Breaking News
Home / Recent Posts / ನಾಗನೂರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 11.74 ಲಕ್ಷ ರೂ ಲಾಭ

ನಾಗನೂರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 11.74 ಲಕ್ಷ ರೂ ಲಾಭ

Spread the love

ನಾಗನೂರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 11.74 ಲಕ್ಷ ರೂ ಲಾಭ

ಮೂಡಲಗಿ: ಶತಮಾನೋತ್ಸವ ಹಂಚಿನಲ್ಲಿರುವ ನಾಗನೂರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 2023-24ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 11.74 ಲಕ್ಷ ಲಾಭವನ್ನು ಗಳಿಸಿ ಸಂಘವು ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಕರಿಹೊಳಿ ಹೇಳಿದರು.
ತಾಲೂಕಿನ ನಾಗನೂರ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವಣದಲ್ಲಿ ಸಂಘದ 93ನೇ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 2468 ಸದಸ್ಯರನ್ನು ಹೊಂದಿ 1.74 ಕೋಟಿ ರೂ ಶೇರು ಬಂಡವಾಳ, 1.79 ಕೋಟಿ ರೂ ನಿಧಿಗಳು, 1.75 ಕೋಟಿ ರೂ ಗುಂತಾವಣೆಗಳು ಹೊಂದಿ, ಸದಸ್ಯರಿಗೆ 11.39 ಕೋಟಿ ರೂ ಸಾಲ ಮತ್ತು ಡಿ.ಸಿ.ಸಿ ಬ್ಯಾಂಕಿನಿಂದ 36.18 ಲಕ್ಷ ರೂ ಟ್ರ್ಯಾಕ್ಟರ ಸಾಲ ವಿತರಿಸಲಾಗಿದೆ ಎಂದರು.
ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸಲು ಸಂಘವು ಸಂಪೂರ್ಣ ಗಣಕೀಕರಣಗೊಂಡಿದ್ದು, ಸಂಘವು ಸಿಬ್ಬಂದಿಗಳ ಪರಿಶ್ರಮ ಮತ್ತು ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಹಾಗೂ ಗ್ರಾಹಕರು ಸಕಾಲದಲ್ಲಿ ವ್ಯವಹರಸಿದರಿಂದ ಸಂಘವು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದ ಅವರು ಸಂಘದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕರಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಮತ್ತು ಆಡಳಿತ ಮಂಡಳಿಯ ಹಾಗೂ ಅಧಿಕಾರಿ ವರ್ಗದವರು ಸಹಕಾರ ಮತ್ತು ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಪಟ್ಟಣದ ಸಹಕಾರಿ ಧುರಿಣ ಬಸನಗೌಡ ರಾ.ಪಾಟೀಲ ಅವರ ಮಾರ್ಗದರ್ಶಣದಲ್ಲಿ ಸಂಘವು ಪ್ರಗತಿ ಪಥÀದತ್ತ ಮುನ್ನಡೇಯುತ್ತಿದೆ ಎಂದು ಸ್ಮರಿಸಿದರು ಸಂಘದ ನಿರ್ದೇಶಕ ಮಹಾವೀರ ಮೆಳವಂಕಿ ಮಾತನಾಡಿ, ಸಂಘದ ಶೇರುದಾರಿಗೆ ಶೇ.2 ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಲಾಗಿದು, ಅಡಿಟ್‍ದಲ್ಲಿ ‘ಅ’ ಶ್ರೇಣಿಯನ್ನು ಪಡೆದುಕೊಂಡು ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡು ಬಂದಿದೆ ಎಂದರು.
ಸಂಘದ ಉಪಾಧ್ಯಕ್ತ ಸತ್ತೇಪ್ಪ ಕರವಾಡಿ, ಸದಸ್ಯರಾದ ಸುಭಾಸ ಸಕ್ರೆಪ್ಪಗೋಳ, ಮಲ್ಲಪ್ಪ ಹೊಸಮನಿ, ಕೆಂಪಣ್ಣಾ ಹಳಿಗೌಡ್ರ, ಶಂಕರ ದಳವಾಯಿ, ಭೀಮಪ್ಪ ಪಡದಲ್ಲಿ, ಬಸಪ್ಪ ಪಡದಲ್ಲಿ, ಕೆಂಪಣ್ಣಾ ತಡಸನವರ, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಸನಗೌಡ ಪಾಟೀಲ, ಮುಖಂಡರಾದ ಕೆಂಚಗೌಡ ಪಾಟೀಲ, ಶಂಕರ ಹೊಸಮನಿ, ಪರಸಪ್ಪ ಬಬಲಿ, ಗಜಾನನ ಯರಗಣವಿ, ಸಿದ್ದಪ್ಪ ಯಾದಗುಡ, ಅರುಣ ಕುಲಕರ್ಣಿ ಮತ್ತು ಸಂಘದ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತಿರಿದ್ದರು.
ಸಂಘದ ಸಿಬ್ಬಂದಿ ಎಸ್.ಎಸ್.ಪುಲಾರೆ ಸ್ವಾಗತಿಸಿದರು, ಮುಖ್ಯಕಾರ್ಯನಿರ್ವಾಹಕ ದುರದುಂಡಿ ಸಕ್ರೆಪ್ಪಗೋಳ ವಾರ್ಷಿಕ ವರದಿ ಮಂಡಿಸಿದರು, ಲಕ್ಕಪ್ಪ ಹೊಸಮನಿ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ