಿಕ ಕಾಯಕದೊಂದಿಗೆ ತೊಡಗಿಕೊಳ್ಳುವುದು ಅವಶ್ಯವಿದೆ ಎಂದರು.
ಪಟಗುಂದಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮೀನಾಕ್ಷಿ ಬ. ಅಂಗಡಿ, ಊರಿನ ಹಿರಿಯರಾದ ರಾಮಗೌಡ ಬಾ ಪಾಟೀಲ, ಪಿ.ಕೆ.ಪಿಎಸ್. ಬ್ಯಾಂಕಿನ ಅಧ್ಯಕ್ಷರಾದ ಮಲ್ಲಪ್ಪಾ ಬ ಸಲ್ಲಾಗೋಳ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳಾದ ರಾಜು ಕೊಳದೂರ, ಶಿವಬಸು ಗುಡ್ಲಿ ಕಾಲೇಜು ಪ್ರಾಚಾರ್ಯ ಸತ್ಯೆಪ್ಪಾ ಗೋಟುರೆ ಪಿ ಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ ಭೀರಪ್ಪ ಕಬ್ಬೂರೆ, ಸುಭಾಸ ಮಾಲೋಜಿ. ಮತ್ತಿತ್ತರರು ಹಾಜರಿದ್ದರು

ರೇಣುಕಾ ಹಳಸಿ ನಿರೂಪಿಸಿದರು ಸೌಭಾಗ್ಯ ಸಾಯನ್ನವರ ಸ್ವಾಗತಿಸಿದರು ಲಕ್ಷ್ಮೀ ಗೊರಗುದ್ದಿ ವಂದಿಸಿದರು.


Spread the love

About inmudalgi

Check Also

ಕೌಜಲಗಿ- ಹೊನಕುಪ್ಪಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ: ಆರ್ಡಿಪಿಆರ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ