ವಿದ್ಯಾರ್ಥಿಗಳು ವಿವೇಕ-ವಿವೇಚನೆಯಿಂದ ಕೂಡಿದ ಜ್ಞಾನ ಪಡೆದುಕೊಳ್ಳಬೇಕು -ಡಾ ಸಂಜಯ ಸಿಂದಿಹಟ್ಟಿ
ಮೂಡಲಗಿ : ವಿದ್ಯಾರ್ಥಿಗಳು ವಿವೇಕ-ವಿವೇಚನೆಯಿಂದ ಕೂಡಿದ ಜ್ಞಾನ ಪಡೆದುಕೊಳ್ಳಬೇಕು. ಬದುಕು ಆಸೆಯಿಂದ ಕೂಡಿರಬೇಕು ಗುರುಗಳು ನೀಡಿದ ಜ್ಞಾನ ಬದುಕಿನ ಆಸೆಗಳನ್ನು ಪೂರೈಸುವಂತೆ ಇರಬೇಕು ಕವಿಗಳು ದಾರ್ಶನಿಕರು ಹೇಳಿದ ಹಾಗೆ ಜೀವನ ಸ್ವಾರ್ಥಕಗೊಳಿಸಿಕೊಳ್ಳುವ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ವಿದ್ಯಾರ್ಥಿ ಜೀವನ ಪ್ರಾಮಾಣಿಕ & ಏಕಾಗ್ರತೆಯಿಂದ ಕೂಡಿದ ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದು ಮೂಡಲಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಂತಹ ಡಾ ಸಂಜಯ ಸಿಂದಿಹಟ್ಟಿ ಹೇಳಿದರು.
ಅವರು ಸ್ಥಳೀಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತದಾರರ ಸಾಕ್ಷರತಾ ಕ್ಲಬ್, ಎನ್.ಎಸ್.ಎಸ್., ಸ್ಕೌಟ್ಸ್ & ಗೈಡ್ಸ್ ಘಟಕಗಳ ಹಾಗೂ ಸನ್ 2023-24ನೇ ಸಾಲಿನ ಕ್ರೀಡೆ-ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋದನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಸಿ ಮಾತನಾಡುತ್ತಾ ವಿದ್ಯೆ ಸಂಪಾಧಿಸಲು ಏಕಾಗ್ರತೆ ಅತ್ಯಗತ್ಯ ಯುವ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ವದ ಹೆಜ್ಜೆಯನ್ನು ದಾಟುವ ಈ ಸಮಯದಲ್ಲಿ ವಿವೇಕ ವಿವೇಚನೆಯಿಂದ ಕೂಡಿದ ಜ್ಞಾನ ಸಂಪಾದನೆ ಅತ್ಯಗತ್ಯ ಎಂದರು.
ಇನ್ನೋರ್ವ ಅತಿಥಿಗಳಾದ ಮಸಗುಪ್ಪಿ ಸಿ.ಆರ್.ಸಿ. ಮತ್ತು ಮಕ್ಕಳ ಸಾಹಿತಿಗಳಾದ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿ ಇಂದಿನ ಅವಸರದ ಜೀವನದಲ್ಲಿ ವಿದ್ಯಾರ್ಥಿಗಳ ಬದುಕು ಸರಿಯಾದ ರೀತಿಯಲ್ಲಿ ರೂಪಗೊಳ್ಳುತ್ತಿಲ್ಲ ಸರಿಯಾದ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ಶಿಕ್ಷಣದ ಕಡೆಗೆ ಗಮನ ಕೂಡಬೇಕು ತಮ್ಮ ಕುಟುಂಬದ ಸ್ಥಾನಮಾನಗಳನ್ನು ಮತ್ತು ತಂದೆ ತಾಯಿಗಳ ಕಷ್ಟಗಳನ್ನು ಅರ್ಥೈಸಿಕೊಂಡು ಅಧ್ಯಯನದ ಕಡೆಗೆ ಗಮನ ಹರಿಸಬೇಕು ಕೇವಲ ಪಠ್ಯ ವಿಷಯಕ್ಕೆ ಅಷ್ಟೇ ಆಧ್ಯತೆ ನೀಡದೆ ಪಠ್ಯೇತರ ಚಟುವಟಿಕೆಗೂ ಆಧ್ಯತೆ ನೀಡುವಂತೆ ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣ ಪಾರ್ಶಿ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವದರೊಂದಿಗೆ ತಮಗೂ ತಮ್ಮ ಕುಟುಂಬಕ್ಕೂ ಮತ್ತು ಕಾಲೇಜಿಗೂ ಹೆಸರು ತರುವಂತಹ ಸಾಧನೆ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಪಾಟೀಲ ಕಾಲೇಜು ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಉಪನ್ಯಾಸಕರಾದ ಎಸ್.ಡಿ.ವಾಲಿ. ಜಿ.ಎಸ್. ಮನ್ನಾಪೂರ. ಸಂತೋಷ ಲಟ್ಟಿ. ಹಣಮಂತ ಚಿಕ್ಕೋಡಿ ಮತ್ತಿತರರು ಹಾಜರಿದ್ದರು
ಉಪನ್ಯಾಸಕ ಸಂಗಮೇಶ ಕುಂಬಾರ ಸ್ವಾಗತಿಸಿದರು ಉಪನ್ಯಾಸಕ ಮಲ್ಲಪ್ಪ ಜಾಡರ ನಿರೂಪಿಸಿ ವಂದಿಸಿದರು.