ಮೂಡಲಗಿಯಲ್ಲಿ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕುಂಭಮೇಳ, ಆರತಿ ಸಕಲ ವಾಧ್ಯಗಳೊಂದಿಗೆ ಮೂರ್ತಿ ಹಾಗೂ ಕಳಸದ ಮೆರವಣಿಗೆಯು ಧ್ರೋಣ ಕ್ಯಾಮರಾದಲ್ಲಿ ಸೇರೆಯಾಗಿರುವದು.
ಮೂಡಲಗಿ: ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಲಕ್ಷ್ಮೀ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಶ್ರೀ ಶಿವಬೋಧರಂಗ ಮಠದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಪುಟಪುರ್ತಿ ಸಾಯಿಬಾಬಾರ ಮೂರ್ತಿಗಳಿಗೆ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು ಮತ್ತು ರಂಗಾಪೂರ-ಮುನ್ಯಾಳ-ಬಾಗೋಜಿಕೊಪ್ಪದ ಶ್ರೀ ಡಾ.ಮುರಘರಾಜೇಂದ್ರ ಶಿವಾಚಾರ್ಯಸ್ವಾಮಿಗಳು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಮಹಿಳೆಯರಿಂದ ಕುಂಭಮೇಳ, ಆರತಿ ಸಕಲ ವಾಧ್ಯಗಳೊಂದಿಗೆ ಮೂರ್ತಿ ಹಾಗೂ ಕಳಸದ ಮೆರವಣಿಗೆಯೊದಿಂಗೆ ಸಾಯಿ ಮಂದಿರಕ್ಕೆ ಕರೆತರಲಾಯಿತು.
ಮೆರವಣಿಗೆಯಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಪಟ್ಟಣದ ಎಲ್ಲ ಭಕ್ತ ಗಣ ಭಾಗವಹಿಸಿದ್ದರು.