Breaking News
Home / ಬೆಳಗಾವಿ / ಶೈಕ್ಷಣಿಕ ಮತ್ತು ವೃತ್ತಿ ಕೋರ್ಸಗಳ ಜ್ಞಾನ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಡಾ.ಶಿವಲಿಂಗ ಅರಗಿ

ಶೈಕ್ಷಣಿಕ ಮತ್ತು ವೃತ್ತಿ ಕೋರ್ಸಗಳ ಜ್ಞಾನ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಡಾ.ಶಿವಲಿಂಗ ಅರಗಿ

Spread the love

ಮೂಡಲಗಿ : ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ಕೋರ್ಸಗಳ ಜ್ಞಾನ ಅಗತ್ಯವಿದೆ ಬಿಎಸ್ಸಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅನೇಕ ಇಲಾಖೆಗಳಲ್ಲಿ ವೃತಿಗಳಿಗೆ ಅವಕಾಶ ಇದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕು ಅದರ ಜೊತೆಗೆ ಉನ್ನತ ಶಿಕ್ಷಣಕ್ಕೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳು ಹೆಮ್ಮರವಾಗಿದ್ದು ಸರಿಯಾದ ಮಾರ್ಗಗಳಲ್ಲಿ ಅಧ್ಯಯನಶೀಲತೆ ಮತ್ತು ಉತ್ತಮ ಪ್ರತಿಭೆಗಳಿಂದ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಚೆ ಮತ್ತು ಮನಸ್ಸು ಪ್ರತಿಯೊಬ್ಬ ವಿದ್ಯಾರ್ಥಿ ಬೆಳಸಿಕೊಳ್ಳುವ ಅಗತ್ಯವಿದೆ ಎಂದು ಶಿವಾಪೂರ ಸರಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾದ್ಯಯ ಡಾ ಶಿವಲಿಂಗ ಅರಗಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಬಿಎಸ್ಸಿ ಪದವಿ ನಂತರ ಭವಿಷ್ಯತ್ತಿನ ಅವಕಾಶಗಳು ಕುರಿತು ಮಾತನಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯ ಹರಣ ಮಾಡದೆ ಭವಿಷ್ಯದ ಬಗ್ಗೆ ಯೋಚನೆ ಮತ್ತು ಹಣ ಸಂಪಾಧನೆಯ ನವೀನ ಮಾರ್ಗಗಳ ತಿಳಿವಳಿಕೆ ಅಗತ್ಯವಿದೆ ಎಂದರು.
ಅತಿಥಿ ಕಾಲೇಜಿನ ಉಪನ್ಯಾಸಕಿ ಸ್ಪೂರ್ತಿ ಈಟಿ ಮಾತನಾಡಿ ವಿದ್ಯಾರ್ಥಿಗಳು ಪಡೆಯುವ ಅಂಕಗಳು ಎಷ್ಟು ಮುಖ್ಯವೋ ಅಷ್ಟೇ ಬದುಕನ್ನು ರೂಪಿಸಿಕೊಳ್ಳುವ ಯೋಜನೆ ಹಾಗೂ ಪ್ರತಿಭೆ ಅಗತ್ಯವಾಗಿದೆ ಎಂದರು.
ಪಿಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಮಾತನಾಡಿ ವಿದ್ಯಾರ್ಥಿಗಳು ಬದಲಾಗುತ್ತಿರುವ ಜಗತ್ತಿನಲ್ಲಿ ಅವಕಾಶಗಳು ಯಥೇಚ್ಚವಾಗಿದ್ದು ಸರಿಯಾದ ದಾರಿಯಲ್ಲಿ ಸಮಯ ಪಾಲನೆ ಮಾಡಿ ಅದರ ಜೊತೆಗೆ ತಮ್ಮ ತಂದೆ ತಾಯಿಗಳ ಹಾಗೂ ತಮ್ಮ ಆಶೆ ಆಕಾಂಕ್ಷೆಗಳೆಂತೆ ಜೀವನ ರೂಪ್ಪಿಸಿಕೊಳ್ಳುವಂತೆ ಪ್ರಯತ್ನಿಸಬೇಕೆಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ಜೀವನದಲ್ಲಿ ವಿದ್ಯಾರ್ಥಿಗಳು ಸಾದಕರಾಗಲು ಪ್ರಯತ್ನ, ಪ್ರತಿಭೆ, ಗುರಿ ಹೊಂದಿದ್ದಾಗ ಒಳ್ಳೆಯ ವೃತ್ತಿ ಜೀವನ ನಮದಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುನೀಲ ಸತ್ತಿ, ರಾಜು ಪತ್ತಾರ, ಸಾಧನಾ ಖಂಡ್ರಟ್ಟಿ, ಪ್ರಸ್ಕೀಲಾ ಗಸ್ತಿ, ಸವಿತಾ ವೆಂಕಟಾಪೂರ, ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿ ವರುಣ ಪಾಟೀಲ ನಿರೂಪಿಸಿದರು ಮುರಾರಿ ನಿಡೋಣಿ ಸ್ವಾಗತಿಸಿದರು, ಜ್ಯೋತಿ ಗರಗದ ಪರಿಚಯಸಿದರು ಸುಶ್ಮೀತಾ ತುಪ್ಪದ ವಂದಿಸಿದರು.


Spread the love

About inmudalgi

Check Also

*ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ*

Spread the loveಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಕಾಗವಾಡ ಕ್ಷೇತ್ರಕ್ಕೆ ಬಿಡಿಸಿಸಿ ಬ್ಯಾಂಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ