Breaking News
Home / Recent Posts / ‘ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ – ಪ್ರಿಯಂಕಾ ಸತೀಶ ಜಾರಕಿಹೊಳಿ

‘ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ – ಪ್ರಿಯಂಕಾ ಸತೀಶ ಜಾರಕಿಹೊಳಿ

Spread the love

 

ಮೂಡಲಗಿ: ‘ದೇಶದ ವೇಗದ ಅಭಿವೃದ್ಧಿಯಲ್ಲಿ ಇಂಧನ ಆಧಾರಿತ ವಾಹಗಳ ಪಾತ್ರ ಮಹತ್ವದಾಗಿದ್ದು, ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ ಎಂದು ಪ್ರಿಯಂಕಾ ಸತೀಶ ಜಾರಕಿಹೊಳಿ ಅವರು ಹೇಳಿದರು.


ತಾಲ್ಲೂಕಿನ ನಾಗನೂರ ಗ್ರಾಮದ ಮನ್ನಿಕೇರಿ ಪ್ರೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾಪೋರೇಶನದವರು ಏರ್ಪಡಿಸಿದ್ದ ಗ್ರಾಹಕರ ಸಮಾವೇಶ ಮತ್ತು ಉತ್ತಮ ಗ್ರಾಹಕ ಪ್ರಶಸ್ತಿಗಳ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂಧನ ಸಂಪನ್ಮೂಲವು ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಅದು ಸದ್ಬಳಿಕೆಯಾಗಬೇಕು ಎಂದರು.
ಗ್ರಾಹಕರ ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದು ಮನ್ನಿಕೇರಿ ಪೆಟ್ರೋಲಿಯಂದವರು ಗ್ರಾಹಕರಿಂದ ಕಾಯ್ದುಕೊಂಡಿರುವ ವಿಶ್ವಾಸ ಮುಖ್ಯ ಕಾರಣವಾಗಿದೆ. ಇದು ಇನ್ನು ಉನ್ನತವಾಗಿ ಬೆಳೆಯಲಿ ಎಂದು ಹೇಳಿದರು.
ಅತಿಥಿಗಳಾಗಿ ಸವೋತ್ತಮ ಜಾರಕಿಹೊಳಿ, ಬಸಗೌಡ ಪಾಟೀಲ, ಮನ್ನಿಕೇರಿ ಪೆಟ್ರೋಲಿಯಂ ಮಾಲೀಕರಾದ ಪಾಂಡುರಾಂಗ ಮನ್ನಿಕೇರಿ, ಇಂಡಿಯನ್ ಆಯಿಲ್ ಕಾರ್ಪೋರೇಶನದ ಅಧಿಕಾರಿ ಜಯಂತಕುಮಾರ ಉಮಾಕಾಂತ, ವಿ. ಮುರಳಿ, ಕವಿದ್ರ ದವನ, ಸತೀಶ ಎಸ್, ಸರ್ವೋ ತೈಲ್ ಸಂಸ್ಥೆಯ ರಾಘವೇಂದ್ರ ಇದ್ದರು.
ಚಂದ್ರಕಾಂತ ಮೋಟೆಪ್ಪಗೋಳ ಸ್ವಾಗತಿಸಿದರು, ಎ.ಜಿ. ಕೋಳಿ ನಿರೂಪಿಸಿದರು, ಸಂತೋಷ ಕನವಳ್ಳಿ ವಂದಿಸಿದರು.
ಬಹುಮಾನಗಳ ವಿಜೇತರು: ಕಳೆದ ಜನವರಿ ತಿಂಗಳದಲ್ಲಿ ಜರುಗಿದ ಹಬ್ಬದ ಧಮಾಕಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಗ್ರಾಹಕರು. ಪ್ರಥಮ ಬಹುಮಾನ ಹೋಂಡಾ ಅಮೇಜ್ ಕಾರು ಮಾರಾಪುರದ ಮಹಾದೇವ ಧರ್ಮಟ್ಟಿ ಅವರಿಗೆ ದೊರೆಯಿತು. ದ್ವಿತೀಯ ಬಹುಮಾನ ಬಜಾಜ್ ಬೈಕ್‍ವು ವಡೇರಹಟ್ಟಿಯ ವಿಠ್ಠಲ ಕ್ಯಾಸ್ತಿ, ತೃತೀಯ ಬಹುಮಾನ ರೆಪ್ರಿಜರೇಟರ್ ನಾಗನೂರಿನ ಕೆ.ಟಿ. ಅಂಗಡಿ ಹಾಗೂ ನಾಲ್ಕನೇ ಬಹುಮಾನ ಬೈಸಿಕಲ್‍ವು ನಾಗನೂರದ ತುಕಾರಾಮ ಸುಣಗಾರ ಅವರಿಗೆ ಲಭಿಸಿತು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ