ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಎಸ್. ಎನ್. ಕುಂಬಾರ.
ಮೂಡಲಗಿ : ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದ್ದು ಇಂದು ಮಾನವ ನಿರಂತರವಾಗಿ ಪರಿಸರದ ಮೇಲೆ ತನ್ನದೇಯಾದ ಆಕ್ರಮಣ ಮಾಡುತ್ತಿದ್ದು ನೈಸರ್ಗಿಕವಾಗಿ ಇರುವ ಸಸ್ಯ ಹಾಗೂ ಪ್ರಾಣಿ ಸಂಪತ್ತು ನಾಶವಾಗುತ್ತಿದ್ದು ಸಸ್ಯ ಪ್ರಾಣಿ ಪ್ರಭೇದಗಳು ಅಳುವಿನ ಅಂಚಿನಲ್ಲಿವೆ ಅಲ್ಲದೇ ಕೈಗಾರಿಕೆಗಳ ಅಬ್ಬರ ಬೆಟ್ಟ ಗುಡ್ಡ ನದಿಗಳು ತನ್ನ ಆಸ್ತಿತ್ವ ಕಳೆದು ಕೊಳ್ಳುತ್ತಿವೆ ಮನುಷ್ಯ ತನ್ನ ಸಂತತಿಯ ಉಳಿವಿಗಾಗಿ ನೈರ್ಸಗಿಕ ಪ್ರಾಣಿ ಸಸ್ಯ ಪಕ್ಷಿ ಹಾಗೂ ಬೆಟ್ಟ ಗುಡ್ಡ ನದಿಗಳ ಸಂರಕ್ಷಣೆಗಾಗಿ ವಿಶೇಷ ಜಾಗೃತಿ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಮೂಡಲಗಿಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ವಿಷಯದ ಉಪನ್ಯಾಸಕ ಎಸ್.ಎನ್. ಕುಂಬಾರ ಹೇಳಿದರು.
ಮೂಡಲಗಿ ಸಮೀಪದ ಪಟಗುಂದಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಮಾತನಾಡಿ ನಿಸರ್ಗ ಜೀವ ಸಂಕುಲಗಳ ಆಶ್ರಯದಾಮವಾಗಿದ್ದು ಇಂದಿನ ತಾಂತ್ರಿಕತೆ ಮತ್ತು ವೈಜ್ಞಾನಿಕತೆಯ ಅಭಿವೃದ್ಧಿಯ ಹೆಸರಿನ ಮೇಲೆ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡುತ್ತಿದ್ದು ಅವುಗಳ ಸಂರಕ್ಷಣೆಯಲ್ಲಿ ಇಂದಿನ ಯುವ ಸಮುದಾಯ ತೊಡಗುವುದು ಅವಶ್ಯವಿದೆ ಎಂದರು.
ಪದವಿ ಕಾಲೇಜಿನ ಉಪನ್ಯಾಸಕಿ ಸವಿತಾ ಪಡದಲ್ಲಿ ಮಾತನಾಡಿ ನೈಸರ್ಗಿಕ ಸಂಪನ್ಮೂಲಗಳು ಮಾನವನ ಬದುಕಿಗೆ ಮಹತ್ವದಾಗಿರುತ್ತವೆ ಅವುಗಳಲ್ಲಿ ಕೆಲವೂಂದು ಸಂಪನ್ಮೂಲಗಳು ಮಗಿದು ಹೋಗುವ ಸಂಪನ್ಮೂಲಗಳಾಗಿದ್ದು ಅವುಗಳ ಬಗ್ಗೆ ಇಂದು ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ನೈಸರ್ಗಿಕ ಸಂಪನ್ಮೂಲಗಳು ನಮ್ಮ ಅಗತ್ಯತೆಗಳನ್ನು ಪೂರೈಸುವ ಮತ್ತು ನಮ್ಮಬದುಕಿಗೆ ಆಶ್ರಯಗಳಾಗಿವೆ ಅವುಗಳ ವಿಪರೀತ ಬಳಿಕೆಯಿಂದ ನಾಶವಾಗುತ್ತಿದ್ದು ಅವುಗಳ ಕುರಿತು ನಾವುಗಳು ಎಲ್ಲರೂ ಎಚ್ಚರಿಕೆ ವಹಿಸಿ ಸಂರಕ್ಷಣೆ ಮಾಡುವುದು ಅಗತ್ಯವಿದೆ ಎಂದರು.
ಪಟಗುಂದಿ ಗ್ರಾಮದ ಹಿರಿಯರಾದ ನಾಯ್ಕಪ್ಪ ದ್ಯಾ. ನಾಯ್ಕ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮತ್ತು ದೇಶದ ಆರ್ಥಿಕತೆ ಹೆಚ್ಚಿಸುವಲ್ಲಿ ನೈಸರ್ಗಿಕ ಸಂಪನ್ಮೂಲಗಳ ಪಾತ್ರ ಮಹತ್ವದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಿ.ಕೆ.ಪಿಎಸ್. ಬ್ಯಾಂಕಿನ ನಿರ್ದೇಶಕರಾದ ಕೆಂಪಣ್ಣಾ ಸಿ. ಪಾಟೀಲ ಶಾಲೆಯ ಪ್ರಧಾನ ಗುರುಗಳಾದ ರಾಜು ಕೊಳದೂರ, ಶಿವಬಸು ಗುಡ್ಲಿ ಉಪನ್ಯಾಸಕ ಸುನೀಲ ಸತ್ತಿ ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ ಭೀರಪ್ಪ ಕಬ್ಬೂರೆ, ಮತ್ತಿತ್ತರರು ಹಾಜರಿದ್ದರು.
ಸೌಜನ್ಯ ಮೂಡಲಗಿ ನಿರೂಪಿಸಿದರು ಐಶ್ವರ್ಯ ಉಪ್ಪಾರ ಸ್ವಾಗತಿಸಿದರು ಕಾವೇರಿ ಉಪ್ಪಾರ ವಂದಿಸಿದರು.