Breaking News
Home / ಬೆಳಗಾವಿ / ಮಹಿಳಾ ದೌರ್ಜನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ – ನ್ಯಾಯವಾದಿ ಲಕ್ಷ್ಮಣ ಅಡಿಹುಡಿ

ಮಹಿಳಾ ದೌರ್ಜನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ – ನ್ಯಾಯವಾದಿ ಲಕ್ಷ್ಮಣ ಅಡಿಹುಡಿ

Spread the love

ಮೂಡಲಗಿ : ಮಹಿಳಾ ದೌರ್ಜನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು ಇಂದಿನ ಸಮಾಜದಲ್ಲಿ ಮಹಿಳೆಯರ ಮೇಲೆ ಜರುಗುವ ಲೈಂಗಿಕ ದೌರ್ಜನ್ಯಗಳು ಸರ್ವೇಸಾಮಾನ್ಯವಾಗಿದ್ದು ಕಾನೂನು ಅರಿವು ಇಲ್ಲದೇ ಮಹಿಳೆಯರ ಮೇಲೆ ಯುವಕರು ದೌರ್ಜನ್ಯ ಎಸಗಿ ತಪ್ಪು ದಾರಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವನ ಹಾಳುಮಾಡಿಕೊಳ್ಳುವದರ ಜೊತೆಗೆ ಮಹಿಳೆಯರ ಜೀವನಕ್ಕೂ ಕಂಟಕರಾಗುತ್ತಿದ್ದು ಕಾನೂನು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಉಗ್ರವಾದ ಶಿಕ್ಷೆ ನೀಡುತ್ತಿದ್ದು ಅಪರಾಧ ಪ್ರವೃತಿಯಿಂದ ಇಂದಿನ ವಿದ್ಯಾರ್ಥಿಗಳು ದೂರ ಇರಬೇಕು ಓದು ಜೀವನದ ಮುಖ್ಯ ಬಾಗವಾಗಿ ಆಯ್ಕೆ ಮಾಡಿಕೊಂಡು ಯೋಗ್ಯವಾದ ಮಾರ್ಗದಲ್ಲಿ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬೇಕೆಂದು ಮೂಡಲಗಿಯ ಶ್ರೀಮಂಜುನಾಥ ಸೈನಿಕ ತರಬೇತಿ ಕೇಂದ್ರದ ಮುಖ್ಯಸ್ಥ ಹಾಗೂ ವಕೀಲರಾದ ಲಕ್ಷ್ಮಣ ಅಡಿಹುಡಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ & ವಿಜ್ಞಾನ ಪದವಿ ಮಹಾವಿದ್ಯಾಲಯದ ಆಯ್‍ಕ್ಯೂಎಸಿ & ಎನ್‍ಎಸ್‍ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಲೈಂಗಿಕ ದೌರ್ಜನ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಸಾಮಾಜಿಕ ಮಾಧ್ಯಮಗಳನ್ನು ಬಳಿಸಿಕೊಂಡು ಮಹಿಳೆಯರಿಗೆ ಅಶ್ಲೀಲ ಮೇಸಜ್ ಚಿತ್ರ ಕಳುಹಿಸುವುದು ಚಾಟ್ ಮಾಡುವುದು & ರಸ್ತೆಯಲ್ಲಿ, ತರಗತಿಗಳಲ್ಲಿ ಮಹಿಳಾ ವಿದ್ಯಾರ್ಥಿಗಳನ್ನು ನಿಂದಿಸುವುದು ಕೆಲಸ ಕಾರ್ಯಗಳಲ್ಲಿ ಮಹಿಳೆಯರನ್ನು ವೈಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳುವುದು ಕೆಟ್ಟ ದೃಷ್ಟಿಯಿಂದ ಮಹಿಳೆಯನ್ನು ನೋಡುವುದು ಅಪ್ರಾಪ್ತ ಬಾಲಕಿಯರನ್ನು ಕುಚೇಷ್ಟೆ ಮಾಡುವುದು ಹಾಗೂ ವೈಯಕ್ತಿಕ ಭಾಗಗಳನ್ನು ಮುಟುವುದು ಕಾನೂನು ರಂಗದಿಂದ ಅಪರಾದವಾಗಿದ್ದು ಅಂತಹ ಪ್ರಮಾಧಗಳಿಂದ ವಿದ್ಯಾರ್ಥಿಗಳು ದೂರವಿರಬೇಕೆಂದರು.

ಉಪನ್ಯಾಸಕ ಸಂಗಪ್ಪಾ ಕುಂಬಾರ ಮಾತನಾಡಿ ಮಹಿಳೆಯರನ್ನು ಗೌರವಿಸುವ ಸಂಸ್ಕøತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಇತ್ತೀಚಿಗೆ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಸರಿಯಾದ ಕಾನೂನು ತಿಳಿವಳಿಕೆ ವಿದ್ಯಾರ್ಥಿಗಳಿಗೆ ಅಗತ್ಯವಿದೆ ಎಂದರು.
ಘಟಕಾಧಿಕಾರಿ ಸಿದ್ದಪ್ಪಾ ಪೂಜೇರಿ ಮಾತನಾಡಿ ಭಾರತ ದೇಶ ಪ್ರಾಚೀನ ಕಾಲದಿಂದಲೂ ಮಹಿಳೆಯರಿಗೆ ಪವಿತ್ರಸ್ಥಾನ ನೀಡಿದ್ದು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಭಾರತದ ಸಂಸ್ಕøತಿಗೆ ಕಳಂಕ ತರುವಂತಿದ್ದು ನಾವೆಲ್ಲರೂ ಮಹಿಳಾ ದೌರ್ಜನ್ಯಗಳಿಗೆ ಅವಕಾಶ ನೀಡಬಾರದು ಎಂದರು.
ಉಪನ್ಯಾಸಕ ಸಂಜೀವ ಮಂಟೂರ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆಗಳಿದ್ದು ಅನ್ಯಾಯಕ್ಕೆ ಅಥವಾ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಕಾನೂನು ಮೂಲಕ ಪರಿಹಾರ ಕಂಡಕೊಳ್ಳಲು ಅವಕಾಶ ಇದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಷತಾ ಹೊಸಮನಿ, ರಾಜು ಪತ್ತಾರ, ಮಲ್ಲಪ್ಪ ಪಾಟೀಲ, ಮುತ್ತಣ್ಣಾ ಒಡೆಯರ, ಸುನೀಲ ಸತ್ತಿ ರಾಘವೇಂದ್ರ ಮುಕ್ಕುಂದ ರಾಘವೇಂದ್ರ ಡಬಾಜ ಸಾಧನಾ ಖಂಡ್ರಟ್ಟಿ ಪಿ.ಎ.ಗಸ್ತಿ ಕಿರಣ ಪಟ್ಟಣಶೆಟ್ಟಿ ಕವಿತಾ ಮಳಲಿ ಅಶ್ವೀನಿ ಗುರುವ ನಂದಾ ತಳವಾರ ಸ್ಪೂರ್ತಿ ಈಟಿ ಸವಿತಾ ವೆಂಕಟಾಪೂರ ಮತ್ತಿತರರು ಹಾಜರಿದ್ದರು
ವಿದ್ಯಾರ್ಥಿನಿ ಜ್ಯೋತಿ ಗರಗದ ನಿರೂಪಿಸಿದರು ಸಹನಾ ಗುಡ್ಲಿ ಸ್ವಾಗತಿಸಿದರು ವಂದಿಸಿದರು.

 


Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ