Breaking News
Home / Recent Posts / ವಿದ್ಯಾರ್ಥಿಗಳಲ್ಲಿ ಎನ್.ಎಸ್.ಎಸ್.ನಿಂದ ಸಾಮಾಜಿಕ ಸೇವಾ ಪ್ರಜ್ಞೆ ಬೆಳೆಯುತ್ತದೆ : ಎಸ್.ಡಿ. ವಾಲಿ

ವಿದ್ಯಾರ್ಥಿಗಳಲ್ಲಿ ಎನ್.ಎಸ್.ಎಸ್.ನಿಂದ ಸಾಮಾಜಿಕ ಸೇವಾ ಪ್ರಜ್ಞೆ ಬೆಳೆಯುತ್ತದೆ : ಎಸ್.ಡಿ. ವಾಲಿ

Spread the love

ವಿದ್ಯಾರ್ಥಿಗಳಲ್ಲಿ ಎನ್.ಎಸ್.ಎಸ್.ನಿಂದ ಸಾಮಾಜಿಕ ಸೇವಾ ಪ್ರಜ್ಞೆ ಬೆಳೆಯುತ್ತದೆ : ಎಸ್.ಡಿ. ವಾಲಿ

ಮೂಡಲಗಿ : ವಿದ್ಯಾರ್ಥಿಗಳಲ್ಲಿ ಎನ್.ಎಸ್.ಎಸ್.ನಿಂದ ಸಾಮಾಜಿಕ ಸೇವಾ ಪ್ರಜ್ಞೆ ಬೆಳೆಯುತ್ತದೆ ನಮ್ಮ ರಾಷ್ಟ್ರ ಅಭಿವೃದ್ಧಿ ಹೊಂದ ಬೇಕಾದರೆ ನಮ್ಮ ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರ ಸಂಪರ್ಕ ಇಟ್ಟು ಕೊಳ್ಳಬೇಕು ಎಂಬ ಕನಸ್ಸು ಮಹಾತ್ಮಾ ಗಾಂಧೀಜಿಯವರದಾಗಿತ್ತು. ಅದರಂತೆ ಯುವಕರು ಶಿಕ್ಷಣದ ಜೊತೆಗೆ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗುವಂತೆ ಮಾಡುವ ಅಂಶಗಳನ್ನು ಎನ್.ಎಸ್.ಎಸ್.ಬೆಳಸುತ್ತದೆ ಮಹಾತ್ಮಾ ಗಾಂಧೀಜಿಯವರ ಜನ್ಮ ಶತಾಬ್ದಿ ಪ್ರಯುಕ್ತ ದಿನಾಂಕ 24-09-1969 ರಂದು ಕೇಂದ್ರ ಸರಕಾರ ಈ ಯೋಜನೆ ಜಾರಿಗೆ ತಂದಿದೆ
” ನನಗಲ್ಲ ನಿಮಗೆ” ಎಂಬ ದ್ಯೇಯ ವಾಕ್ಯದೊಂದಿಗೆ ನಾನು ನನಗಾಗಿ ಮಾತ್ರವಲ್ಲ ನಿಮ್ಮೆಲ್ಲರಿಗಾಗಿಯೂ ಎನ್ನುವ ಸಾಮಾಜಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಎನ್,ಎಸ್,ಎಸ್, ಬೆಳಸುತ್ತದೆ ಎಂದು ಆರ್.ಡಿ.ಎಸ್.ಪಿಯು ಕಾಲೇಜಿನ ಎನ್.ಎಸ್.ಎಸ್. ಘಟಕಾಧಿಕಾರಿ ಸಂಜೀವ ವಾಲಿ ಹೇಳಿದರು.

ಅವರು ಸ್ಥಳೀಯ ಆರ್.ಡಿ.ಎಸ್.ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಎನ್.ಎನ್.ಎಸ್. ಸಂಸ್ಥಾಪನಾ ದಿನಾಚರಣೆಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದರು.
ಉಪನ್ಯಾಸಕ ಎಂ.ಆಯ್.ಜಾಡರ ಮಾತನಾಡಿ ಎನ್.ಎಸ್.ಎಸ್. ಘಟಕದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಾರ್ವಜನಿಕ ಸೇವೆಯ ಮೂಲಕ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವದು ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣ, ರಾಷ್ಟ್ರಪ್ರೇಮ ಮತ್ತು ಸೇವಾಭಾವನೆಗಳನ್ನು ಬೆಳಸುವುದಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಂತೋಷ ಲಟ್ಟಿ, ಜಿ.ಎಚ್.ಕಡಪಟ್ಟಿ. ಎಂ.ಬಿ.ಸಿದ್ನಾಳ, ಶ್ರೀಮತಿ ಎಂ.ಎಲ್. ಪೂಜೇರಿ. ಹಾಜರಿದ್ದರು ಉಪನ್ಯಾಸಕ ರವಿ ಕಟಗೇರಿ ಸ್ವಾಗತಿಸಿದರು ಸಿದ್ದಾರೂಢ ಬೆಳವಿ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ