ಮೂಡಲಗಿ : ಪದವಿ ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಪ್ರಥಮ ಆಧ್ಯತೆ ವೃತ್ತಿ ಆಯ್ಕೆಯಾಗಿರಬೇಕು ವಿದ್ಯಾರ್ಥಿ ಜೀವನ ಮುಗಿಯುವದರೊಳಗಾಗಿ ತನ್ನದೇಯಾದ ವೃತ್ತಿಯನ್ನು ಹೊಂದುವುದು ಅಗತ್ಯವಿದ್ದು ಅದು ಸರಕಾರಿ ಅರೇಸರಕಾರಿ ಅಥವಾ ಸ್ವಾವಲಂಬನೆಯ ಜೀವನದ ವೃತಿ ಯಾವುದೇ ಆಗಿರಲ್ಲಿ ಜೀವನದಲ್ಲಿ ಯೋಗ್ಯವಾದ ವೃತಿ ಆಯ್ಕೆ ಮಾಡಿಕೊಂಡಿರಬೇಕು ಇಂದಿನ ದಿನಗಳಲ್ಲಿ ಸರಕಾರಿ ಕೆಲಸ ಪಡೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಸಮಯ ಪಾಲನೆ ಮತ್ತು ಉತ್ತಮ ಪ್ರಯತ್ನ ಶ್ರಮದಿಂದ ಪಡೆದುಕೊಳ್ಳಬಹುದು ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ಗುರುಪಾದಯ್ಯಾ ಹಿರೇಮಠ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ ಹಾಗೂ ಆಯ್‍ಕ್ಯೂಎಸ್‍ಸಿ ಎನ್‍ಎಸ್‍ಎಸ್ ಘಟಕಗಳ ಮೂಲಕ ಆಯೋಜಿಸಿದ ವೃತ್ತಿ ಆಯ್ಕೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಕ್ರೀಯಾಶೀಲ ಅಧ್ಯಯನ ಮತ್ತು ಉತ್ತಮ ಸಂವಹನದಿಂದ ಬೇಕಾದ ವೃತಿಗಳನ್ನು ಪಡೆದುಕೊಳ್ಳಬಹುದು ಸ್ಥಳೀಯ ಜೀವನದ ಜೊತೆಗೆ ಇಂದಿನ ಸ್ಥಿತಿಗತಿಗೆ ಅನುಗುಣವಾಗಿ ಇರುವ ವೃತಿಗಳ ತರಬೇತಿ ಮತ್ತು ಅದಕ್ಕೆ ಅನುಗುಣವಾಗಿ ಪಡೆದುಕೊಳ್ಳಲು ನಮ್ಮ ಹಳ್ಳಿ ನಗರಗಳನ್ನು ತೊರೆದು ಹೊಸ ಕ್ಷೇತ್ರಗಳನ್ನು ಅನ್ವೇಷಿಸುವುದು ಅಗತ್ಯವಿದೆ ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಸಂತೋಷ ನಾವಲಗಿ ಮಾತನಾಡಿ ಉದ್ಯೋಗ ಪಡೆದುಕೊಳ್ಳವು ಕನಸ್ಸು ಹೊಂದಿದ್ದರೆ ಸಾಲದು ಕನಸ್ಸು ಸಾಕಾರಗೊಳಿಸಿಕೊಳ್ಳಲು ವಿಶಾಲವಾದ ಜಗತ್ತಿನಲ್ಲಿ ಸಂಚರಿಸಬೇಕು ಹೊಸ ಹೊಸ ಕಂಪನಿ ಕೈಗಾರಿಕೆಗಳಿಂದ ಹೊಸ ವೃತ್ತಿಗಳು ಸೃಷ್ಟಿಯಾಗುತ್ತಿದ್ದು ಮತ್ತು ಬೇರೆ ಬೇರೆ ಕಂಪನಿಗಳು ಸರಕಾರಿ ವೃತ್ತಿಗಳು ಅರೇ ಸರಕಾರಿ ಉದ್ಯೋಗಗಳು ಸಾಕಷ್ಟು ಇದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕಾದರೆ ಪ್ರಯತ್ನದ ಜೊತೆಗೆ ಇಚ್ಚಾಶಕ್ತಿ ಇಂದಿನ ಯುವ ವಿದ್ಯಾರ್ಥಿಗಳಲ್ಲಿ ಅಗತ್ಯವಿದೆ ಸ್ಥಳೀಯ ವೃತಿಗಳನ್ನು ಅಷ್ಟೇ ಮಾಡಿದರೆ ಸ್ಪರ್ದೇ ಹೆಚ್ಚಾಗುತ್ತದೆ ನಮ್ಮ ಊರು ಬಿಟ್ಟು ಬೇರೆ ಬೇರೆ ಭಾಗಗಳಿಗೆ ಹೋಗುವ ದೈರ್ಯ ಮಾಡಿದರೆ ವರ್ಷ ಪೂರ್ಣ ವೇತನದೊಂದಿಗೆ ಜೀವನ ಭದ್ರತೆ ಪಡೆದುಕೊಳ್ಳಬಹುದು ಎಂದರು.
ಕಾಲೇಜು ಪ್ರಾಚಾರ್ಯ ಸತ್ಯೇಪ್ಪ ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವೃತ್ತಿ ಜೀವನದ ಒಂದು ಭಾಗ ಉತ್ತಮ ಮತ್ತು ನಮ್ಮ ಅರ್ಹತೆಯಂತೆ ವೃತ್ತಿ ಪಡೆದುಕೊಳ್ಳಬೇಕಾದರೆ ನಿರಂತರ ಅಧ್ಯಯನ ಸಮಯಪಾಲನೆ ಸೇವಾನಿಷ್ಠೆ ತೋರಿದಾಗ ಮಾತ್ರ ಜೀವನದಲ್ಲಿ ಸಾಮಾಜಿಕ ನ್ಯಾಯಯುತ ವೃತಿಯನ್ನು ಸಂಪಾದಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಶಿವಾನಂದ ಸತ್ತಿಗೇರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಂಪ್ಯೂಟರ ನಿರ್ವಾಹಕ ರಮೇಶ ಗಸ್ತಿ ಉಪನ್ಯಾಸಕರಾದ ಸಂಜೀವ ಮಂಟೂರ, ಮಲ್ಲಪ್ಪಾ ಪಾಟೀಲ, ಸುನೀಲ ಸತ್ತಿ, ರಾಜು ಪತ್ತಾರ, ಮುತ್ತಣ್ಣ ವಡೆಯರ. ಪ್ಲೆಸ್‍ಮೆಂಟ್ ಘಟಕಾಧಿಕಾರಿ ನಂದಾ ತಳವಾರ ಮತ್ತಿತರರು ಹಾಜರಿದ್ದರು
ವಿದ್ಯಾರ್ಥಿನಿ ಲಕ್ಷ್ಮೀ ಗೊರಗುದ್ದಿ ನಿರೂಪಿಸಿದರು ಪೂಜಾ ಮುದೋಳ ಸ್ವಾಗತಿಸಿದರು ಸೌಬಾಗ್ಯ ಸಾಯನ್ನವರ ಸ್ವಾಗತಿಸಿದರು.
IN MUDALGI Latest Kannada News