ನಿಸ್ವಾರ್ಥ ಸಮಾಜ ಸೇವೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ –
ಮಾತೆ ನೀಲಾಂಭಿಕಾದೇವಿ
ಮೂಡಲಗಿ : ನಿಸ್ವಾರ್ಥ ಸಮಾಜ ಸೇವೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಬುದ್ದ ಬಸವ ಅಂಬೇಡ್ಕರ ಸಾಯಿಬಾಬಾರ ಅವತಾರಗಳು ಸಮಾಜದ ಏಳಿಗೆಯ ಜೊತೆಗೆ ಜನರ ಮೌಢ್ಯತೆಗಳನ್ನು ತಿದ್ದಿ ಜನರಲ್ಲಿ ಸಂಸ್ಕಾರದ ಜೊತೆಗೆ ಭಗವಂತನ ಭಕ್ತಿಭಾವ ತುಂಬಿದರು ಹಾಗೂ ನಾವು ಮಾಡುವ ಕಾಯಕದಲ್ಲಿ ಶೃದ್ದೆ ಇರಬೇಕು ಅಲ್ಲದೇ ದೇವರಲ್ಲಿ ಭಕ್ತಿ ತೋರಿಸುವದರ ಜೊತೆಗೆ ಆಧ್ಯಾತ್ಮಿಕ ಶಕ್ತಿ ನಮ್ಮಲ್ಲಿ ಬಲವಾಗವಂತಿರಬೇಕು ಮತ್ತು ನಮ್ಮ ನಾಡಿನ ಆಧ್ಯಾತ್ಮಿಕ ಭಕ್ತಿ ವಿಶ್ವಕ್ಕೆ ಉತ್ತಮ ಸಂದೇಶ ನೀಡುವದರೊಂದಿಗೆ ಸಾಯಿಬಾಬಾರ ಎರಡು ಅವತಾರಗಳು ಜನರ ಕಲ್ಯಾಣದಲ್ಲಿ ದೇವರನ್ನು ಕಾಣಬಹುದು ಎಂಬುವದನ್ನು ತೋರಿಸಿವೆ ಎಂದು ಬಳೋಬಾಳದ ಬಸವಯೋಗ ಮಂಟಪದ ಅಧ್ಯಕ್ಷರಾದ ಮಾತೆ ನೀಲಾಂಭಿಕಾದೇವಿ ಹೇಳಿದರು.
ಅವರು ಸ್ಥಳಿಯ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಶ್ರೀಸತ್ಯಸಾಯಿ ಸೇವಾ ಸಮಿತಿಯ 18ನೇಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಯಿಬಾಬಾರ ನಂಬಿಕೆ ಮತ್ತು ಸೇವೆಯ ಕಾರ್ಯವು ಸತ್ಯ, ಧರ್ಮ, ಶಾಂತಿ, ಪ್ರೇಮ ಅಹಿಂಸೆಗಳಂಬ ತತ್ವಗಳಿಂದ ಕೂಡಿದ್ದು ಅವುಗಳು ಮಾನವ ಕಲ್ಯಾಣದ ತತ್ವಗಳಾಗಿವೆ ಅವುಗಳನ್ನು ನಾವುಗಳು ಅಳವಡಿಸಿಕೊಳ್ಳುವುದು ಅವಶ್ಯಕವಿದೆ ಎಂದರು.
ಶ್ರೀಸತ್ಯಸಾಯಿ ಸೇವಾ ಸಮತಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದಂತಹ ವಸಂತ ಬಾಳಿಗಾ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಒಳ್ಳೆಯ ವಿದ್ಯಾರ್ಥಿಗಳು ದೇಶದ ಸಂಪತ್ತು ನಮ್ಮ ಸಮಿತಿ ಬಾಲವಿಕಾಸದ ಮೂಲಕ ಬಾಲವಿದ್ಯಾರ್ಥಿಗಳ ಶೈಕ್ಷಣಿಕ ತರಬೇತಿಗಳನ್ನು ಉಚಿತವಾಗಿ ಆಯೋಜಿಸಲಾಗುವುದು ಅಲ್ಲದೇ ದೈವ ಪ್ರೀತಿ ಪಾಪಭೀತಿ ಸಂಘನೀತಿ ಜೊತೆಗೆ ಆಧಾತ್ಮಿಕ ಸಾಧನೆಯು ಪ್ರಾರಂಭವಾಗಿ ಉತ್ತಮ ಯೋಚನೆ ಮತ್ತು ಯೋಜನೆಗಳಿಂದ ದೈವಿಕ ಶಕ್ತಿಯನ್ನು ಸಾಯಿಬಾಬಾ ನೀಡುತ್ತಾನೆ ಮತ್ತು ಮೂಡಲಗಿಯಲ್ಲಿ ಸಾಯಿಬಾಬರ ಸೇವಾ ಕಾರ್ಯವನ್ನು ನಮ್ಮ ಸಮಿತಿಯವರು ಉತ್ತಮವಾಗಿ ಸಂಘಟಿಸುತ್ತಿರುವದು ಆಶಾದಾಯಕ ಬೆಳವಣಿಗೆ ಎಂದರು.
ಸುಣದೋಳಿಯ ಶ್ರೀಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶಿವಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡುತ್ತಾ ಭಗವಂತನಿಗೆ ತನು ಮನ ಧನದಿಂದ ನಿಸ್ವಾರ್ಥ ಸಹಾಯ ಮತ್ತು ಸೇವೆ ಮಾಡಿದರೆ ನಮ್ಮ ಆತ್ಮ ಭಗವಂತನಲ್ಲಿ ಲೀನವಾಗುವುದು ನಾವು ಸಮಾಜದಲ್ಲಿ ಸೇವಾಮನೋಭಾವವನ್ನು ಭಕ್ತಿಯಿಂದ ಅಳವಡಿಸಿಕೊಂಡಾಗ ಮತ್ತು ನಮ್ಮ ಪರಿಶುದ್ಧ ಕಾಯಕ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಅವಕಾಶಕಲ್ಪಿಸಲಿದೆ ಎಂದರು.
ಸಾಯಿಸೇವಾ ಸದಸ್ಯರಾದ ಸಿ.ಎಂ.ಹಂಜಿ ಮಾತನಾಡಿ ಸತ್ಯಸಾಯಿ ಸೇವಾ ಕಾರ್ಯ ಮೂಡಲಗಿಯಲ್ಲಿ ಭಗವಂತನ ಇಚ್ಚೆಯಂತೆ ಮೂಡಲಗಿ ಭಕ್ತರ ಸಹಾಯದಿಂದ ಭವ್ಯವಾದ ಸಾಯಿ ಮಂದಿರ ನಿರ್ಮಾಣವಾಗಲು ಕೈಜೋಡಿಸಿದ ಭಕ್ತರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ, ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮೂಡಲಗಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಹಾಗೂ ಬೆಳಗಾವಿ ಜಿಲ್ಲೆ ವಿವಿಧ ತಾಲೂಕಾ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರು ಸಾಯಿಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಬಾಲವಿಕಾಸ ಮತ್ತು ವಿವಿಧ ಶಾಲೆಯ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಹಾಗೂ ವಿವಿಧ ಪರೀಕ್ಷೆಗಳಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಸಮಾಜಸೇವೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಪುಣ್ಯಲಕ್ಷ್ಮೀ ಮುರಗೇಶ ಗಾಡವಿ ನಿರೂಪಿಸಿದರು ಲತಾ ಪಾಂಡು ಬುದ್ನಿ ಸ್ವಾಗತಿಸಿದರು ಹಣಮಂತ ಸೋರಗಾಂವಿ ವಂದಿಸಿದರು.