ಮೂಡಲಗಿ: ನಮ್ಮ ಭಾರತ ದೇಶವನ್ನು ಮತ್ತು ದೇಶದ ಗಡಿಯನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ತಮ್ಮ ಪ್ರಾಣವನ್ನು ಲೆಕ್ಕಸದೇ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಸೇವೆ ಅವಿಸ್ಮರಣಿಯವಾಗಿದ್ದು ಸೈನಿಕರ ಸೇವೆ ದೇಶಪ್ರೇಮ, ದೇಶಭಕ್ತಿ ನಮ್ಮೆಲ್ಲರಿಗೆ ಹೆಮ್ಮೆ ತರುವಂತಹ ಸಂಗತಿಯಾಗಿದೆ. ನಾವುಗಳು ಸೈನಿಕರಿಗೆ ಗೌರವ ಕೊಡುವುದರೊಂದಿಗೆ ಅವರ ತ್ಯಾಗ ಮತ್ತು ಬಲಿದಾನವನ್ನು ಪ್ರತಿನಿತ್ಯ ಸ್ಮರಿಸಿಕೊಳ್ಳುವುದು ಅಗತ್ಯವಿದ್ದು ದೇಶಕ್ಕಾಗಿ ವೀರಮರಣ ಹೊಂದಿದ ಸೈನಿಕರನ್ನು ಗೌರವಿಸೋಣ ಎಂದು ಮೂಡಲಗಿಯ ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ತಮ್ಮಣ್ಣ ಪಾರ್ಶಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣ ಪಂಚಾಯಿತಿಯಲ್ಲಿ ಮೂಡಲಗಿಯ ಆರ್‍ಡಿಎಸ್ ಶ್ರೀ ವಿದ್ಯಾನಿಕೇತನ ಸಿಬಿಎಸ್‍ಸಿ ಶಾಲೆಯಿಂದ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ವೀರಮರಣ ಹೊಂದಿದ ಯೋದರಿಗೆ ಗೌರವನಮನ ಸಲ್ಲಿಸಿ ಮಾತನಾಡಿ ಯೋಧರು ಮಳೆ- ಬಿಸಿಲು ಚಳಿ ಎನ್ನದೆ ಹಗಲು- ರಾತ್ರಿ ಜೀವದ ಹಂಗುತೊರದು ದೇಶದ ರಕ್ಷಣೆ ಮಾಡುತ್ತಾರೆ. ವಿಶ್ವದಲ್ಲಿ ನಮ್ಮ ದೇಶದ ಸೈನಿಕ ಶಕ್ತಿ ಬಲಾಢ್ಯವಾಗಿದ್ದು. ಸೈನಿಕರಂತೆ ನಮಗೆ ಅನ್ನನೀಡುವ ರೈತರು ಸಹಿತ ನಮ್ಮ ದೇಶದ ಶಕ್ತಿಯಾಗಿದ್ದು ವಿದ್ಯಾರ್ಥಿಗಳಲ್ಲಿ ಸೈನಿಕರ ಮತ್ತು ರೈತರನ್ನು ಗೌರವಿಸುವ ಪ್ರವೃತ್ತಿ ಬೆಳಸುವುದು ಅಗತ್ಯವಿದೆ ಎಂದರು.
ಶಾಲೆಯ ಪ್ರಾಚಾರ್ಯ ದ್ರಾಕ್ಷಾಯಿಣಿ ಮಠಪತಿ ಮಾತನಾಡಿ ದೇಶದ ರಕ್ಷಣೆಯಲ್ಲಿ ಸೈನಿಕರು ಬಹುದೊಡ್ಡ ಪಾತ್ರ ವಹಿಸುತ್ತಾರೆ. ತಮ್ಮ ಕುಟುಂಬ ತೊರೆದು ನಿಸ್ವಾರ್ಥ ದೇಶ ಸೇವೆ ಮಾಡುವ ವೀರಯೋಧರ ಇದ್ದಾಗಲೇ ಅಖಂಡ ಭಾರತದ ಸಾರ್ವಭೌಮತ್ವಕ್ಕೆ ಸ್ಪೂರ್ತಿ ತುಂಬುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಭಾರತ ಮಾತೆಯ ಜೈ ಘೋಷ ಮತ್ತು ಸೈನಿಕರಿಗೆ ಗೌರವವಂದನೆ ಮುಖಾಂತರ ವೀರಯೋಧರಿಗೆ ನಮನಗಳನ್ನು ಅರ್ಪಿಸಿದರು.
ಸೈನಿಕ ಸೇವೆಯಲ್ಲಿ ಹುತಾತ್ಮರಾದ ವೀರಯೋಧರ ತಂದೆತಾಯಿಗಳಾದ ಸುರೇಶ್ ಗುಂಡಪ್ಪಗೋಳ ಸೋನಾ ಗುಂಡಪ್ಪಗೋಳ ಸುಭಾಷ್ ಖಾನಗೌಡರ ಅವರನ್ನು ಆರ್ ಡಿ ಎಸ್. ವಿದ್ಯಾನಿಕೇತನ ಸಿ ಬಿ ಎಸ್ ಇ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ, ಮಾಜಿ ಸೈನಿಕರ ಸಂಘದ ತಾಲೂಕ ಅಧ್ಯಕ್ಷರಾದ ರಾಜು ದಬಾಡಿ ಉಪಾಧ್ಯಕ್ಷರಾದ ಹಣಮಂತ ಕುರಬೇಟ ಚರಣ ಮರಳಿಮಠ ಕಲ್ಲೋಳಿಯ ಪಟ್ಟಣಪಂಚಾಯತ ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಶಿಕ್ಷಕರಾದ ವಿವೇಕ ರೊಳ್ಳಿ ನಿರೂಪಿಸಿದರು ಕುಮಾರಸ್ವಾಮಿ ಸ್ವಾಗತಿಸಿದರು ರಾಘವೇಂದ್ರ ಕಾಂಬಳೆ ವಂದಿಸಿದರು.