Breaking News
Home / Recent Posts / ನಾಗನೂರ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

ನಾಗನೂರ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

Spread the love

ನಾಗನೂರ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

ಅಧ್ಯಕ್ಷರಾಗಿ ಯರಗಣವಿ ಉಪಾಧ್ಯಕ್ಷರಾಗಿ ಕಾತ್ತೇನವರ ಆಯ್ಕೆ

ಮೂಡಲಗಿ: ತಾಲ್ಲೂಕಿನ ನಾಗನೂರ ಪಟ್ಟಣ ಪಂಚಾಯತಿಗೆ ಸೋಮವಾರ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರ ಮಧ್ಯೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವ ಮಲ್ಲಗೌಡ ಯರಗಣವಿ ಮತ್ತು ಉಪಾಧ್ಯಕ್ಷರಾಗಿ ಸುಭಾಸ ಕಲ್ಲೋಳೆಪ್ಪ ಕಾತ್ತೇನವರ ಅಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್.ಸಿ ಪುರುಷ ಮೀಸಲ್ಲಾಗಿತು. ಅಧ್ಯಕ್ಷ ಸ್ಥಾನಕ್ಕೆ ಚಂದ್ರವ್ವ ಮಲ್ಲಗೌಡ ಯರಗಣವಿ, ಬಸಪ್ಪ ಗೌಡಪ್ಪ ತಡಸನ್ನವರ, ಪವಾಡಿ ಸಿದಪ್ಪ ಗೋಟೂರ ನಾಮ ಪತ್ರಸಲ್ಲಿಸಿದರು ಅದರಲ್ಲಿ ಪವಾಡಿ ಸಿದ್ದಪ್ಪ ಗೋಟೂರ ಅವರು ನಾಮ ಪತ್ರ ವಾಪಸ ಪಡೆದರಿಂದ ಅಧ್ಯಕ್ಷ ಸ್ಥಾನಕ್ಕೆ ಯರಗಣವಿ ಮತ್ತು ತಡಸನ್ನವರ ಇಬ್ಬರು ಖಣದಲ್ಲಿ ಉಳಿದದ್ದರು, ಚುನಾವಣೆಯಲ್ಲಿ ಇಬ್ಬರು ತಲಾ ಎಂಟು ಮತಗಳನು ಪಡೆದರು. ನಂತರ ಚೀಟಿ ಎತ್ತುವ ಪ್ರಕ್ರಿಯೇಯಲ್ಲಿ ಪಟ್ಟಣದ ಹಿರಿಯರಾದ ಬಸನಗೌಡ ಆರ್.ಪಾಟೀಲ ಬೆಂಬಲಿತ ಚಂದ್ರವ್ವ ಮಲ್ಲಗೌಡ ಯರಗಣವಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಕಲ್ಲೋಳೆಪ್ಪ ಕಾತ್ತೇನವರ ಒಬ್ಬರೆ ನಾಮ ಪತ್ರಸಲ್ಲಿಸಿದರಿಂದ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾಧಿಕಾರಿ ಮೂಡಲಗಿ ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ, ಸಹಾಯಕ ಚುನಾವಣಾಧಿಕಾರಿಯಾಗಿ ಬಾಲನಾಯ್ಕ ಕುಮರೇಶ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ನಾಗನೂರ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಚಂದ್ರವ್ವ ಮಲ್ಲಗೌಡ ಯರಗಣವಿ ಬೆಂಬಲಿಗರು ಗುಲಾಲ ಏರಚಿ ಪಟ್ಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ಸಮಯದಲ್ಲಿ ಪ.ಪಂ ಸದಸ್ಯರಾದ ಬಸವರಾಜ ಹಳೆಗೌಡ್ರ, ಲಕ್ಷ್ಮಣ ದಿನ್ನಿಮನಿ, ಜಯಶ್ರೀ ಮನ್ನಿಕೇರಿ, ಶಂಕರ ದಳವಾಯಿ, ಶೋಭಾ ಬಬಲಿ, ಲಕ್ಕವ್ವ ಮುತ್ತೇನ್ನವರ, ಮುಖಂಡರಾದ ಕೆಂಚಗೌಡ ಪಾಟೀಲ, ಪರಸಪ್ಪ ಬಬಲಿ, ಶಂಕರ ಹೊಸಮನಿ, ಮಲ್ಲಪ್ಪ ಹೊಸಮನಿ, ಬಸವರಾಜ ಕರಿಹೋಳಿ, ಸಿದ್ದಪ್ಪ ಯಾದಗೂಡ, ಸತ್ತೇಪ್ಪ ಕರವಾಡಿ, ಬಲವಂತ ಕರಬನ್ನವರ, ಯಮನ್ನಪ್ಪ ಕರಬನ್ನವರ, ಭೀಮನ ಹಳಿಗೌಡ್ರ, ಚನ್ನಗೌಡ ಪಾಟೀಲ, ಗಜಾನನ ಯರಗಣವಿ, ನಿಂಗಣ್ಣ ಯರಗಣವಿ, ಮುತ್ತಪ್ಪ ಮುತ್ತೇನವರ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ತಾಲ್ಲೂಕಿನ ನಾಗನೂರ ಪಟ್ಟಣ ಪಂಚಾಯತಿಗೆ ಸೋಮವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ