
ಮೂಡಲಗಿ: ಕ್ರೀಡಾಪಟುಗಳು ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಾಗ ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ. ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕವಾಗಿ ಬೆಳೆಯಬೇಕು . ಅಂದಾಗ ಮಾತ್ರ ಕ್ರೀಡೆಗೆ ಮೆರಗು ಬರುತ್ತದೆ ಜನ್ಮ ನೀಡಿದ ತಂದೆ ತಾಯಿ ಹಾಗೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು .ಕ್ರೀಡೆಯಲ್ಲಿ ಬೆಳೆಯುವುದರಿಂದ ಉತ್ತಮ ನಾಯಕರಾಗುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು .
ಅವರು ತಾಲ್ಲೂಕಿನ ನಾಗನೂರು ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ನಾಗನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ 14 ವರ್ಷದೊಳಗಿನ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಇಲಾಖೆಯ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು , ಗ್ರಾಮೀಣ ಭಾಗದ ಯುವಕ ಯುವತಿಯರು ಕ್ರೀಡೆ, ಸಾಂಸ್ಕೃತಿಕ, ಹಾಗೂ ಶೈಕ್ಷಣಿಕವಾಗಿ ಬೆಳೆಯುವುದರ ಜೊತೆಗೆ ದೇಶಿಯ ಕ್ರೀಡೆಗಳನ್ನು ಉಳಿಸಿ ಮುಂದಿನ ಯುವ ಪೀಳಿಗೆಗೆ ನಶಿಸದಂತೆ ಬೆಳೆಸಬೇಕೆಂದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಖೋ ಖೋ ಕ್ರೀಡೆಗೆ ಚಾಲನೆ ನೀಡಿ ಕ್ರೀಡೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಪ್ರಭಾ ಶುಗರ್ ನಿರ್ದೇಶಕ ಕೆಂಚನಗೌಡ ಪಾಟೀಲ ಹಾಗೂ ಖೋ ಖೋ ಅಸೋಸಿಯನ್ನ ಜಿಲ್ಲಾಧ್ಯಕ್ಷ ಗಜಾನನ ಯರಗಣವಿ ಸತ್ಕರಿಸಿದರು.
ಬಾಗಲಕೋಟಿ ಡಿಡಿಪಿಐ ಎ.ಸಿ ಮನ್ನಿಕೇರಿ,ನಾಗನೂರಿನ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಭಾ ಶುಗರ್ ನಿರ್ದೇಶಕ ಕೆಂಚನಗೌಡ ಪಾಟೀಲ, ಹಳ್ಯಾಳದ ಶಿವಲಿಂಗೇಶ್ವರ ಸ್ವಾಮೀಜಿ, ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಸಪ್ಪ ಬಬಲಿ, ಮಲ್ಲಪ್ಪ ಹೊಸಮನಿ, ಸುರೇಶ ಸಕ್ಕರೆಪ್ಪಗೋಳ, ಬೆಳಗಾವಿ ಜಿಲ್ಲಾ ಖೋ ಖೋ ಅಸೋಸಿಯೇಷನ ಜಿಲ್ಲಾಧ್ಯಕ್ಷ ಗಜಾನನ ಯರಗಣವಿ, ಚಿಕ್ಕೋಡಿ ಜಿಲ್ಲಾ ಡಿಪಿಓ ಜುನೇದಿ ಪಟೇಲ , ಟಿಪಿಓ ಎಸ್ ಬಿ ಹಳಿಗೌಡರ, ಗೋಕಾಕ ಟಿಪಿಓ ಎಲ್ ಕೆ ತೋರಣಗಟ್ಟಿ, ಬೆಳಗಾವಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜು ಹಿರೇಮಠ,ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಲ್ ಹೊಸಮನಿ, ಸಂಸ್ಥೆಯ ಕಾರ್ಯದರ್ಶಿ ಎಸ್ ಬಿ ಹೊಸಮನಿ, ನಿರ್ದೇಶಕರಾದ ಬಿ ಬಿ ಪಾಟೀಲ, ಎಲ್ ಬಿ ಸಕ್ರೆಪ್ಪಗೋಳ , ಬಿ ಎಂ ಬಂಡಿ, ಸಿ ಎ ಸಕ್ರೆಪ್ಪ ಗೋಳ, ಮುಖ್ಯ ಶಿಕ್ಷಕ ಎಸ್ ಬಿ ಕೇದಾರಿ, ಈರಣ್ಣ ಹಳಿಗೌಡರ, ಸಿ ಆರ್ ಪೂಜಾರಿ ಇದ್ದರು.
IN MUDALGI Latest Kannada News