ಸಿದ್ದಲಿಂಗ ಶ್ರೀಗಳ ಅಗಲಿಕೆಗೆ ನಿರಾಣಿ ಶೋಕ
ಮುಧೋಳ: ಅರಭಾವಿ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ನಿಧನಕ್ಕೆ ವಿಧಾನಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ ತೀವ್ರ ಶ್ಲೋಕ ವ್ಯಕ್ತಪಡಿಸಿದ್ದಾರೆ ,ಅವರು ಇಂದು ದುರದುಂಡಿ ಮಠಕ್ಕೆ ಭೇಟಿ ನೀಡಿ ಅಗಲಿದ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.
ನಂತರ ನಡೆದ ದುಃಖ ಸೂಚಕ ಸಭೆಯಲ್ಲಿ ಮಾತನಾಡಿದ ನಿರಾಣಿಯವರು ಸಿದ್ದಗಂಗಾ ಸ್ವಾಮೀಜಿ ಈ ಭಾಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದರು.
ಬಸವ ತತ್ವ ಪ್ರಚಾರಕ್ಕೆ ಶ್ರಮಿಸುತ್ತಿದ್ದರು.ಪ್ರತಿ ವರ್ಷ ಮಠದಲ್ಲಿ ಸ್ವತಃ ಬಸವ ಪುರಾಣ ಹೇಳುತ್ತಿದ್ದರು ಉತ್ತರ ಕರ್ನಾಟಕ ಭಾಗದ ಶೈಕ್ಷಣಿಕ ಸಾಂಸ್ಕೃತಿಕ ಉನ್ನತಿಗೂ ಅವರು ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದರು ಎಂದು ಹೇಳಿದರು.